ಕನ್ನಡ ಬರಿಯ ಭಾಷೆಯಲ್ಲ. ಅದು ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯಂತೆ, ಮಕರಂದವ ಹೀರಿ ಇನ್ನೇನು ತೆರಳಲು ಸಿದ್ಧವಾದ ದುಂಬಿಯ ಬಾಯಿಯಲ್ಲಿನ ಸವಿ ಜೇನಿನಂತೆ, ತಾಯಿಯೊಬ್ಬಳು ತನ್ನ ಮಗುವಿಗೆ ಹಾಲುಣಿಸುವಂತೆ ಕಾಣುವ, ಕೇಳುವ, ಅನುಭವಿಸುವ ಭಾವ. ಭಾವನೆಗಳ ಮೂಲಕ ಬಂಧಗಳು ಬೆಸೆಯುತ್ತವೆ.
ಅಂತೆಯೇ ಭಾಷೆಯ ಮೂಲಕ ಸಾಹಿತ್ಯ ಕೃಷಿ ಉದಯಿಸಿ ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಕನ್ನಡವೆಂಬುದು ನಿಂತ ನೀರಲ್ಲ.ಅದು ಹರಿವ ನಿಷ್ಕಲ್ಮಶ ಜಲ. ಎಲ್ಲಿಯವರೆಗೆ ಕನ್ನಡವನ್ನು ಅಪ್ಪಿಕೊಳ್ಳುವ,ಒಪ್ಪಿಕೊಳ್ಳುವವರಿರುತ್ತಾರೋ ಅಲ್ಲಿಯವರೆಗೂ ಕನ್ನಡ ಶಾಶ್ವತವಾಗಿರುತ್ತದೆ.
ಬಗೆದಷ್ಟು ಮೊಗೆಯದ ಕಲಿತಷ್ಟು ಮುಗಿಯದ ಸಿರಿಸಂಪತ್ತನ್ನು ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಕನ್ನಡಿಗನಿಗಿದೆ.ಭಾಷಾ ಪ್ರೇಮ ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಕನ್ನಡದ ಜಯಭೇರಿಯು ಪ್ರಚಂಡವಾಗಿ ಮೊಳಗಲಿ.ಕಸ್ತೂರಿ ಕನ್ನಡವು ಜನಮಾನಸದಲ್ಲಿ ರಾರಾಜಿಸಲಿ. ಕನ್ನಡಾಂಬೆಯ ಕೀರ್ತಿ ಉತ್ತುಂಗಕ್ಕೇರಲಿ.
ಬರಹ:
ಅನ್ನಪೂರ್ಣ ಎನ್ ಕುತ್ತಾಜೆ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel