ಚುನಾವಣೆ ಘೋಷಣೆಯ ಹೊತ್ತಿಗೆ ಹಲವು ಸಂಸ್ಥೆಗಳು ಸಮೀಕ್ಷೆ ನಡೆಸಿವೆ. ಇದೀಗ ಸ್ಮಾಲ್ ಬಾಕ್ಸ್ ಇಂಡಿಯಾ ಎನ್ನುವ ಸ್ವತಂತ್ರ ಸಂಸ್ಥೆಯೊಂದು ಚುನಾವಣಾ ಸಮೀಕ್ಷೆ ನಡೆಸಿದ್ದು ಈ ಬಾರಿ ಕಾಂಗ್ರೆಸ್ 118-129 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. ಬಿಜೆಪಿ 65-7- , ಜೆಡಿಎಸ್ 28-32 ಹಾಗೂ ಇತರರು 1-3 ಸ್ಥಾನಗಳನ್ನು ಗೆಲ್ಲಬಹುದು ಎಂದು ಸ್ಮಾಲ್ ಬಾಕ್ಸ್ ಹೇಳಿದೆ.
Karnataka opinion polls assembly 2023 ( Total – 224 )
AdvertisementCongress – 118-129
BJP – 65-70 seats
AdvertisementJDS – 28-32 seats
Others – 1-3 seats#KarnatakaAssemblyElection2023
Advertisement— Small Box India (@SmallBoxIndia) March 30, 2023
ಸ್ಮಾಲ್ ಬಾಕ್ಸ್ ಇಂಡಿಯಾ ಸ್ವತಂತ್ರ ಸಂಸ್ಥೆಯಾಗಿದ್ದು ತನ್ನದು ಲಾಭರಹಿತ ಸಂಸ್ಥೆ ಎಂದು ಟ್ವಿಟ್ಟರ್ ನಲ್ಲಿ ಹೇಳಿದೆ. ಈಗಾಗಲೇ, ಗುಜರಾತ್ ನಲ್ಲಿ ಬಿಜೆಪಿ, ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಮೀಕ್ಷೆಯಲ್ಲೇ ಹೇಳಿದ್ದೇವೆ ಎಂದು ಈ ಸಂಸ್ಥೆ ತನ್ನ ಟ್ವಿಟ್ಟರ್ ಮೂಲಕ ಹೇಳಿದೆ. ಇದೀಗ ಕರ್ನಾಟಕದಲ್ಲೂ ಸಮೀಕ್ಷೆ ನಡೆಸಿದ್ದು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತ್ಯಧಿಕ ಸ್ಥಾನಗಳು ಲಭಿಸಲಿವೆ. ಬಹುಮತ ಮೂಲಕ ಕಾಂಗ್ರೆಸ್ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿದೆ.ಕಾಂಗ್ರೆಸ್ 118-129 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ. ಬಿಜೆಪಿ 65-7- , ಜೆಡಿಎಸ್ 28-32 ಹಾಗೂ ಇತರರು 1-3 ಸ್ಥಾನಗಳನ್ನು ಗೆಲ್ಲಬಹುದು ಎಂದು ಸ್ಮಾಲ್ ಬಾಕ್ಸ್ ಹೇಳಿದೆ.
ಈಚೆಗೆ ನಡೆದ ಎಬಿಪಿ-ಸಿ ವೋಟರ್ ಸಮೀಕ್ಷೆಯಲ್ಲಿ ಕೂಡಾ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರೆ ಜೀ ನ್ಯೂಸ್ ಮಾತ್ರಾ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ.