Advertisement
ವೆದರ್ ಮಿರರ್

ಹವಾಮಾನ ವರದಿ | 11-06-2026 | ಕರಾವಳಿ, ಮಲೆನಾಡಿನಲ್ಲಿ ಅಲ್ಲಲ್ಲಿ ಸಾಧಾರಣ ಮಳೆ, ಉಳಿದ ಭಾಗಗಳಲ್ಲಿ ಬಿಸಿಲು-ಮೋಡದ ವಾತಾವರಣ

Share

12.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

ಕರಾವಳಿ :  ಮಧ್ಯಮ ಸ್ತರದಲ್ಲಿ ಗಾಳಿಯ ಸಂಚಾರವು ವಾಯವ್ಯದಿಂದ ಆಗ್ನೇಯಕ್ಕೆ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಉಳಿದ ದಕ್ಷಿಣ ಕನ್ನಡ ಭಾಗಗಳು, ಕಾಸರಗೋಡು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ಸಣ್ಣ ತುಂತುರು ಮಳೆಯ ಮುನ್ಸೂಚನೆ ಇದೆ.

ಈಗಿನ ಲೆಕ್ಕಾಚಾರದಂತೆ ಕರಾವಳಿ ಜಿಲ್ಲೆಗಳಲ್ಲಿ ಜುಲೈ 16ರವರೆಗೆ ಬಿಸಿಲು-ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಜುಲೈ 17ರಿಂದ ಮಳೆ ಚಟುವಟಿಕೆ ಮತ್ತೆ ಚುರುಕಾಗುವ ಲಕ್ಷಣಗಳಿದ್ದರೂ, ಇನ್ನೂ ಕೆಲವು ದಿನಗಳಿರುವುದರಿಂದ ಮುನ್ಸೂಚನೆಯಲ್ಲಿ ಬದಲಾವಣೆ ಸಾಧ್ಯ.

ಮಲೆನಾಡು :  ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ.  ಪ್ರಸ್ತುತ ಮುನ್ಸೂಚನೆಯಂತೆ ಮಲೆನಾಡಿನಲ್ಲಿ ಜುಲೈ 19ರವರೆಗೆ ಇದೇ ರೀತಿಯ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ.

ಉತ್ತರ ಒಳನಾಡು :  ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಲಿದೆ. ಮುಂದಿನ 10 ದಿನಗಳವರೆಗೆ ಗಮನಾರ್ಹ ಮಳೆಯ ಲಕ್ಷಣಗಳು ಗೋಚರಿಸುತ್ತಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ದಕ್ಷಿಣ ಒಳನಾಡು : ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮೋಡದ ವಾತಾವರಣ ಮುಂದುವರಿಯಲಿದೆ. ಮುಂದಿನ 10 ದಿನಗಳವರೆಗೆ ಇದೇ ರೀತಿಯ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ.

ಮುಂಗಾರು ದುರ್ಬಲಗೊಂಡಿರುವ ಕಾರಣ ಮಧ್ಯಮ ಸ್ತರದಲ್ಲಿ ಉತ್ತರ ಭಾಗದಿಂದ ಪಾಕಿಸ್ತಾನದ ಮೂಲಕ ಭಾರತದ ವಾಯವ್ಯದಿಂದ ಆಗ್ನೇಯ ದಿಕ್ಕಿನತ್ತ ಒಣಗಾಳಿ ಬಲವಾಗಿ ಹರಿಯುತ್ತಿದೆ.  ಇದರ ಜೊತೆಗೆ, ಅಲ್ಪ ಪ್ರಮಾಣದ ಮುಂಗಾರು ಗಾಳಿಯೂ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ ಮಡಿಕೇರಿ ಹಾಗೂ ಶಿರಾಡಿ ಘಾಟ್‌ನ ಕೆಳಭಾಗದ ಪ್ರದೇಶಗಳಲ್ಲಿ ಮಾತ್ರ ಅಲ್ಲಲ್ಲಿ ಸಾಮಾನ್ಯ ಮಳೆಯಾಗುತ್ತಿದೆ. ರಾಜ್ಯದ ಉಳಿದ ಬಹುತೇಕ ಭಾಗಗಳಲ್ಲಿ ಮಳೆ ಚಟುವಟಿಕೆ ಗಣನೀಯವಾಗಿ ಕುಂಠಿತವಾಗಿದೆ.

