ಸುದ್ದಿಗಳು

ಸಿಇಟಿ ಫಲಿತಾಂಶ ಪ್ರಕಟ, ಬಾಲಕಿಯರದ್ದೇ ಮೇಲುಗೈ : ರಿಸಲ್ಟ್ ಚೆಕ್‌ ಮಾಡಲು ಇಲ್ಲಿದೆ ಲಿಂಕ್

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮುಂಮದಿನ ಭವಿಷ್ಯ ಕಟ್ಟಿಕೊಳ್ಳಲು ಚಾತಕ ಪಕ್ಷಿಯಂತೆ ಎದೆ ಹಿಡಿದುಕೊಂಡು ಕಾಯುತ್ತಿದ್ದ ವಿದ್ಯಾರ್ಥಿಗಳ ಸಿಇಟಿ ಫಲಿತಾಶ ಿಂದು ಪ್ರಕಟಗೊಂಡಿದೆ. 2023-24ನೇ ಸಾಲಿನ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯ ಫಲಿತಾಂಶ (KCET Results) ಪ್ರಕಟವಾಗಿದೆ. ಇಂದು(ಜೂನ್ 15) ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್​ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಸಿಇಟಿಯಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 10 ಜನ ವಿಧ್ಯಾರ್ಥಿ ಗಳು ಟಾಪಾರ್ ಬಂದಿದ್ದು, ಇಂಜಿನಿಯರಿಂಗ್ ವಿಭಾಗದಲ್ಲಿ​ ವಿಘ್ನೇಶ್​ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಇವರು ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಕಳಿಸಿದ್ದು, ಸಿಟಿಇಯಲ್ಲಿ 96.111 ಅಂಕ ಪಡೆಯುವುದರೊಂದಿಗೆ ಒಟ್ಟು 97.111 ಪರ್ಸೆಂಟೇಜ್ ಮಾಡಿದ್ದಾರೆ. ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ​ ಇನ್ನು ತೃತೀಯ  ಸ್ಥಾನವನ್ನು ಮೃದ್ಧ್​ ಶೆಟ್ಟಿ ಹಾಗೂ ಎಸ್.ಸುಮೇಧ್​ಗೆ 4ನೇ ಸ್ಥಾನ ಪಡೆದುಕೊಂಡಿದ್ದರೆ, ಮಾಧವ ಸೂರ್ಯಗೆ 5ನೇ ಸ್ಥಾನ ಲಭಿಸಿದೆ.

  • ಇಂಜಿನಿಯರಿಂಗ್ ಕೋರ್ಸಿಗೆ- 2,03,381
  • ಕೃಷಿ ವಿಜ್ಞಾನ ಕೋರ್ಸಿಗೆ- 1,64,187
  • ಪಶುಸಂಗೋಪನೆ- 166756
  • ಯೋಗ ಮತ್ತು ನ್ಯಾಚುರೋಪತಿ ಗೆ- 2,06191
  • ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340
  • ನರ್ಸಿಂಗ್ ಕೋರ್ಸಿಗೆ – 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ

ನ್ಯಾಚೂರೋಪತಿ ಟಾಪರ್​

ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾ ಟಾಪ್ ಆಗಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಲಜಿನ ವಿದ್ಯಾರ್ಥಿನಿಯಾಗಿರುವ ಪ್ರತೀಕ್ಷಾ, 98.661 ಅಂಕ ಪಡೆದು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾಳೆ.

ಕೃಷಿ ವಿಜ್ಞಾನ ವಿಭಾಗದಲ್ಲಿ ಬೈರೇಶ್​ಗೆ ಮೊದಲ ರ್ಯಾಂಕ್

ಅಗ್ರಿಕಲ್ಚರ್(ಕೃಷಿ ವಿಜ್ಞಾನ )ವಿಭಾಗದಲ್ಲಿ ಬೈರೇಶ್ ಎಸ್ ಎಚ್ ಮೊದಲ ರ್ಯಾಂಕ್ ಪಡೆದುಕೊಂಡಿದ್ದಾರೆ. ಮಂಗಳೂರಿ ಎಕ್ಸ್ ಪರ್ಟ್ ಯುನಿವರ್ಸಿಟಿ ಕಾಲೇಜ್ ವಿದ್ಯಾರ್ಥಿಯಾಗಿರುವ ಬೈರೇಶ್, ಕ್ವಾಲಿಫಿಕೇಷನ್​ನಲ್ಲಿ 99.75 ಅಂಕ, ಸಿಟಿಟಿಯಲ್ಲಿ 93.75 ಅಂಕ ಪಡೆದು ಮೊದಲ ರ್ಯಾಂಕ್ ಪಡೆದಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 20 ಹಾಗೂ 21ರಂದು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುಸಂಗೋಪನೆ, ಯೋಗ, ನ್ಯಾಚುರೋಪತಿ, ಡಿ ಫಾರ್ಮ ಕೋರ್ಸ್​ ಹಾಗೂ ಬಿಎಸ್ಸಿ ನರ್ಸಿಂಗ್​ಗೆ ಪ್ರವೇಶ ಪರೀಕ್ಷೆ ನಡೆಸಿತ್ತು. ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

karresults.nic.in ಹಾಗೂ cetonline.karnataka.gov.in ವೆಬ್​ಸೈಟ್​ನಲ್ಲಿ ಬೆಳಗ್ಗೆ 11 ಗಂಟೆ ನಂತರ ಫಲಿತಾಂಶ ಲಭ್ಯವಾಗಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

7 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ

ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…

16 hours ago

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

23 hours ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

1 day ago