Advertisement
MIRROR FOCUS

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

Share

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌ ಸದಸ್ಯರುಗಳಾದ ಕಿಶೋರ್‌ ಕುಮಾರ್‌ ಪುತ್ತೂರು ಹಾಗೂ ಕುಶಾಲಪ್ಪ ಮತ್ತು ಕೇಶವ ಪ್ರಸಾದ್ ಎಸ್‌ ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸರ್ಕಾರವು ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ (2023–2025) ಒಟ್ಟು 432 ಅಕ್ರಮ ವಿದೇಶಿ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಇಲಾಖೆ ಹಾಗೂ ಪೊಲೀಸ್ ದಾಖಲೆಗಳು ಸ್ಪಷ್ಟಪಡಿಸಿವೆ.  ಈ ದಾಖಲೆ ಪೈಕಿ ಅಕ್ರಮ ವಿದೇಶಿಗರ ಅತಿ ಹೆಚ್ಚು ಪ್ರಕರಣಗಳು ಬೆಂಗಳೂರು ನಗರದಲ್ಲೇ ದಾಖಲಾಗಿದ್ದು, ರಾಜ್ಯ ಸರ್ಕಾರವು FIP ಪೋರ್ಟಲ್, FRRO ಹಾಗೂ Deportation ಕ್ರಮಗಳ ಮೂಲಕ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ.

Advertisement
Advertisement

ರಾಜ್ಯದಲ್ಲಿ ಪತ್ತೆಯಾದ 432 ಅಕ್ರಮ ವಿದೇಶಿ ವಲಸಿಗರಲ್ಲಿ ಬೆಂಗಳೂರು ನಗರವೇ ಪ್ರಮುಖ ಕೇಂದ್ರವಾಗಿದೆ.

ಜಿಲ್ಲೆ/ಘಟಕ ಪತ್ತೆಯಾದ ಅಕ್ರಮ ವಿದೇಶಿಗರ ಸಂಖ್ಯೆ
ಬೆಂಗಳೂರು ನಗರ 328
ಬೆಂಗಳೂರು ಜಿಲ್ಲೆ 52
ಚಿತ್ತದುರ್ಗ 6
ಧಾರವಾಡ 2
ಹಾಸನ 3
ಕೋಲಾರ 12
ಮಂಗಳೂರು ನಗರ 3
(ಇತರೆ ಜಿಲ್ಲೆಗಳು) ಉಳಿದ ಪ್ರಕರಣಗಳು

ಅಕ್ರಮ ವಿದೇಶಿಗಳ ಚಲನ-ವಲನಗಳ ಮೇಲೆ ನಿಗಾ ವಹಿಸಲು ಸರ್ಕಾರವು Foreigners Identification Portal (FIP) ಬಳಕೆ ಮಾಡುತ್ತಿದೆ. ರಾಜ್ಯದ ಎಲ್ಲಾ ಉಪ ಪೊಲೀಸ್ ಆಯುಕ್ತರು (DCP) ಹಾಗೂ ಜಿಲ್ಲಾ ಎಸ್‌ಪಿ ಗಳಿಗೆ ತಿಳಿಸಲಾಗಿದ್ದು, ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಿದ ಕೂಡಲೇ FIP ನಲ್ಲಿ ದಾಖಲಿಸುವಂತೆ , ದಾಖಲೆ ಪರಿಶೀಲನೆ ಮಾಡುವಂತೆ,  ಕೇಂದ್ರ ಗುಪ್ತಚರ ಇಲಾಖೆಯಿಂದ ಲಾಗಿನ್ ಸೃಷ್ಟಿಸಿ ನೀಡಲಾಗಿದೆ ಎಂದು ಹೇಳಿದೆ.

ಅಕ್ರಮವಾಗಿ ನೆಲೆಸಿರುವ ವಿದೇಶಿಗರು ಪತ್ತೆಯಾದಲ್ಲಿ ಅವರನ್ನು FRRO (Foreigners Regional Registration Office) ಗೆ ಒಪ್ಪಿಸುವುದು, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೆ,  Deportation Permit ಸಿಗುವವರೆಗೆ FDC (Foreigners Detention Centre) ನಲ್ಲಿ ಇರಿಸುವುದು ಎಂಬ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಸರ್ಕಾರವು ವಿದೇಶಾಂಗ ವ್ಯವಹಾರ ಸಚಿವಾಲಯದ ಮೂಲಕ ಆಯಾ ದೇಶಗಳಿಗೆ ಗಡಿಪಾರು ಮಾಡುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದಲ್ಲಿ 370 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ :  ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ ಒಟ್ಟು 370 ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ. ಜಿಲ್ಲಾವಾರು ಬಾಂಗ್ಲಾ ವಲಸಿಗರ ವಿವರ:

ಜಿಲ್ಲೆ/ಘಟಕ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ
ಬೆಂಗಳೂರು ನಗರ 284
ಬೆಂಗಳೂರು ಜಿಲ್ಲೆ 37
ಚಿತ್ತದುರ್ಗ 6
ಧಾರವಾಡ 2
ಹಾಸನ 3
ಕೋಲಾರ 12
ಮಂಗಳೂರು ನಗರ 3
ಶಿವಮೊಗ್ಗ 12
ತುಮಕೂರು 1
ಉಡುಪಿ 10
ಒಟ್ಟು 370

ರಾಜ್ಯದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎನ್ನುವ ಆರೋಪದ ಕುರಿತು ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು ಸರ್ಕಾರಿ ದಾಖಲೆಗಳಲ್ಲಿ ಅಂತಹ ಅಂದಾಜು ಇಲ್ಲ, ಕಳೆದ 3 ವರ್ಷಗಳಲ್ಲಿ ಪತ್ತೆಯಾದ ಸಂಖ್ಯೆ 370 ಮಾತ್ರ ದೂರುಗಳಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ನಕಲಿ ಆಧಾರ್ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು  ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ನೀಡಿದ ಪ್ರಕರಣದಲ್ಲಿ ಒಟ್ಟು 5 ಜನ ಆರೋಪಿಗಳು, 4 ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದೆ.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ 15 ವರ್ಷಗಳಿಂದ ಬಾಂಗ್ಲಾ ವಲಸಿಗರು ವಾಸವಾಗಿದ್ದಾರೆ ಎಂಬ ಆರೋಪದ ಕುರಿತು ಸರ್ಕಾರ ಹೇಳಿದ್ದು,  ಇಂತಹ ಪ್ರಕರಣಗಳು ಕಂಡು ಬಂದಿಲ್ಲ, ದೂರು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ. ಕೊಡಗು ಜಿಲ್ಲೆಯಲ್ಲಿ 2 ಅಕ್ರಮ ವಲಸಿಗರು ಪತ್ತೆಯಾಗಿದ್ದು, ಅವರು ಬಾಂಗ್ಲಾದೇಶದವರಾಗಿದ್ದಾರೆ ಎಂದು ದಾಖಲೆ ತಿಳಿಸಿದೆ.

ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಕೈಗೊಂಡ ಮುಖ್ಯ ಕ್ರಮಗಳ ಬಗ್ಗೆಯೂ ಉತ್ತರದಲ್ಲಿ ತಿಳಿಸಿದ್ದು, ಬೀಟ್ ಸಿಬ್ಬಂದಿ ಮೂಲಕ ಮಾಹಿತಿ ಸಂಗ್ರಹಣೆ, ಠಾಣಾ ಮಟ್ಟದಲ್ಲಿ ನಿಗಾ ವಹಿಸುವ ವ್ಯವಸ್ಥೆ,  FIP Portal ಮೂಲಕ ದಾಖಲೆ ನಿರ್ವಹಣೆ,  FRRO ಮೂಲಕ Deportation ಪ್ರಕ್ರಿಯೆ, Detention Centre ನಲ್ಲಿ ಬಂಧನ, ನಕಲಿ ದಾಖಲೆ ನೀಡಿದವರ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

1 hour ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

1 hour ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

2 hours ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

2 hours ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

12 hours ago

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

19 hours ago