Weather Mirror | 29-11-2023 | ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣ | ಕೆಲವು ಕಡೆ ಮಳೆ | ಡಿ.2 ರಿಂದ ರಾಜ್ಯದಾದ್ಯಂತ ಒಣ ಹವೆ ಸಾಧ್ಯತೆ |

November 29, 2023
1:58 PM
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.

30.11.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. (ಸುಳ್ಯ ತಾಲೂಕಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.ಕೊಡಗು ಅಲ್ಲಲ್ಲಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ.

ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ನಿನ್ನೆ ಕೆಲವು ಭಾಗಗಳಲ್ಲಿ ಅನಿರೀಕ್ಷಿತ ಮಳೆಯಾದಂತೆ ಇವತ್ತು ಸಹ ಒಂದೆರಡು ಕಡೆ ಅನಿರೀಕ್ಷಿತ ಮಳೆಯ ಸಾಧ್ಯತೆ ಇದೆ.

ಡಿಸೆಂಬರ್ 1 ರಂದು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಮುನ್ಸೂಚನೆ ಇದ್ದು, ಮುಂದಿನ 2 ದಿನಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಡಿಸೆಂಬರ್ 4 ಅಥವಾ 5 ರಂದು ಆಂಧ್ರಾ ಕರಾವಳಿಗೆ ಅಪ್ಪಳಿಸುವ ಲಕ್ಷಣಗಳಿವೆ. ಇದರ ಪರಿಣಾಮದಿಂದ ಡಿಸೆಂಬರ್ 2ರಿಂದ ರಾಜ್ಯದಾದ್ಯಂತ ಒಣ ಹವೆ ಆವರಿಸುವ ಸಾಧ್ಯತೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror