Advertisement
MIRROR FOCUS

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೊಳಗಿತು ಕಸ್ತೂರಿ ರಂಗನ್‌ ವರದಿಯ ವಿರುದ್ಧ ಜನಾಂದೋಲನ

Share

ಕಸ್ತೂರಿ ರಂಗನ್‌ ವರದಿಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮತ್ತೆ ಜನಾಂದೋಲನ ಆರಂಭವಾಗಿದೆ. ಈ ವರದಿಯ ವಿರುದ್ಧ ಗ್ರಾಮೀಣ ಭಾಗದಲ್ಲಿ  ಚರ್ಚೆ ಹಾಗೂ ವಿರೋಧದ ಅಲೆ ಹೆಚ್ಚಾಗಿದೆ. ಇದೀಗ ನ.27  ರಂದು ಸುಳ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಲಿದೆ. ಇದಕ್ಕೂ ಪೂರ್ವಬಾವಿಯಾಗಿ ವಿವಿಧ ಗ್ರಾಮಗಳಲ್ಲಿ  ಜನಜಾಗೃತಿ ಕಾರ್ಯಕ್ರಮ ನಡೆಯಿತು.

Advertisement
Advertisement

ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರಾಜಕೀಯ ರಹಿತವಾಗಿ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆಗೆ ಪೂರ್ವತಯಾರಿ ನಡೆಯುತ್ತಿದೆ. ಈ ಸಭೆಯ  ಪೂರ್ವಭಾವಿಯಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ನ.21 ರಂದು ಮಧ್ಯಾಹ್ನ ಕುಕ್ಕೆ ಸುಬ್ರಹ್ಮಣ್ಯ ದಿಂದ ಹೊರಟು ಸುಳ್ಯದಲ್ಲಿ ಸಮಾರೋಪಗೊಂಡಿತು.

ಸುಬ್ರಹ್ಮಣ್ಯದಲ್ಲಿ ಪತ್ರಕರ್ತ ಮಹೇಶ್‌ ಪುಚ್ಚಪ್ಪಾಡಿ ಹಾಗೂ ರಾಜಕೀಯ ನೇತಾರ ಹರೀಶ್‌ ಇಂಜಾಡಿ ಸಭೆಯನ್ನುದ್ದೇಶಿ ಮಾತನಾಡಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪತ್ರಕರ್ತ ಮಹೇಶ್‌ ಪುಚ್ಚಪ್ಪಾಡಿ ,ಕಸ್ತೂರಿ ರಂಗನ್ ವರದಿಯು ಜಿಪಿಎಸ್ ಆಧಾರಿತ ಸರ್ವೇಯ ಫಲಶ್ರುತಿಯಾಗಿದೆ.ಜಿಪಿಎಸ್ ಆಧಾರಿತ ಸರ್ವೆಯು ಸತ್ಯಾಂಶಕ್ಕೆ ದೂರವಾಗಿರುತ್ತದೆ.ಗ್ರಾಮೀಣ ಭಾಗದ ಜನರ ಅಭಿಪ್ರಾಯವನ್ನು ಪಡೆಯದೆ ಜಿಪಿಎಸ್ ತಂತ್ರಜ್ಞಾನದ ಮೊರೆ ಹೋಗಿ ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದು ಶೋಚನೀಯ. ಆದುದರಿಂದ ಈ ಯೋಜನೆಯ ವಿರುದ್ದವಾಗಿ ಜನತೆ ಮಾತನಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಹೋರಾಟವೇ ಬದುಕಲ್ಲ ಆದರೆ ಬದುಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಇದೀಗ ಗ್ರಾಮೀಣ ರೈತರಿಗೆ ಬಂದೊಂದಗಿದೆ. ರಾಜಕೀಯ ರಹಿತವಾಗಿ ಇಂತಹ ಯೋಜನೆಗಳ ವಿರುದ್ದ ಜನತೆ ಹೋರಾಟ ಮಾಡಬೇಕಾದುದು ಅನಿವಾರ್ಯವಾಗಿದೆ.ಕೃಷಿಕರ ಬದುಕಿಗೆ ತೊಂದರೆಯಾಗುವ ಇಂತಹ ಯೋಜನೆಗಳ ವಿರುದ್ದ ಜನತೆ ಜಾಗೃತರಾಗಬೇಕು. ಆದರೆ ಎಲ್ಲಾ ಜನಪರವಾದ ಯಾವುದೇ ಹೋರಾಟಗಳನ್ನು ರಾಜಕೀಯ ಕಣ್ಣಿನಿಂದ ನೋಡುವುದನ್ನು ಬಿಡಬೇಕು, ಜನರ ರಕ್ಷಣೆಯತ್ತ, ಧೈರ್ಯ ನೀಡುವತ್ತ ಗಮನಹರಿಸಬೇಕಿದೆ ಎಂದರು.

ಈ ಸಂದರ್ಭ ಪ್ರಮುಖರಾದ ಹರೀಶ್ ಇಂಜಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶೀರಾಡಿ, ರವೀಂದ್ರ ಕುಮಾರ್ ರುದ್ರಪಾದ, ಕಮಲಾಕ್ಷ ಮುಳ್ಳುಬಾಗಿಲು, ಬಾಲಕೃಷ್ಣ ಮರೀಲ್, ಮೋಹನದಾಸ ರೈ, ಸುರೇಶ್ ಉಜಿರಡ್ಕ, ಜಯರಾಮ ಕಟ್ಟೆಮನೆ, ಶೈಲೇಶ್ ಕಟ್ಟೆಮನೆ ಮೊದಲಾದವರು ಉಪಸ್ಥಿತರಿದ್ದರು.

 


ಬಳಿಕ ದ್ವಿಚಕ್ರ ವಾಹನ ಜಾಥಾವು ಆರಂಭಗೊಂಡಿತು. ಜಾಗೃತಿ ಜಾಥಾವು ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳ ಮೂಲಕ ಸಂಚರಿಸಿ ಗುತ್ತಿಗಾರನ್ನು ತಲುಪಿತು.ಗುತ್ತಿಗಾರಿನಲ್ಲಿ ಜನಜಾಗೃತಿಸಭೆಯು ನಡೆಯಿತು.ಸಭೆಯನ್ನು ಉದ್ದೇಶಿಸಿ ಪ್ರಮುಖರಾದ ನಿತ್ಯಾನಂದ ಮುಂಡೋಡಿ, ವೆಂಕಟ್ ದಂಬೆಕೋಡಿ, ಲಕ್ಷ್ಮೀಶ ಗಬ್ಲಡ್ಕ ಮಾತನಾಡಿದರು. ವಿವಿದೆಡೆ ನಡೆದ ಜಾಗೃತಿ ಸಭೆಯಲ್ಲಿ ಪ್ರಮುಖರು ಮಾತನಾಡಿದರು.

 

 

 

 

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

7 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

7 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

7 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

8 hours ago

ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ರೀತಿ ತೊಂದರೆಯಾಗದಂತೆ  ಅಗತ್ಯ ಕ್ರಮ…

8 hours ago

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

18 hours ago