ಕನಕಪುರ ಒಂದೇ ಕ್ಷೇತ್ರದಿಂದ ಡಿಕೆ ಸಹೋದರರು ನಾಮಪತ್ರ ಸಲ್ಲಿಸಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್, ಚುನಾವಣೆ ಸಮಯದಲ್ಲಿ ಡಿಕೆ ಶಿವಕುಮಾರ್ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುವ ಮೂಲಕ ಬಿಜೆಪಿ ಕುತಂತ್ರ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಸಿಎಂ, ನಾಮಪತ್ರವನ್ನು ಬಿಜೆಪಿ ಪರಿಶೀಲನೆ ಮಾಡುವುದಿಲ್ಲ. ಚುನಾವಣಾ ಆಯೋಗ ಪರಿಶೀಲನೆ ನಡೆಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಡಿಕೆ ಸುರೇಶ್ ಹೇಳಿದ್ದೇನು? : ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಡಿಕೆಶಿ ನಾಮಪತ್ರವನ್ನು ತಿರಸ್ಕರಿಸುವ ಸಾಧ್ಯತೆಯಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಚೆನ್ನೈ ಐಟಿ ಅಧಿಕಾರಿಗಳು ಖುದ್ದು ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಆದರೆ ಚುನಾವಣೆ ಇರುವುದರಿಂದ ಇನ್ನೂ ಒಂದು ತಿಂಗಳು ಯಾವುದೇ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಉತ್ತರಿಸಲಾಗಿದೆ. ಹೀಗಿದ್ದರೂ ಕೊನೆ ಕ್ಷಣದಲ್ಲಿ ನಮ್ಮ ವಿರುದ್ಧ ಕುತಂತ್ರ ನಡೆಸುವ ಸಾಧ್ಯತೆ ಇದೆ. ಹಾಗಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ.
ಡಿಕೆ ಶಿವಕುಮಾರ್ ಹೇಳಿದ್ದೇನು? : ಡಿಕೆ ಸುರೇಶ್ ಯಾಕೆ ನಾಮಪತ್ರ ಸಲ್ಲಿಸಬಾರದು? ನಮ್ಮದು ನೂರಾರು ರಾಜಕೀಯ ಲೆಕ್ಕಾಚಾರ ಇರುತ್ತದೆ. ಬಿಜೆಪಿಗರ ಕುತಂತ್ರಕ್ಕೆ ಉತ್ತರ ಕೊಡುತ್ತೇವೆ. ನನ್ನ ಆಸ್ತಿ ವಿವರವನ್ನು ಐದು ಸಾವಿರ ಜನ ಡೌನ್‍ಲೋಡ್ ಮಾಡಿದ್ದಾರೆ. ಅದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ, ನಾಡಿದ್ದುವರೆಗೂ ಕಾದು ನೋಡಿ ಎಲ್ಲ ಗೊತ್ತಾಗಲಿದೆ.
ಬೊಮ್ಮಾಯಿ ಹೇಳಿದ್ದೇನು?: ಡಿಕೆ ಶಿವಕುಮಾರ್ ಮಾಡಿರುವ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ನಾಮಪತ್ರ ಎಲ್ಲವೂ ಕಾನೂನು ಪ್ರಕಾರ ಇದ್ದರೆ ಯಾಕೆ ಭಯಪಡಬೇಕು? ರಾಜಕೀಯವಾಗಿ ಕಾಂಗ್ರೆಸ್‌ನವರಲ್ಲಿ ಎಷ್ಟು ಅಸ್ಥಿರತೆ ಇದೆ ಎನ್ನುವುದು ಇದರಲ್ಲಿ ತೋರಿಸುತ್ತದೆ. ನಾಮಪತ್ರ ತಿರಸ್ಕರಿಸುವುದು ಬಿಜೆಪಿಯದ್ದಲ್ಲ. ಚುನಾವಣಾ ಆಯೋಗ ಈ ಕೆಲಸ ಮಾಡುತ್ತದೆ. ಆಂತರಿಕ ಭಯದ ಹಿನ್ನೆಲೆಯಲ್ಲಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಸಿಟಿ ರವಿ ಹೇಳಿದ್ದೇನು? :ಕನಕಪುರದಲ್ಲಿ ದೊಡ್ಡಣ್ಣ-ದೊಡ್ಡಣ್ಣ ಯಾರೇ ನಿಂತರು ಎದುರಿಸುತ್ತೇವೆ. ಕುತಂತ್ರದಲ್ಲಿ ಅವರು ಎಕ್ಸ್‌ಪರ್ಟ್. ನಾವು ಮಾಡುವ ಅಗತ್ಯವೇ ಇಲ್ಲ. ಕುತಂತ್ರ ಮಾಡಲು ಕಾಂಗ್ರೆಸ್ ಪಕ್ಷದಲ್ಲಿ ಬಹಳ ಜನ ಇದ್ದಾರೆ. ಅವರು ನಮ್ಮ ಬಗ್ಗೆ ಭಯ ಪಡುವುದು ಬೇಡ. ಬಹುಶಃ ಅವರಿಗೆ ಯಾವ ಭಯ ಆಗುತ್ತಿದೆಯೋ ಗೊತ್ತಿಲ್ಲ. ಅಲ್ಲೊಂದು ಇಲ್ಲೊಂದು ದಾಖಲೆ ಸಲ್ಲಿಸಿ ನಾಮಪತ್ರ ತಿರಸ್ಕೃತವಾಗುವ ಭಯ ಕಾಡುತ್ತಿದೆಯೋ ಏನೋ?
ಒಟ್ಟಾರೆ ಕನಕಪುರ ರಣರಂಗದಲ್ಲಿ ಡಿ.ಕೆ.ಸಹೋದರರು ತೊಡೆತಟ್ಟಿ ನಿಂತಿದ್ದು ಕೊನೆಗೆ ಕ್ಷಣದಲ್ಲಿ ಯಾರು ಉಳಿಯುತ್ತಾರೆ ಎಂಬುದು ಕುತೂಹಲಕರವಾಗಿದೆ.
ಶನಿವಾರ ಸಂಜೆ 5 ಗಂಟೆಗೆ ಆರಂಭವಾದ ತೀವ್ರ ಘರ್ಷಣೆಗಳ ನಂತರ ಭಾರತ ಮತ್ತು…
ಪೆಹಲ್ಗಾಮ್ ಭಯೋತ್ಪಾದಕರ ವಿರುದ್ಧ ಪ್ರಧಾನಿ ನರೇಂದ್ರಮೋದಿಯವರು ತೆಗೆದುಕೊಂಡಿರುವ ಕಠಿಣ ಕ್ರಮವನ್ನು ಸಂಪೂರ್ಣ ಬೆಂಬಲಿಸುವುದಾಗಿ…
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜದ ಚಟ್ನಿ ಪುಡಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್. (ಒಣಗಿಸಿದ ಹಲಸಿನ…
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…