 ರೈತರಿಗೆ ಸಲಹೆ

  • ಅಡಿಕೆ, ಕಾಫಿ, ಮೆಣಸು ಹಾಗೂ ತೆಂಗಿನ ತೋಟಗಳಲ್ಲಿ ಮಣ್ಣಿನ ತೇವಾಂಶವನ್ನು ಕಾಪಾಡುವ ಕ್ರಮಗಳಿಗೆ ಆದ್ಯತೆ ನೀಡಿ.
  • ಮಳೆ ವಿರಾಮದ ಅವಧಿಯನ್ನು ಬಳಸಿಕೊಂಡು ಕಳೆ ನಿಯಂತ್ರಣ, ಗೊಬ್ಬರ ನಿರ್ವಹಣೆ ಹಾಗೂ ತೋಟದ ಸ್ವಚ್ಛತೆ ಕೈಗೊಳ್ಳಬಹುದು.
  • ನೀರಾವರಿ ಸೌಲಭ್ಯ ಇರುವ ಕಡೆಗಳಲ್ಲಿ ಅಗತ್ಯವಿದ್ದರೆ ನೀರಾವರಿ  ನೀಡುವುದು ಬೆಳೆಗಳಿಗೆ ಅನುಕೂಲಕರ.
ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…

The southwest monsoon remains weak across Karnataka. Only isolated light rain is expected over parts of Sullia, Kadaba, and Somwarpet, while most coastal, Malnad, and interior districts will experience sunny to partly cloudy conditions. Rainfall is expected to remain subdued for the next several days, with coastal rainfall likely to improve after July 17 if weather patterns evolve as projected.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

Published by
ಸಾಯಿಶೇಖರ್ ಕರಿಕಳ

Recent Posts

ಅಡಿಕೆ ಅಕ್ರಮ ಆಮದು ಜಾಲದ ಮೇಲೆ ಇಡಿ ದಾಳಿ – 16 ಕಡೆ ಶೋಧ, ನೂರಾರು ಕೋಟಿ ಹಣದ ವಹಿವಾಟಿನ ತನಿಖೆ

ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ 16 ಸ್ಥಳಗಳಲ್ಲಿ ವಿದೇಶಿ ಅಡಿಕೆ ಅಕ್ರಮ ಸಾಗಾಟಕ್ಕೆ…

1 hour ago

ಹವಾಮಾನ ವರದಿ | 01-10-2026 | ಕರ್ನಾಟಕದಲ್ಲಿ ಮತ್ತೆ ಮಳೆ ಇಳಿಕೆ – ಕಾರಣವೇನು?

ಉತ್ತರ ಭಾರತದ ಶುಷ್ಕ ಗಾಳಿ ಹಾಗೂ ಪೆಸಿಫಿಕ್ ಸಾಗರದ ಪ್ರಬಲ ಚಂಡಮಾರುತಗಳ ಪರಿಣಾಮ…

9 hours ago

ಹೊಸ ಅಡಿಕೆ ಧಾರಣೆ 350 ಫಿಕ್ಸ್ – ಆರಂಭಿಕ ಧಾರಣೆಯೇ ಆಮದು ದರಕ್ಕಿಂತ ಕಡಿಮೆ..!

ಹೊಸ ಅಡಿಕೆಯ ಆರಂಭಿಕ ಧಾರಣೆ ₹330–350ಕ್ಕೆ ನಿಗದಿಯಾಗಿದ್ದು, ಆಮದು ಅಡಿಕೆಗೆ ಇರುವ ₹351ರ…

9 hours ago

ರಿಲಯನ್ಸ್ ಫೌಂಡೇಶನ್ ಪದವಿ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪದವಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ…

14 hours ago

ರೈತನ ಹೊಲದಿಂದ ನಿಮ್ಮ ತಟ್ಟೆಯವರೆಗೆ… AI ಬರಲಿದೆ..!

ಕರ್ನಾಟಕದಲ್ಲಿ ಬೀಜದಿಂದ ಗ್ರಾಹಕರ ತಟ್ಟೆಯವರೆಗೆ ಕೃಷಿ ಉತ್ಪನ್ನದ ಪಯಣವನ್ನು ಪತ್ತೆಹಚ್ಚಲು AI ಆಧಾರಿತ…

14 hours ago

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 4 ಚಿನ್ನ ಸೇರಿದಂತೆ 7 ಪದಕ…

23 hours ago