ರಾಜ್ಯದ ಅಡಿಕೆ ಬೆಳೆಯಲ್ಲಿ ಕಂಡು ಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣಾ ಚಟುವಟಿಕೆಗಳನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದು…!, ಪುನಃ ಸ್ಮಾರ್ಟ್ ಸೆಂಟೆನ್ಸ್ ಹಾಕಿ ಚೆಂಡನ್ನು ಕೇಂದ್ರದ ಅಂಗಳಕ್ಕೆ ಒದೆಯಲಾಗಿದೆ!. ಮಲೆನಾಡಿನ ಕೃಷಿಕ ಅರವಿಂದ್ ಸಿಗದಾಳ್, ಮೇಲುಕೊಪ್ಪ ಅವರು ಬಜೆಟ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದ ತುಂಬಾ ಕ್ರಿಟಿಕಲ್ ಪರಿಸ್ಥಿತಿಯಲ್ಲಿ “ಆಸ್ಪತ್ರೆಯಲ್ಲಿ ಏನೂ ಮಾಡಕಾಗಲ್ಲ, ಡಿಸ್‌ಚಾರ್ಜ್ ಮಾಡಿ ಮನೆಗೆ ಕರ್ಕೊಂಡು ಹೋಗಿ. ಇನ್ನೆಷ್ಟು ದಿನ ಇರ್ತಾರೆ ಅಂತ ಹೇಳೋಕಾಗಲ್ಲ. ದೇವರ ಮೇಲೆ ಬಾರ ಹಾಕಿ ಪ್ರಾರ್ಥನೆ ಮಾಡಿ.” ಅಂತಾರಲ್ಲ ಹಾಗೆ!!!.
ಸ್ಟೇಟ್ ಡಾಕ್ಟರ್, ಸೆಂಟ್ರಲ್ ಸರ್ಜನ್ ಇಬ್ಬರೂ ಅಡಿಕೆ ಎಲೆ ಚುಕ್ಕಿ, ಹಳದಿ ರೋಗದ ಬಗ್ಗೆ ಪರೋಕ್ಷವಾಗಿ ಅಂತಿಮ ತೀರ್ಮಾನ ಹೇಳಿಯಾಗಿದೆ. ಮಲೆನಾಡು-ಕರಾವಳಿಗಳಲ್ಲಿ ರೋಗಿಷ್ಟ ಅಡಿಕೆಯ ಮಾನ-ಪ್ರಾಣ ಎರಡೂ ಕೊನೇ ಉಸಿರನ್ನು ಎಣಿಸುತ್ತಿವೆ. ಬಅಡಿಕೆ ತೋಟಗಳ ಒಂದೆರಡು ಫೋಟೋ ತೆಗೆದು ಇಟ್ಕೊಂಡಿರಿ..!. ಸಂಬಂಧಿಕರಿಗೆಲ್ಲ ವಿಷಯ ತಿಳಿಸಿರಿ!.
ಹೀಗೆ ಆಗಿದೆ ಮಲೆನಾಡು ಹಾಗೂ ಕರಾವಳಿಯ ಅಡಿಕೆ ಬೆಳೆಗಾರ ಸ್ಥಿತಿ. ಅಡಿಕೆ ಬೆಳೆಗಾರರಿಗೆ ರಾಜ್ಯದಿಂದಲೂ, ಕೇಂದ್ರದಿಂದಲೂ ಸೂಕ್ತವಾದ ನ್ಯಾಯ ದೊರೆಯುತ್ತಿಲ್ಲ.
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…