ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇದಿಯಾ..?: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

May 4, 2023
8:40 PM

ಬಜರಂಗದಳ ನಿಷೇಧಕ್ಕೆ ಧೈರ್ಯ ಮಾಡುವವರಿಗೆ ಬಜರಂಗದಳದ ಶಕ್ತಿ ತೋರಿಸಲೇಬೇಕು ಎಂದು ಕಾಂಗ್ರೆಸ್‌ ವಿರುದ್ಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌  ಹರಿಹಾಯ್ದರು. ಟಿಳಕಚೌಕನಲ್ಲಿ ಉತ್ತರ ಕ್ಷೇತ್ರದಲ್ಲಿ ನಡೆದ ಬಿಜೆಪಿ  ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಪ್ರಸ್ತಾಪ ಮಾಡಿದೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಹೇರುತ್ತೇವೆ ಎಂದು ಹೇಳಿದೆ. ಆದರೆ ಬಜರಂಗದಳ ನಿಷೇಧಿಸಲು ನಿಮ್ಮಪ್ಪನ ಬಳಿ ತಾಕತ್ ಇದೆಯಾ? ಯಾವನ ಅಪ್ಪನಿಗಾದರೂ ಧೈರ್ಯ ಇದೆಯಾ? ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ? ಬಜರಂಗದಳ ನಿಷೇಧ ಮಾಡ್ತೀವಿ ಅಂದ್ರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಕ್ಷದ ನಿಯತ್ತು ಹೇಗಿದೆ ಗೊತ್ತಾ?. ರಾಮಸೇತು ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ರಾಮ ಕಾಲ್ಪನಿಕ ಎಂದು ಅಫಿಡೆವಿಟ್ ಸಲ್ಲಿಸಿದರು. ರಾಮನ ಅಸ್ತಿತ್ವ ಪ್ರಶ್ನಿಸುವ ಪಕ್ಷ ಒಂದೆಡೆ, ರಾಮಮಂದಿರ ಸ್ಥಾಪನೆ ಮಾಡುತ್ತಿರುವ ಪಕ್ಷ ಒಂದೆಡೆಯಾಗಿದೆ. ಬಜರಂಗಳ ಬ್ಯಾನ್ ಮಾಡಲು ತಾಕತ್ತಿದ್ದೇಯೇ ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ‌ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಜರಂಗದಳ ನಿಷೇಧ ಮಾಡಲು ಆಗಲ್ಲ. ಅಂದು ರಾಮನನ್ನು ವಿರೋಧಿಸಿದವರು ಇಂದು ಹನುಮನನ್ನು ವಿರೋಧಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣ, ಬಜರಂಗಿ ನಮ್ಮ ಹಿಂದೂ ಸಂಸ್ಕೃತಿಯ ಅಸ್ಮಿತೆಯಾಗಿದೆ. ‌ರಾಮನ ಅಸ್ತಿತ್ವ ಬಗ್ಗೆ ಮಾತನಾಡುವವರಿಗೆ ಮತದಾನ ವೇಳೆ ತಕ್ಕಪಾಠ ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ, ಶಂಕರಗೌಡ ಪಾಟೀಲ,‌ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ್‌ ಭಾಗಿಯಾಗಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ
October 15, 2026
10:10 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
October 14, 2026
2:38 PM
by: ಸಾಯಿಶೇಖರ್ ಕರಿಕಳ
ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror