ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಕಂಡುಬರುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ಬಿಸಿಲು ಹಾಗೂ ತಾಪಮಾನ ಏರಿಕೆಯಾಗುವ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದ ಕಡೆಯಿಂದ ಮೇಲ್ಸ್ತರ ಹಾಗೂ ಮಧ್ಯಮ ಸ್ತರಗಳಲ್ಲಿ ಕಡಿಮೆ ತೇವಾಂಶ ಹೊಂದಿದ ಗಾಳಿಯ ಬೀಸುವಿಕೆ ಕಾರಣವಾಗಿ ಮಳೆ ಮೋಡಗಳ ರಚನೆ ದುರ್ಬಲಗೊಳ್ಳುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ. ಆದರೂ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಸ್ಥಳೀಯ ಮೋಡಗಳ ಪರಿಣಾಮದಿಂದ ಗುಡುಗು ಸಹಿತ ಸಣ್ಣ ಪ್ರಮಾಣದ ಮಳೆ ಸಾಧ್ಯತೆ ಇದೆ. ಆದರೆ ಏಪ್ರಿಲ್ 6ರಿಂದ ಮಳೆ ಇನ್ನಷ್ಟು ಕಡಿಮೆಯಾಗಲಿದೆ, ಹಗಲು ಬಿಸಿಲು ಹೆಚ್ಚಾಗಲಿದೆ.
ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಪ್ರಧಾನ ವಾತಾವರಣ ಕಂಡುಬರಲಿದ್ದು ಸ್ವಲ್ಪ ಮೋಡ , ಮಳೆಯ ಸಾಧ್ಯತೆ ಇಲ್ಲದಂತಿದೆ.
ದಕ್ಷಿಣ ಒಳನಾಡಿನಲ್ಲಿ ಮೈಸೂರು, ಚಾಮರಾಜನಗರ ಭಾಗಗಳಲ್ಲಿ ಸಂಜೆ ವೇಳೆ ಸಾಮಾನ್ಯ ಮಳೆ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು -ಮೋಡದ ವಾತಾವರಣ ಇರಲಿದ್ದು ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ಬಿಸಿಲು ಹೆಚ್ಚಾಗಲಿದೆ.
ಅರಬ್ಬಿ ಸಮುದ್ರದ ಗಾಳಿ ಹಾಗೂ ಕಡಿಮೆ ತೇವಾಂಶ, ಪೂರ್ವದ ಮೋಡಗಳು ದುರ್ಬಲವಾಗುತ್ತಿರುವ ಲಕ್ಷಣ ಹಾಗೂ ಬಂಗಾಳಕೊಲ್ಲಿಯ ಗಾಳಿ ಪ್ರಭಲವಾಗದಿರುವುದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ.
ರೈತರಿಗೆ ಸಲಹೆ
- ನೀರಿನ ಸಂರಕ್ಷಣೆ ಕ್ರಮ ಕೈಗೊಳ್ಳಿ
- ಬೆಳೆಗಳಿಗೆ ಅಗತ್ಯವಿರುವ ನೀರಾವರಿ ವ್ಯವಸ್ಥೆ ಪರಿಶೀಲಿಸಿ
- ಬಿಸಿಲಿನ ಪರಿಣಾಮದಿಂದ ಬೆಳೆ ಒಣಗದಂತೆ ಜಾಗ್ರತೆ ವಹಿಸಿ
Rainfall is expected to reduce across Karnataka from April 6, 2026, with rising temperatures and sunny conditions. Coastal and Malnad regions may receive light showers, while most areas will experience dry weather.

