ರಾಜ್ಯದಲ್ಲಿ ಈಗಾಗಲೇ ವರುಣನ ಅಬ್ಬರ ಶುರುವಾಗಿದೆ. ಏಪ್ರಿಲ್ 29ರಂದು ಶನಿವಾರ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಹಲವು ಭಾಗಗಳಲ್ಲಿ ಕೂಡ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾನುವಾರ ಮೋಡ ಕವಿದ ವಾತಾವರಣ ಇರಲಿದೆ ಎಂದು ಹೇಳಿದೆ.
ಶನಿವಾರ ರಾಜ್ಯದ ಹಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಿದೆ. ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಮಳೆ ಸ್ವಲ್ಪ ತಂಪು ನೀಡಿದೆ. ರಾಯಚೂರಿನಲ್ಲಿ 7 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ಭಾಗಗಳಲ್ಲಿ 40.5 ಮಿಲಿ ಮೀಟರ್ ಮಳೆಯಾಗಿದೆ. ಮಾತ್ರವಲ್ಲದೆ ಭಾಗಮಂಡಲ, ಶೃಂಗೇರಿ, ಶಿವಮೊಗ್ಗ, ಬಾಳೆಹೊನ್ನೂರು, ತುಮಕೂರು, ದೇವರ ಹಿಪ್ಪರಗಿ, ಮುದಗಲ್, ಕೆಂಭಾವಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಹಲವು ಭಾಗಗಳಲ್ಲಿ ಮಳೆಯಾಗಿದೆ. ಭಾನುವಾರ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದ, ಸಂಜೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ಸಂಜೆ ತುಮಕೂರು ಸುತ್ತಮುತ್ತಲಿನ ಹಲವು ಭಾಗಗಳಲ್ಲಿ ಭಾರಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ತೀವ್ರ ತಾಪಮಾನದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಮಳೆ ತಂಪೆರದಿದೆ. ರಾಜ್ಯದ ಹಲವು ಭಾಗಗಳಲ್ಲಿ ತೀವ್ರ ಬಿಸಿಲಿನಿಂದ ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿತ್ತು. ಕೃಷಿ ವಲಯದ ಮೇಲೂ ತೀವ್ರ ಬಿಸಿಲು ಕೆಟ್ಟ ಪರಿಣಾಮ ಬೀರಿತ್ತು, ಹಲವು ಭಾಗಗಳಲ್ಲಿ ತೀವ್ರ ಬಿಸಿಲಿಗೆ ಬೆಳೆಗಳು ಒಣಗಿದ್ದವು, ಸದ್ಯ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ತಾಪಮಾನವನ್ನು ಕಡಿಮೆ ಮಾಡಿದೆ.
ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ…
ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 1ರಿಂದ 'ರಸಗೊಬ್ಬರ ಮಾರಾಟ ಚೌಕಟ್ಟು' ಎಂಬ ಹೊಸ ಮೊಬೈಲ್…
ಮನುಷ್ಯನ ಬದುಕಿನಲ್ಲಿ ಆಸೆ ಸಹಜವಾದರೂ ಅದು ಮಿತಿಮೀರಿದಾಗ ದುಃಖ ಮತ್ತು ಅತೃಪ್ತಿಗೆ ಕಾರಣವಾಗುತ್ತದೆ.…
ಮಂಗಳೂರಿನ ಲಾಲ್ಬಾಗ್, ಪಂಪ್ವೆಲ್ ಸೇರಿದಂತೆ ವಿವಿಧೆಡೆ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದವರಿಗೆ ಆರೋಗ್ಯ ಇಲಾಖೆ…
ಕರ್ನಾಟಕದಲ್ಲಿ ಹವಾಮಾನ ಬದಲಾವಣೆಯ ಸೂಚನೆಗಳಿದ್ದು, ನವೆಂಬರ್ 24ರಿಂದ ಮಲೆನಾಡಿನಲ್ಲಿ ಹಾಗೂ ನವೆಂಬರ್ 25ರಿಂದ…
ಸುಳ್ಯ ತಾಲೂಕಿನ ಕುಕ್ಕುಜಡ್ಕದ ಚಾಮಡ್ಕ ಜಲಪಾತ ಪ್ರದೇಶದಲ್ಲಿ ‘ಸ್ವಚ್ಛ ಗ್ರಾಮ ಸುಂದರ, ನಮ್ಮ…