ಹನುಮಂತನ ಸುದ್ದಿಗೆ ಬಂದಿದ್ದಕ್ಕೆ ಹೆಲಿಕಾಪ್ಟರ್ ಗ್ಲಾಸ್ ಪುಡಿಪುಡಿಯಾಗಿದೆ, ಮುಂದೆ ತಂಟೆಗೆ ಬಂದರೆ ಡಿಕೆ ಶಿವಕುಮಾರ್ ಅವರೇ ನೀವೂ ಪತನವಾಗಲಿದ್ದೀರಿ ಎಂದು ಬಿಜೆಪಿ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಕಿವಿಮಾತು ಹೇಳಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಇನ್ನೊಂದು ಸಲ ಹುಟ್ಟಿ ಬಂದರೂ ಬಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯ ಇಲ್ಲ. ಬಜರಂಗದಳದವರು ಭಯೋತ್ಪಾದಕರಲ್ಲ, ದೇಶ ವಿರೋಧಿ ಚಟುವಟಿಕೆ ಮಾಡುವುದಿಲ್ಲ. ಬಜರಂಗದಳ ಎಂದರೆ ಗಂಗಾವತಿ ಎಂದು ಯತ್ನಾಳ್ ಹೇಳಿದಾಗ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಅಲ್ಲದೆ, ಭಾರತದ ರಾಮ ಮೋದಿ, ಹನುಮ ಯೋಗಿ, ಲಕ್ಷ್ಮಣ ಅಮಿತ್ ಶಾ. ಬಜರಂಗದಳ ನಿಷೇಧ ಮಾಡೋರನ್ನು ತಿಹಾರ ಜೈಲಿಗೆ ಕಳುಹಿಸೋಣ ಎಂದು ಯತ್ನಾಳ್ ಹೇಳಿದರು.
ಭಾಷಣದುದ್ದಕ್ಕೂ ಯತ್ನಾಳ್ ಅವರು ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪ್ರಚಾರದಲ್ಲಿನ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಮಿಮಿಕ್ ಮಾಡುತ್ತಾ ಟಾಂಗ್ ಕೊಟ್ಟರು. ಕಾಂಗ್ರೆಸ್ ಸೋಲಿಸಲು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೇ ಸಾಕು. ರಾಹುಲ್ ಗಾಂಧಿ ಕಾಲಿಟ್ಟಲ್ಲಿ ಕಾಂಗ್ರೆಸ್ ಢಂ. ಇನ್ನು ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಹೋದಲ್ಲೆಲ್ಲಾ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರ ಭಾಷಣವನ್ನು ಯತ್ನಾಳ್ ಅವರು ಮಿಮಿಕ್ ಮಾಡಿದರು. “10 ಕೆಜಿ ಅಕ್ಕಿ ರೂಪಾಯಿ, ಸಂತೋಷ ಆಯ್ತಾ?, ಎಲ್ಲಾ ವೋಟ್ ಹಾಕುತ್ತೀರಲ್ಲ?, ನಿಮ್ಮ ಮನೆಯವರನ್ನೆಲ್ಲಾ ವೋಟ್ ಮಾಡಿಸುತ್ತೀರಲ್ವಾ?, ಹಾಗಾದರೆ ಬಿಜೆಪಿಗೆ ವೋಟ್ ಹಾಕಿ” ಎಂದು ಪ್ರಚಾರದ ವೇಳೆ ಸಿದ್ದರಾಮಯ್ಯ ಹೇಳುತ್ತಾರೆ. ತನ್ನನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಖಾತ್ರಿಯಾಗಿದೆ. ತಿಹಾರ್ ಜೈಲಿಗೆ ಹೋದವರನ್ನು (ಡಿಕೆ ಶಿವಕುಮಾರ್) ಸಿಎಂ ಮಾಡುತ್ತಾರೆ, ಯಾಕೆಂದರೆ ಸೋನಿಯಾ ಗಾಂಧಿಗೆ ದಿನಾಲು ಪೇಮೆಂಟ್ ಕೊಡಬೇಕಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ನಿರ್ಣಯ ಮಾಡಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನ ಗ್ಯಾರಂಟಿ ಘೋಷಣೆಗಳ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್, ಗ್ಯಾರಂಟಿ.. ಗ್ಯಾರಂಟಿ.. ಏನ್ ಗ್ಯಾರಂಟಿ? ಟಿಕೆಟ್ಗಾಗಿ 2ಲಕ್ಷ ತಗೊಂಡು ವಾಪಸ್ ಕೊಟ್ಟಿಲ್ಲ ಇವರು. ಒಂದೊಂದು ಕ್ಷೇತ್ರದಿಂದ 10-15 ಆಕಾಂಕ್ಷಿಗಳಿಗೆ ತಲಾ 2 ಲಕ್ಷ ಪಡೆದು ಕೊನೆಗೆ ಟಿಕೆಟ್ ನೀಡದಿದ್ದಾಗ ಹಣ ವಾಪಸ್ ಕೊಡಬೇಕಿತ್ತು. ಆದರೆ ಇವರು ಹಣವನ್ನೇ ವಾಪಸ್ ಕೊಟ್ಟಿಲ್ಲ. ಹೀಗಿದ್ದಾಗ ಇವರ ಗ್ಯಾರಂಟಿ ತಗೊಂಡು ನಾವೇನು ಮಾಡಬೇಕು ಎಂದು ವ್ಯಂಗ್ಯವಾಡಿದರು.
ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದು ಯತ್ನಾಳ್ ಹೇಳಿದ್ದರು. ಇದನ್ನು ಡಿಕೆ ಶಿವಕುಮಾರ್ ಖಂಡಿಸುವ ವೇಳೆ ಸೋನಿಯಾ ಗಾಂಧಿ ಅವರನ್ನು ತನ್ನ ತಾಯಿ ಸಂಬೋಧಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ಧಾಟಿಯಲ್ಲಿ ಮಾತನಾಡಿದ ಯತ್ನಾಳ್, “ಮಿಸ್ಟರ್ ಯತ್ನಾಳ್, ನೀವು ನನ್ನ ತಾಯಿಗೆ ಬೈದಿದ್ದೀರಿ” ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ, ಅವರಿಗೆ ಸೋನಿಯಾ ತಾಯಿ ಹೇಗೆ ಆಗುತ್ತಾರೆ? ನಿಮ್ಮ ತಾಯಿ ಕನಕಪುರದಲ್ಲಿದ್ದಾರೆ ಗೌರವ ಕೊಡೋಣ ಎಂದರು
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…