Advertisement
ಸುದ್ದಿಗಳು

ಸ್ವಯಂಕೃತ ಅಪರಾಧದಿಂದ ಆತ್ಮಹತ್ಯೆಮಾಡಿಕೊಂಡ ಕರ್ನಾಟಕದ ಬಿಜೆಪಿ. ಹಲ್ಲಿಲ್ಲದ ಹಾವಾಗಿರುವ ಸಂಘ.*

Share

ಇದಾಗಲೇ ಕರ್ನಾಟಕದ ಚುನಾವಣೆ ಫಲಿತಾಂಶದ ಬಂದಿದೆ. ಕಾಂಗ್ರೇಸ್ ವಿಜಯ ಬಿಜೆಪಿ ಹೀನಾಯ ಸೋಲು ಎನ್ನುವುದನ್ನು ಟಿ ವಿಯಲ್ಲಿ ನೋಡುತ್ತಿದ್ದೇವೆ. ಸ್ವಯಂಕೃತ ಅಪರಾಧದಿಂದ  ಕರ್ನಾಟಕದ ಬಿಜೆಪಿ ಆತ್ಮಹತ್ಯೆ ಮಾಡಿಕೊಂಡಾಂತಾಗಿದೆ. ಇತ್ತ ಸಂಘ ಹಲ್ಲಿಲ್ಲದ ಹಾವಾಗಿದೆ.  ನಟೇಶ್ ಉಡುಪಿಯವರು ಬಿಜೆಪಿಯ ಸೋಲಿನ ಬಗ್ಗೆ ಕೂಲಂಕುಷವಾಗಿ ಬರೆದಿದ್ದಾರೆ. ಓದಿ..

Advertisement
Advertisement
Advertisement

ಐದುವರ್ಷಗಳ ಹಿಂದೆಯೇ ಮೋದಿ ಹೇಳಿದ್ದರು, ಯಾವಾಗಲೂ ಮೋದಿ ಕಾರ್ಡ್ ನಡೆಯುವುದಿಲ್ಲ ಜನ ನಿಮ್ಮನ್ನು ಗಮನಿಸುತ್ತಾರೆ ಎಂಬುದಾಗಿ. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಜನರ ಸಮಸ್ಯೆಗಳಿಗಾಗಲಿ ಕಾರ್ಯಕರ್ತರ ಭಾವನೆಗಳಿಗಾಗಲೀ *ಸರಿಯಾಗಿ ಸ್ಪಂದಿಸಲೇಇಲ್ಲ.* ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ನಡೆದ ಕೊಲೆಗಳಿಗೆ ನ್ಯಾಯವನ್ನು ಬಯಸಿ ಹಿಂದು ಕಾರ್ಯಕರ್ತರು ಬಿಜೆಪಿಯನ್ನು ಬೆಂಬಲಿಸಿದ್ದರು. ಅಧಿಕಾರ ಹಿಡಿದ ಬಿಜೆಪಿ ಯಾವುದೇ ಸಂಘಟನೆಯ ಕಾರ್ಯಕರ್ತನಿಗೆ ಧೈರ್ಯ ಕೊಡುವ ಕೆಲಸ ಮಾಡಲಿಲ್ಲ. ಕಾಂಗ್ರೇಸಿನ ದ್ವೇಷ ರಾಜಕೀಯದಿಂದ ಕೇಸು ಹಾಕಲ್ಪಟ್ಟು ಕೋರ್ಟಿಗೆ ಅಲೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಕೇಸಿನ ಹಿಂಸೆಯಿಂದ ಬಿಜೆಪಿ ತಪ್ಪಿಸಲಿಲ್ಲ. ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ಲೋಕಾಯುಕ್ತವನ್ನು ಮುಚ್ಚಿ ಭ್ರಷ್ಟಾಚಾರವನ್ನು ಮಾಡಿದ್ದರು. ಆ ವಿಚಾರದಲ್ಲಿ ತನಿಖೆಮಾಡಲಿಲ್ಲ. ಲೋಕಾಯುಕ್ತವನ್ನು ಬಲಗೊಳಿಸಲಿಲ್ಲ. ಡಿಜಿ ಹಳ್ಳಿ ಕೆಜಿ ಹಳ್ಳಿ ಗಲಭೆಗಳನ್ನು ಸರಿಯಾಗಿ ನಿಭಾಯಿಸಲಿಲ್ಲ. ಶಿವಮೊಗ್ಗದಿಂದ ಹಿಡಿದು ಪ್ರವೀಣ್ ನೆಟ್ಟಾರು ಕೊಲೆವರೆಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಸರಕಾರದ ಡೈಲಾಗು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಾಗುವ ಫೆವರಿಟ್ ವಿಷಯ ವಾಗಿತ್ತು. ಆಗಲೂ ಎಚ್ಚರಾಗಲಿಲ್ಲ. ಗೃಹಸಚಿವರನ್ನು ಬದಲಾಯಿಸಲಿಲ್ಲ. ಸಾಲದ್ದಕ್ಕೆ ಖೈದಿಗಳಿಗೆ ದಿನಗೂಲಿ 500 ಮಾಡುತ್ತೇವೆ ಎನ್ನುವ ಮೂಲಕ ತಾವು ಕ್ರಿಮಿನಲ್ಗಳನ್ನು ಬೆಳೆಸುವವರು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು.

