ಕನ್ನಡ ಸಾಹಿತ್ಯ ಪರಿಷತ್ತು | ವಿವಿಧ ದತ್ತಿ ಪ್ರಶಸ್ತಿಗಳಿಗೆ 49 ಕೃತಿ ಆಯ್ಕೆ | ದ ಕ ಜಿಲ್ಲೆಯ ಹಲವರಿಗೆ ಬಹುಮಾನ |

February 16, 2023
4:55 PM

ಕನ್ನಡ ಸಾಹಿತ್ಯ ಪರಿಷತ್ತು 2021 ನೇ ಸಾಲಿನ ವಿವಿಧ ದತ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾ.12 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ್‌ ಜೋಶಿ ತಿಳಿಸಿದ್ದಾರೆ. ಈ ಪ್ರಶಸ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಡಾ.ಚಂದ್ರಶೇಖರ ದಾಮ್ಲೆ, ಡಾ.ದೀಪಾ ಫಡ್ಕೆ, ಡಾ.ಮುರಳಿಮೋಹನ ಚೂಂತಾರು, ಸ್ಮಿತಾ ಅಮೃತ್‌ರಾಜ್‌, ಡಾ.ಎಚ್‌ ಜಿ ಶ್ರೀಧರ್ ಸೇರಿದಂತೆ ಹಲವು ಪ್ರಮುಖರು ಸೇರಿದ್ದಾರೆ.

2021 ಜನವರಿಯಿಂದ ಡಿಸೆಂಬರ್‌ ಅಂತ್ಯದೊಳಗೆ ಪ್ರಕಟಗೊಂಡ ಕೃತಿಗಳನ್ನು ಈ ಸಾಲಿನ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2000 ಕ್ಕೂ ಹೆಚ್ಚು ಲೇಖಕರು ಹಾಗೂ ಪ್ರಕಾಶಕರು ಕೃತಿಗಳನ್ನು ಕಳುಹಿಸಿದ್ದರು .ಅದರಲ್ಲಿ ಈ ಆಯ್ಕೆ ನಡೆದಿದೆ. ಈ ಬಹುಮಾನಕ್ಕೆ ಆಯ್ಕೆಯಾದವರಲ್ಲಿ ಡಾ.ಮುರಳಿಮೋಹನ ಚೂಂತಾರು ಅವರ ಸಂಗಾತಿ , ಡಾ.ಎಚ್‌ ಜಿ ಶ್ರೀಧರ್‌ ಅವರ ಚಪಡ(ಕಾದಂಬರಿ), ಡಾ.ಚಂದ್ರಶೇಖರ ದಾಮ್ಲೆ ಅವರ ನನ್ನ ಮಗಳು ತುಂಟಿ ಅಲ್ಲ, ಡಾ.ದೀಪಾ ಫಡ್ಕೆ ಅವರ ಮುಂದಣ ಹೆಜ್ಜೆ , ಸ್ಮಿತಾ ಅಮೃತ್‌ರಾಜ್‌ ಅವರ ನೆಲದಾಯ ಪರಿಮಳ, ಯಶಸ್ವಿನಿ ಕದ್ರಿ ಅವರ ಊರು ಹೇಳಿದ ಕಥೆ, ಬಿ ಸತ್ಯವತಿ ಎಸ್‌ ಭಟ್‌ ಕೊಳಚಿಪ್ಪು ಅವರ ನವಿಲಗರಿ ಕೃತಿ, ನಿರ್ಮಲ ಸುರತ್ಕಲ್‌ ಅವರ ನಿತ್ಯಪುಷ್ಪ ಮತ್ತು ಗೂಗಲ್‌ ಗುರು ಎಂಬ ಕೃತಿಗಳು ಆಯ್ಕೆಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror