ಕಾಣಿಯೂರು ಬಳಿಯ ಬೈತಡ್ಕ ಮಸೀದಿ ಸಮೀಪದ ಸೇತುವೆಯಿಂದ ಕೆಳಗೆ ಕಾರೊಂದು ಬಿದ್ದ ಪ್ರಕರಣದಲ್ಲಿ ಬೈತಡ್ಕದ ಹೊಳೆಯಲ್ಲಿ ಇನ್ನೊಂದು ಮೃತದೇಹವೂ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತದೇಹದ ಗುರುತು ಪತ್ತೆಯಾಗಬೇಕಿದೆ. ಎರಡೂ ಮೃತದೇಹವೂ ಸುಮಾರು 50 ಮೀಟರ್ ದೂರದಲ್ಲಿ ಕಂಡುಬಂದಿದೆ.ಅಧಿಕಾರಿಗಳು, ಇಲಾಖೆಯ ಸಿಬಂದಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಪ್ರಕರಣದಲ್ಲಿ ವಿಟ್ಲ ಮೂಲದ ಧನುಷ್ ಹಾಗೂ ಕನ್ಯಾನ – ಮಂಜೇಶ್ವರದ ಧನುಷ್ ನಾಪತ್ತೆಯಾಗಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶನಿವಾರ ರಾತ್ರಿ ಕಾರು ಸೇತುವೆಯಿಂದ ಕೆಳಗೆ ಬಿದ್ದಿತ್ತು. ಭಾನುವಾರ ಕಾರು ಪತ್ತೆಯಾಗಿತ್ತು. ಆ ಬಳಿಕ ಇಬ್ಬರು ಯುವಕರು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ನಂತರ ಯುವಕರಿಗಾಗಿ ಹುಡುಕಾಟ ಆರಂಭವಾಗಿತ್ತು. ಸೋಮವಾರ ಕೂಡಾ ಹೊಳೆಯಲ್ಲಿ ಹಾಗೂ ಇತರ ಕಡೆಗಳಲ್ಲೂ ಹುಡುಕಾಟ ನಡೆಸಲಾಗಿತ್ತು.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…