Advertisement

ಹಿಂದುತ್ವದ ಪಕ್ಷವೆಂದು ಹಿಂದುಗಳಿಗೆ ಭರವಸೆ ಎನ್ನಿಸುವ ನೆನಪಿರುವ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ. ಕೇವಲ ಭಾಷಣದ ಹಿಂದುತ್ವವನ್ನು ಮಾತ್ರ ಹಿಂದೂ ಸಂಘಟನೆಗಳು ನೋಡಿದುವು. ಪ್ರಮೋದ ಮುತಾಲಿಕರಿಗೆ ಒಂದು ಸೀಟುಕೊಡುವ ಔದಾರ್ಯ ಬಿಜೆಪಿ ತೋರಲಿಲ್ಲ. ಬದಲಾಗಿ ಅರುಣ್ ಕುಮಾರ್ ಪುತ್ತಿಲರನ್ನು ಪುತ್ತೂರಿನಲ್ಲಿ ಮೂಲೆಗುಂಪು ಮಾಡಲು ನೋಡಲಾಯಿತು. ಅವರು ಹಿಂದುನಾಯಕರೇ ಅಲ್ಲ ಎನ್ನುವ ರೀತಿಯಲ್ಲಿ ಸಂಘದಹಿರಿಯರು ತಮ್ಮ ಹರುಕು ನಾಲಗೆಯನ್ನು ಹರಿಬಿಟ್ಟರು. ಪುತ್ತಿಲರ ತೇಜೋವಧೆಗೆ ಪಾರ್ಟಿಹಾಗೂ ಸಂಘ ಜಂಟಿಯಾಗಿ ಇಳಿಯಿತು.

ಸಂಘ ಪರಿವಾರದಿಂದ ಹೋದವರು ಕಾಂಗ್ರೇಸಿಗರನ್ನೂ ಮೀರಿಸುವ ಬ್ರಷ್ಟಾಚಾರಕ್ಕೆ ಇಳಿದಾಗ ಸಂಘದ ಹಿರಿಯರು ಕಣ್ಣುಮುಚ್ಚಿಕೊಂಡು ರಾಜಕೀಯ ನಮ್ಮ ಕೆಲಸವಲ್ಲ ಎನ್ನುತ್ತಾ ಕೇಶವಕೃಪದಲ್ಲಿ ಕಡ್ಲೆ ತಿನ್ನುತ್ತಿದ್ದರು. ಕರೆದು ಬುದ್ದಿ ಹೇಳುವ, ಎಚ್ಚರಿಕೆ ನೀಡುವ, ಪಕ್ಷದ ಹೈಕಮಾಂಡಿನ ಗಮನಕ್ಕೆ ತರುವ ಕೆಲಸವನ್ನು ಮಾಡಲಿಲ್ಲ. ಸ್ವಯಂಸೇವಕರನ್ನು ಕೇಳಿದರೆ, ಬಿಜೆಪಿ ಇಂದು ಸಂಘಕ್ಕಿಂತ ದೊಡ್ಡದಾಗಿ ಬೆಳೆದಿದೆ ಎಂದು ನಾಚಿಕೆ ಇಲ್ಲದೆ ತಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳತೊಡಗಿದ್ದರು.

Advertisement

ಯಾವುದಕ್ಕೂ ಪ್ರಯೋಜನವಿಲ್ಲದ ಯಕ್ಷಗಾನದ ವಿದೂಷಕನಂತೆ ಮಾತನಾಡುವ ಅಪ್ರಾಮಾಣಿಕ ರಾಜ್ಯಾಧ್ಯಕ್ಷರನ್ನು ಬಿಜೆಪಿ ಆಯ್ಕೆ ಮಾಡಿ ಕೂರಿಸಿತು. ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಪಕ್ಷದ ಅಧ್ಯಕ್ಷರ ಜನಪ್ರಿಯತೆಯನ್ನು ನೋಡಿಯೂ ಪಕ್ಷ ಕಣ್ಣುಮುಚ್ಚಿಕೂತಿದ್ದರ ಫಲವಾಗಿ, ಅಹಂಕಾರದಿಂದ ನೆಲಬಿಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಕಾರ್ಯಕರ್ತರ ಬೇಡಿಕೆಗೆ ವಿರುದ್ಧವಾಗಿ ಪುತ್ತೂರಿನಲ್ಲಿ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿ, ತನ್ನದೇ ಜಾತಿಯ ಕಾಂಗ್ರೇಸಿನ ಅಭ್ಯರ್ಥಿಯನ್ನು ಜಾತಿಮಗ ಎಂದು ಗೆಲ್ಲಿಸುವ ಒಳ ಒಪ್ಪಂದಕ್ಕೆ ಯೋಜನೆ ರೂಪಿಸಿದಂತೆ ತೋರುತ್ತದೆ, ಭಾಸವಾಗುತ್ತಿದೆ. ಇಂತಹ ಅನೇಕ ಅವಿವೇಕವನ್ನು ರಾಜ್ಯ ಬಿಜೆಪಿ ಮಾಡುತ್ತಿದ್ದಾಗಲೂ ಸಂಘದ ಹಿರಿಯರು ತಪ್ಪನ್ನು ತಪ್ಪು ಎಂದುಹೇಳುವ ಧೈರ್ಯಮಾಡಲಿಲ್ಲ.

ಧರ್ಮಕ್ಕಾಗಿ ಜೀವಕೊಡಲು ಸಿದ್ಧರಿರುವ ಕಾರ್ಯಕರ್ತರ ಭಾವನೆಗಳಿಗೆ ಬೆಂಬಲವಾಗಿ ನಿಲ್ಲಲಿಲ್ಲ. ಹಿಂದೆ ಮಂಗಳೂರಿನಲ್ಲಿ ಡಿಸ್ಕೋಕ್ಲಬ್ ನಲ್ಲಿ ಹಿಂದೂ ಕಾರ್ಯಕರ್ತರು ದಾಳಿಮಾಡಿದ್ದಾಗ, ಸಿಟಿ ರವಿಯವರು ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಡಹೇರಿದಾಗ, ಬಿಜೆಪಿಯ ಪರಿಸ್ಥಿತಿ ಹೇಗಾಗಿತ್ತೋ ಅಂತಹುದೇ ಪರಿಸ್ಥಿತಿ ಇಂದು ಪುತ್ತೂರಿನಲ್ಲಿ ಆಯಿತು. ಬಿಜೆಪಿ ಹಿಂದೂನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎನ್ನುವ ಭಾವನೆ ಎಲ್ಲಡೆ ಕಾರ್ಯಕರ್ತರ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತು.

Advertisement

ಕಾಂಗ್ರೇಸಿನವರು 40% ಸರಕಾರ ಎಂದು ಆಪಾದನೆ ಮಾಡಿದಾಗ ಬಿಜೆಪಿ ಕಾರ್ಯಕರ್ತರೇ *”ಇದು ಸತ್ಯ”* ಎಂದು ಪರಸ್ಪರ ಮಾತಾನಾಡುವುದನ್ನು ಸಮಾಜ ನೋಡಿದೆ. ಪಾರ್ಟಿ ವಿತ್ ಡಿಫರೆನ್ಸ್ ಎನ್ನುವ ಬಿಜೆಪಿ, ಚುನಾವಣೆ ಸಮಯದಲ್ಲಿ ಕಾಂಗ್ರೇಸನ್ನು ನಾಚಿಸುವಂತೆ ಹಣ ಹಂಚಲು ಮುಂದಾದ ವರದಿಗಳು ಜನರ ಬಾಯಲ್ಲಿ ಓಡಾಡುತ್ತಿರುವುದು ಸುಳ್ಳಲ್ಲ. ಎಷ್ಟೇ ಸೀಟು ಬಂದರೂ ಶಾಸಕರನ್ನು ಖರೀದಿಸಿ ಸರಕಾರ ರಚಿಸುತ್ತೇವೆ ಎನ್ನುವಷ್ಟು ಅಹಂಕಾರ ಬಜೆಪಿಗರಲ್ಲಿ ಮನೆಮಾಡಿತ್ತು. ಇವರಿಗೆ ಕಾರ್ಯಕರ್ತರ ಅಗತ್ಯವೇ ಇಲ್ಲ ಎನ್ನುವಮನಸ್ಥಿತಿಗೆ ನಾಯಕರು ಬಂದಿದ್ದರು.

*ಬಿಜೆಪಿಯ ಮತದಾರರು ರಾಷ್ಟ್ರೀಯ ಚಿಂತನೆಯ ಮತದಾರರು.* ತಾವು ಚುನಾಯಿಸಿದ ಶಾಸಕ ಜಿಹಾದಿಗಳೊಂದಿಗೆ ಸೇರಿಕೊಂಡು ಪಾಲುಗಾರಿಕೆಯ ಉದ್ಯಮ ನಡೆಸುತ್ತಾನೆಂದು ತಿಳಿದಾಗ ಹೇಗೆ ಸಹಿಸಿಕೊಳ್ಳುತ್ತಾನೆ. ಅಲ್ಪಸಂಖ್ಯಾತರು, ನೀವು ಎಷ್ಟೇ ಸೌಲಭ್ಯ ಕೊಡಿ, ಅನುದಾನ ಕೊಡಿ, ಅವರೆಂದಿಗೂ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಅವರಿಗೆ ಭಾರತವನ್ನು ಇಸ್ಲಾಮೀಕರಣ ಅಥವಾ ಕ್ರಿಶ್ಚನೀಕರಣ ಮಾಡುವ ಗುರಿ ಇದೆ. ಇದಕ್ಕೆ ಕಾಂಗ್ರೇಸಿಗರ ಮುಕ್ತ ಬೆಂಬಲವೂಇದೆ.

Advertisement

ಗೋಹತ್ಯೆ ನಿಷೇಧ ಹಿಂತೆಗೆಯುತ್ತೇವೆ, ಮತಾಂತರ ನಿಷೇಧ ಹಿಂಪಡೆಯುತ್ತೇವೆ ಎಂಬುದಾಗಿ ಕಾಂಗ್ರೇಸಿಗರು ಮುಕ್ತವಾಗಿಯೇ ಹೇಳುತ್ತಾರೆ. ಆದರೆ ನಿಮ್ಮಲ್ಲಿ ಜನಸಂಖ್ಯಾನಿಯಂತ್ರಣ ಕಾನೂನು ಮಾಡುವ ತಾಕತ್ತು ಇದೆಯಾ? ಸಮಾನ ನಾಗರಿಕ ಸಂಹಿತೆ ತರುವ ತಾಕತ್ತು ಇದೆಯಾ..? ದೇವಾಲಯಗಳನ್ನು ಸರಕಾರದಿಂದ ಮುಕ್ತ ಮಾಡುವ ತಾಕತ್ತು ಇದೆಯಾ? ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯನ್ನೂ ಶಿಖಂಡಿಗಳಂತೆ ವಿರೋಧ ಪಕ್ಷಕ್ಕೆ ಹೆದರಿ ವಿಸರ್ಜಿಸಿದವರು ನೀವು.

ಪರೇಶ್ ಮಾಸ್ತನ ಭೀಕರ ಹತ್ಯೆ ಸಹಜ ಸಾವು ಎಂದು ರೀಪೋರ್ಟ್ ಬಂದಾಗ ನಿಮ್ಮ ಪ್ರತಿಕ್ರಿಯೆ ಏನಿತ್ತು ? ಅದು ಸಹಜ ಸಾವಾ? ಸರ್ಕಾರ ನಿಮ್ಮದೇ ಇತ್ತಲ್ಲವಾ? ಡಿಕೆ ರವಿ ಹತ್ಯೆ ಕೇಸಿಗೆ ನ್ಯಾಯ ಒದಗಿಸಿದಿರಾ? DYSP ಗಣಪತಿಯವರು ತನ್ನ ಸಾವಿಗೆ ಯಾರು ಕಾರಣ ಎಂಬುದಾಗಿ ವಿಡಿಯೋ ಮಾಡಿ ಸತ್ತಿದ್ದಾರೆ. ಅದರ ತನಿಖೆ ಏನಾಯಿತು? ಡಿಕೆಶಿ ಅನಾರೋಗ್ಯದ ಕಾರಣ ಕೊಟ್ಟು ಜಾಮೀನು ಪಡೆದು ಪಾರ್ಟಿ ಕೆಲಸ ಮಾಡುವಾಗ ನೀವೇಕೆ ಇದನ್ನು ಕೋರ್ಟಿನಲ್ಲಿ ಪ್ರಶ್ನಿಸಲಿಲ್ಲ?

Advertisement

ಬಿಜೆಪಿ ನಾಯಕರಲ್ಲಿ ಒಳ ಒಪ್ಪಂದದೊಂದಿಗೆ ವ್ಯವಹಾರ ನಡೀತಿದೆ ಎನ್ನುವುದು ಜನರಿಗೆ ಚೆನ್ನಾಗಿ ಅರಿವಿಗೆ ಬಂದಿದೆ. ಕಾಂಗ್ರೇಸಿಗರಿಗೆ ಹಣ ಕೊಟ್ಟರೆ ಸರಕಾರೀ ಖಚೇರಿಗಳಲ್ಲಿ ಕೆಲಸ ಆಗುತ್ತದೆ. ಆದರೆ ಬಿಜೆಪಿಯವರಿಗೆ ಹಣ ಕೊಟ್ಟರೂ ಕೆಲಸ ಆಗುವುದಿಲ್ಲ ಎನ್ನುವಷ್ಟು ಬೀಜೇಪಿಯ ಕೀರ್ತಿ ಬಿಜೆಪಿಯ ಕಾರ್ಯಕರ್ತರ ಬಾಯಲ್ಲೇ ಕೇಳುತ್ತದೆ. ಬಿಜೆಪಿಕಾರ್ಯಕರ್ತರು ಕಾಂಗ್ರೇಸ್ ನಾಯಕರ ಕೈಗೆ ಫೈಲ್ಕೊಟ್ಟು ಹಣಕೊಟ್ಟು ಕೆಲಸಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದರೆ ನಿಮ್ಮದು ಜನಹಿತದ ಆಡಳಿತವಾ? ನೀವೆಲ್ಲಾ ಪ್ರಮಾಣಿಕರಾ?

ಮೋದಿ, ಯೋಗಿ ಯಾರೇ ಬರಲಿ ಒಂದು ವಸ್ತುವಿಗೆ ಮಾರುಕಟ್ಟೆಗೆ ಬಿಡುವಾಗ ಜಾಹೀರಾತಿನ ಅವಶ್ಯಕತೆ ಇರುತ್ತದೆ. ಆಗ ಜನ ಒಮ್ಮೆ ಅದನ್ನು ಖರೀದಿಸುತ್ತಾರೆ. ಆದರೆ ಆ ವಸ್ತು ನಿರಂತರ ಚಲಾವಣೆಯಲ್ಲಿರಬೇಕಾದರೆ ಅದರ ಗುಣಮಟ್ಟ ಉತ್ತಮವಾಗಿರಬೇಕು. ಕಳಪೆಗುಣಮಟ್ಟದ ವಸ್ತುವಿಗೆ ಎಷ್ಟೇಜಾಹೀರಾತು ಕೊಟ್ಟರೂ ಜನ ಅದನ್ನು ಖರೀದಿಸುವುದಿಲ್ಲ. ಕರ್ನಾಟಕ ಬಿಜೆಪಿ ನಾಯಕರದ್ದೂ ಇದೇ ಹಣೆಬರಹ.

Advertisement

ಯೋಗಿ ಮೋಡೆಲ್ ಇಡೀ ದೇಶದಲ್ಲಿ ಮನೆಮಾತಾಗಿದೆ. ನಮ್ಮ ರಾಜ್ಯದ ‘ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಡೈಲಾಗ್ ಇಡೀ ದೇಶದ ಕಾಮಿಡಿಯಾಗಿದೆ. ಸಂಘದ ನಾಯಕರೂ ಹಲ್ಲಿಲ್ಲದ ಹಾವಿನಂತಾಗಿದ್ದಾರೆ. ಪ್ರಶ್ನೆಮಾಡುವ ಸ್ವಯಂಸೇವಕರನ್ನು ದೂರ ಇಡುತ್ತಾರೆ. ಅಧಿಕಾರದ ಆಸೆಗೆ ಬಿಜೆಪಿ ಆಪರೇಶನ್ ಕಮಲ ಮಾಡ ಹೊರಟಾಗ ಎಲ್ಲರೂ ಮೌನವಾಗಿಯೇ ಸಮ್ಮತಿಸಿದ್ದರು. ಈಗ ಬಿಜೆಪಿಯಲ್ಲಿ ಅರ್ಧ ಜನ ಹೊರಗಿನಿಂದ ಬಂದವರಿದ್ದಾರೆ ಎನ್ನುತ್ತಾರೆ.

ಸಂಘ ಪರಿವಾರದಿಂದಲೇ ಬಂದ ಸುನೀಲ್ ಕುಮಾರ್, ಸಿ ಟಿ ರವಿ, ನಳಿನ್ಕುಮಾರ್, ಇವರೆಲ್ಲಾ ಪ್ರಾಮಾಣಿಕರಾ? ಕಾರ್ಯಕರ್ತರನ್ನು ಕೇಳಿದರೆ ಉತ್ತರಹೇಳುತ್ತಾರೆ. ಇಂದು ಬಿಜೆಪಿಯಲ್ಲಿ ಎದುರು ನಿಲ್ಲಿಸಿ ತೋರಿಸಬಹುದಾದ ಪ್ರಮಾಣಿಕ ಸಂಘದ ಸ್ವಯಂಸೇವಕ ಶಾಸಕರು ಎಷ್ಟಿದ್ದಾರೆ? ಯಾರಿದ್ದಾರೆ ? ಇಡೀ ಸಮಾಜವನ್ನು ಮುನ್ನಡೆಸುವ ನಾಯಕತ್ವಗುಣವಿರುವ ಪ್ರಾಮಾಣಿಕ ನಾಯಕರು ಯಾರಿದ್ದಾರೆ ? ಸಂಘದಂಗಳದಲ್ಲಿ ಬೆಳೆದವರು ಹೆಚ್ಚಿನವರು ಪೀಟೀಲು ಬಾರಿಸುವವರೇ ಆಗಿದ್ದಾರೆ. ಇದೊಂದು ಸ್ವಯಂಕೃತ ಅಪರಾಧ ಇದೊಂದು ಆತ್ಮಹತ್ಯೆ. ಇದೊಂದು ನಿಸ್ವಾರ್ಥ, ಸಮರ್ಪಣಾ ಭಾವದ ಪ್ರಾಮಾಣಿಕ ಕಾರ್ಯಕರ್ತರ ಕೊಲೆ. *ಇದು ಮೋದಿ-ಯೋಗಿ ಇವರಿಗೆ ಮಾಡಿದ ಘೋರ ಅವಮಾನ.* ಇದೊಂದು ಹಿಂದುತ್ವದ ಪಾರ್ಟಿ ಎನ್ನುವ ವಿಡಂಬನೆ.

Advertisement

ರಾಜ್ಯ ಬಿಜೆಪಿ ಈ ಕೂಡಲೇ ಎಚ್ಚೆತ್ತು ಸಂಪೂರ್ಣ ಪಕ್ಷವನ್ನು ಪುನಹ ರಚಿಸದೇ ಹೋದಲ್ಲಿ ಯೋಗ್ಯರನ್ನು, ಪ್ರಾಮಾಣಿಕ ರಾಷ್ಟ್ರವಾದಿಗಳನ್ನು ಉನ್ನತ ಸ್ಥಾನದಲ್ಲಿ ಪ್ರತಿಷ್ಟಾಪಿಸದೇ ಹೋದಲ್ಲಿ ಮೃತ್ಯುವಿಗೆ ಎದೆಕೊಟ್ಟು ನಿಲ್ಲುವ ಹಿಂದೂ ನಾಯಕರನ್ನು ಬೆಳೆಸದೇ ಇದ್ದಲ್ಲಿ, ಜಾತಿ ರಾಜಕಾರಣದ ಬಾಲದಲ್ಲಿ ನೇತಾಡುವ ಬುದ್ಧಿಯನ್ನು ಬಿಡದೇ ಹೋದಲ್ಲಿ, ಕರ್ನಾಟಕದ ಬಿಜೆಪಿಗೂ ಭವಿಷ್ಯ ಇಲ್ಲ, ಕರ್ನಾಟಕದ ಹಿಂದುಗಳಿಗೂ ಭವಿಷ್ಯ ಇಲ್ಲ.

ಬಿಜೆಪಿಯ ನಾಯಕರು ಮುಂದಿನ ಬಾರಿ ಅಧಿಕಾರಕ್ಕೆ ಬರಲು ಹಿಂದು ಕಾರ್ಯಕರ್ತರ ಹೆಣ ಬೀಳುವುದನ್ನು ರಣಹದ್ದುಗಳಂತೆ ನೋಡುತ್ತಾ ಕುಳಿತುಕೊಳ್ಳದಿರಲಿ. ಸಂಘದ ಹಿರಿಯರು ರಾಜಕೀಯ ನಮ್ಮ ಕೆಲಸ ಅಲ್ಲ ಅದು ಬಿಜೆಪಿಯ ಕೆಲಸ ಎನ್ನುತ್ತಾ ಅಲ್ಲಿ ನಡೆಯುವ ಅನ್ಯಾಯಗಳನ್ನು ನೋಡಿಯೂ ತಪ್ಪೆನ್ನುವ ಅರಿವಿದ್ದೂ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿನ ಸಭೆಯಲ್ಲಿ ಉಪಸ್ಥತರಿದ್ದ ಭೀಷ್ಮದ್ರೋಣರಂತೆ ಮೌನವಹಿಸಿ ಸಂಪೂರ್ಣ ಕುಲನಾಶಕ್ಕೆ ಕಾರಣರಾಗದಿರಲಿ. ಇಂದಿನಿಂದ ಪುನಃ ಮುಂದಿನ ಯುದ್ಧಕ್ಕೆ ಕಾರ್ಯಕರ್ತರ ಸೇನೆಯನ್ನು ಸಿದ್ಧಮಾಡುವ ಕೆಲಸ ನಡೆಯಲಿ. ಆದರೆ ಸೈನ್ಯದ ನೇತೃತ್ವವಹಿಸುವವನು ಉತ್ತರ ಕುಮಾರನಾಗದಿರಲಿ.

Advertisement

ಇದು ಒಬ್ಬ ಅಸಹಾಯಕ ಕಾರ್ಯಕರ್ತನಾಗಿ ದೇವರಲ್ಲಿ ಮಾಡುವ ಪ್ರಾರ್ಥನೆ. *ಬಿಜೆಪಿ ಮುಖಂಡರಿಗೆ ಬುದ್ಧಿ ಕೊಡು, ಸಂಘದ ಹಿರಿಯರಿಗೆ ವಿವೇಕ ಕೊಡು. ಹಿಂದುತ್ವದ ಕಾರ್ಯಕರ್ತರಿಗೆ ಸಮಾಜದಲ್ಲಿ ಶಕ್ತಿಕೊಡು, ಪಾರ್ಟಿಯಲ್ಲಿ ಮರ್ಯಾದೆ ಕೊಡು..

ನಟೇಶ್ ಉಡುಪ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?

ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…

8 hours ago

ಮೊಗ್ರದಲ್ಲಿ ಕಾಲಾವಧಿ ನೇಮ

https://youtu.be/YgcAfgYUbGQ?si=vp1TmN5dQYAkVPBy

23 hours ago

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

3 days ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

3 days ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

3 days ago