ನಮ್ಮ ವೀರ ಯೋಧರಿಗೆ(Soldier) ಹೆಮ್ಮೆಯಿಂದ ಹೃದಯ ಪೂರ್ವಕ ಪ್ರಣಾಮಗಳನ್ನು ಸಮರ್ಪಣೆ ಗೈದು ಜೈ ಜವಾನ್(Jai jawan) ಅಂತ ಹೇಳೋಣ ಬನ್ನಿ.. ಇಂದು ನಮ್ಮ ದೇಶಕ್ಕಾಗಿ ಅನೇಕ ಸೈನಿಕರು ಪ್ರಾಣ ತ್ಯಾಗ ಮಾಡಿ ಯುದ್ಧ(War) ಗೆದ್ದ ದಿನ. ಜುಲೈ 26 ಕಾರ್ಗಿಲ್ ವಿಜಯ ದಿವಸ(Kargil Vijay Diwas). 1999 ರಲ್ಲಿ ಭಾರತ-ಪಾಕಿಸ್ತಾನದ( India – Pakistan) ನಡುವೆ ನಡೆದ ಯುದ್ಧದಲ್ಲಿ ಭಾರತ ದಿಗ್ವಿಜಯ(victory) ಸಾಧಿಸಿದ ದಿನ ಇದು. 1999 ರ ಮೇ ತಿಂಗಳಿನಿಂದ ಜುಲೈವರೆಗೆ ಸುಮಾರು 60 ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತದ 527 ಸೈನಿಕರು ಹತರಾಗಿದ್ದರು.
ಪಾಕಿಸ್ತಾನ ತನ್ನ 357 ಸೈನಿಕರು ಹತರಾಗಿದ್ದರೆಂದು ವರದಿ ನೀಡಿದ್ದರೂ, ಇದು ಸುಳ್ಳು ಎಂದು ಭಾರತ ತಳ್ಳಿಹಾಕಿತ್ತು. ಏಕೆಂದರೆ ಭಾರತೀಯ ಸೈನಿಕರೇ ಹೇಳುವ ಪ್ರಕಾರ ಪಾಕಿಸ್ತಾನದ ಕನಿಷ್ಠ 1 ಸಾವಿರ ಸೈನಿಕರು ಈ ಯುದ್ಧದಲ್ಲಿ ಹತರಾಗಿದ್ದರು.
ಜಮ್ಮು ಕಾಶ್ಮೀರದ ಲಡಾಕ್ ಜಿಲ್ಲೆಯಲ್ಲಿರುವ ಕಾರ್ಗಿಲ್ ನಲ್ಲಿ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿಯುವ ಕಾರ್ಯಾಚರಣೆಗೆ ಭಾರತ ಇಟ್ಟಿದ್ದ ಹೆಸರು ‘ಆಪರೇಷನ್ ವಿಜಯ’. ಅದಕ್ಕೆಂದೇ ಈ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ದಿನವಾದ ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಕರೆಯಲಾಗುತ್ತದೆ.
ಜುಲೈ 26, 1999, ಪಾಕಿಸ್ತಾನದೊಂದಿಗೆ ಕಾರ್ಗಿಲ್ ಸಂಘರ್ಷದಲ್ಲಿ ಭಾರತವು ಅದ್ಭುತ ಗೆಲುವು ಸಾಧಿಸಿತು. 1999 ರಿಂದ ಪ್ರತಿ ವರ್ಷ ಜುಲೈ 26 ನ್ನು “ಕಾರ್ಗಿಲ್ ವಿಜಯ್ ದಿವಸ್” ಎಂದು ಆಚರಿಸಲಾಗುತ್ತದೆ. ಯುದ್ಧದಲ್ಲಿ ಭಾರತದ ಜಯವನ್ನು ಈ ದಿವಸ ನಮ್ಮ ನೆನಪಿಗೆ ತರುತ್ತದೆ ಮತ್ತು ಭಾರತೀಯ ಸೈನಿಕ ಯೋಧರು ಮಾಡಿದ ತ್ಯಾಗವನ್ನು ನಾವು ನೆನಪಿಸಿಕೊಳ್ಳುತ್ತೇವೆ.
ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…
ಅಡಿಕೆ ಮಾರುಕಟ್ಟೆಯ ಇತ್ತೀಚಿನ ಕುಸಿತ ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಹಣದ ಹರಿವು…
ಕಾಂಪೌಂಡ್ ರಬ್ಬರ್ ಆಮದು ಕುರಿತು ಕಳೆದ 10 ವರ್ಷಗಳ ಅಂಕಿಅಂಶಗಳನ್ನು ಕೇಂದ್ರ ಸರ್ಕಾರ…
ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 357 ಮಿಲಿಯನ್ ಟನ್ ಆಹಾರಧಾನ್ಯ ಉತ್ಪಾದನೆಯಾಗಿ ಹೊಸ…
ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಹೋದರರು ತಮ್ಮ 10 ಎಕರೆ ಜಮೀನಿನಲ್ಲಿ…
ಅಡಿಕೆ ಬೆಳೆಗಾರರ ವಾಸ್ತವ ಪರಿಸ್ಥಿತಿಯನ್ನು ಅರಿಯಲು ದ ರೂರಲ್ ಮಿರರ್.ಕಾಂ ನಡೆಸಿದ ಸಮೀಕ್ಷೆಯಲ್ಲಿ…