ಸಿಎಂ ಆಯ್ಕೆ ಕಸರತ್ತು | ಈ ಮಧ್ಯೆ ನೂತನ ಸಚಿವರ ಶಾರ್ಟ್ ಲಿಸ್ಟ್ ರೆಡಿ | ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

May 16, 2023
10:39 AM

ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿನ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಶುರುವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ  ಅವರೊಂದಿಗೆ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.

Advertisement
Advertisement
Advertisement

ನೂತನ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಕೆಲ ಸೂತ್ರಗಳನ್ನು ಸಿದ್ಧಪಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್‌ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್‌ ಕನುಗೋಲು ಸೇರಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸರಿಯಾಗಿ ಕಾರ್ಯನಿರ್ವಹಿಸದವರಿಗೆ ಸ್ಥಾನ ನೀಡಬಾರದು, ಈ ಬಾರಿ ಉತ್ತಮ ಸರ್ಕಾರ ನೀಡಬೇಕು ಎಂದು ಚರ್ಚೆ ನಡೆದಿದ್ದು,  ಯುವ ಶಾಸಕರಿಗೆ ಹೆಚ್ಚಿನ ಅವಕಾಶ, ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಂಪುಟ ರಚನೆ, ಪ್ರಣಾಳಿಕೆ ಸಮರ್ಥವಾಗಿ ಜಾರಿ ಮಾಡುವವರಿಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ.

Advertisement

ಸದ್ಯ ಸಂಭಾವ್ಯ ಸಚಿವರ ಪಟ್ಟಿ

  • ಬೆಳಗಾವಿ – ಲಕ್ಷ್ಮಣ್ ಸವಧಿ, ಲಕ್ಷ್ಮೀ ಹೇಬ್ಬಾಳ್ಕರ್, ಸತೀಶ್ ಜಾರಕಿಹೊಳಿ
  • ಬಾಗಲಕೋಟೆ – ಆರ್.ಬಿ.ತಿಮ್ಮಾಪುರ
  • ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್
  • ಕಲಬುರಗಿ – ಪ್ರಿಯಾಂಕ್‌ ಖರ್ಗೆ, ಅಜಯ್‌ ಸಿಂಗ್, ಶರಣ ಪ್ರಕಾಶ್ ಪಾಟೀಲ್
  • ರಾಯಚೂರು – ಬಸನಗೌಡ ತುರುವಿಹಾಳ/ಹಂಪನಗೌಡ ಬಾದರ್ಲಿ
  • ಯಾದಗಿರಿ – ಶರಣಪ್ಪ ದರ್ಶನಾಪುರ್
  • ಬೀದರ್ – ರಹೀಮ್‌ ಖಾನ್, ಈಶ್ವರ್‌ ಖಂಡ್ರೆ
  • ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ
  • ಗದಗ – ಎಚ್‌.ಕೆ. ಪಾಟೀಲ್
  • ಧಾರವಾಡ – ವಿನಯ್‌ ಕುಲಕರ್ಣಿ, ಪ್ರಸಾದ್‌ ಅಬ್ಬಯ್ಯ/ಸಂತೋಷ್ ಲಾಡ್
  • ಉತ್ತರ ಕನ್ನಡ – ಭೀಮಣ್ಣ ನಾಯಕ್
  • ಹಾವೇರಿ – ರುದ್ರಪ್ಪ ಲಮಾಣಿ
  • ಬಳ್ಳಾರಿ – ತುಕಾರಾಮ್‌, ನಾಗೇಂದ್ರ
  • ಚಿತ್ರದುರ್ಗ – ರಘುಮೂರ್ತಿ
  • ದಾವಣಗೆರೆ – ಶಾಮನೂರು ಶಿವಶಂಕರಪ್ಪ/ ಎಸ್​ಎಸ್​ ಮಲ್ಲಿಕಾರ್ಜುನ
  • ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್
  • ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ
  • ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ
  • ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ
  • ಕೋಲಾರ- ರೂಪ ಶಶೀಧರ್​/ನಾರಾಯಣ ಸ್ವಾಮೀ
  • ಬೆಂಗಳೂರು- ಕೆಜೆ ಜಾರ್ಜ್​/ ರಾಮಲಿಂಗಾ ರೆಡ್ಡಿ, ಹ್ಯಾರಿಸ್​, ಎಂ. ಕೃಷ್ಣಪ್ಪ, ದಿನೇಶ್​ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್
  • ಮಂಡ್ಯ- ಎನ್​​ ಚೆಲುವರಾಯ ಸ್ವಾಮಿ
  • ಮಂಗಳೂರು- ಯುಟಿ ಖಾದರ್
  • ಮೈಸೂರು-ಎಚ್​ಸಿ ಮಾಹದೇವಪ್ಪ/ ತನ್ವೀರ್​ ಸೇಠ್
  • ​ಚಾಮರಾಜನಗರ- ಪುಟ್ಟರಂಗಶೆಟ್ಟಿ
  • ಕೊಡಗು- ಎಎಸ್​ ಪೊನ್ನಣ್ಣ
  • ಬೆಂಗಳೂರು ಗ್ರಾಮಾಂತರ. ಕೆ ಎಚ್​​ ಮುನಿಯಪ್ಪ

ವಿಧಾನ ಪರಿಷತ್‌ನಿಂದ ಸಂಪುಟಕ್ಕೆ ಸಂಭಾವ್ಯ ಅಭ್ಯರ್ಥಿಗಳು

  • ಬಿ.ಕೆ. ಹರಿಪ್ರಸಾದ್
  • ಸಲೀಂ ಅಹಮದ್
  • ನಜೀರ್‌ ಅಹಮದ್
  • ಮಂಜುನಾಥ್‌ ಬಂಡಾರಿ
  • ದಿನೇಶ್‌ ಗೂಳಿಗೌಡ
  • ಎಸ್. ರವಿ

ಒಟ್ಟಿನಲ್ಲಿ ಸಿಎಂ ಆಯ್ಕೆ ಬೆನ್ನಲ್ಲೇ ಸಚಿವ ಸಂಪುಟ ರಚನೆ ದೊಡ್ಡ ಸವಾಲ್​ ಆಗಿದ್ದು, ಯಾವ ರೀತಿಯಾಗಿ ಸಚಿವ ಸ್ಥಾನ ಹಂಚಿಕೆ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ
Karnataka Weather | 27-03-2024 | ರಾಜ್ಯದಲ್ಲಿ ಒಣ ಹವೆ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
March 27, 2024
12:49 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror