ಅಂತರಾಷ್ಟ್ರೀಯ ಮಟ್ಟ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಇವರು ಆಯೋಜಿಸಿರುವ ಅಕ್ಷರದವ್ವ ಸಾವಿತ್ರಿ ಬಾಪುಲೆ ಬಗ್ಗೆ ನಡೆಯುವ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಡಾ | ವಾಣಿಶ್ರೀ ಕಾಸರಗೋಡು ಬರೆದಿರುವ ಕವನಕ್ಕೆ ಪ್ರಥಮ ಬಹುಮಾನ ಬಂದಿರುತ್ತದೆ. ಈ ಕವನ ಇಲ್ಲಿದೆ….
ಸಾವಿರಾರು ದೀಪಗಳನ್ನು ಹಚ್ಚಿದ
ಆಧುನಿಕ ಶಿಕ್ಷಣದ ತಾಯಿ
ಅಕ್ಷರಸ್ತ ಪ್ರತೀ ಮಹಿಳೆಯ ಮನದಲ್ಲಿ
ನೆಲೆಸಿರುವ ಸಾವಿತ್ರಿ ಭಾಯಿ
ಧಮನಿತ ಸಮುದಾಯದ ಶಿಕ್ಷಣಕ್ಕಾಗಿ
ಶಾಲೆಯನ್ನು ಸ್ಥಾಪಿಸಿದ ಕ್ರಾಂತಿಕಾರಿ
ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ
ಅದ ನನಸಾಗಿಸಲು ಶ್ರಮಿಸಿದ ರೂವಾರಿ
ಬ್ರಿಟಿಷ್ ಸರಕಾರದಿಂದ ಭಾರತದ ಪ್ರಥಮ
ಒಳ್ಳೆಯ ಅದ್ಯಾಪಕಿ ಬಿರುದು ಪಡೆದ ಕೀರ್ತಿ
ವಿಧವೆಯರ ತಲೆ ಬೋಳಿಸುವ ಪದ್ದತಿಯ
ಪ್ರಭಲವಾಗಿ ವಿರೋಧಿಸಿದ ಹೋರಾಟಗಾರ್ತಿ
ಅನಾಥ ಮಕ್ಕಳ ಪಾಲನೆಗೈಯುವ ಪುನರ್ವಸತಿ
ಕೇಂದ್ರವ ಸ್ಥಾಪಿಸಿ ಬದುಕಿಗೆ ನೆಲೆಕೊಟ್ಟ ಸಾಧಕಿ
ಮೊಟ್ಟ ಮೊದಲು ಕಾನೂನು ಸಲಹೆ ಪಡೆದು
ಮದುವೆ ಮಾಡಿ ಇತಿಹಾಸ ಬರೆದ ಶಿಕ್ಷಕಿ
ಹೆಣ್ಣೊಬ್ಬಳು ಶಿಕ್ಷಕಿಯಾಗೋದು ಧರ್ಮಕ್ಕೂ
ಸಮಾಜಕ್ಕೂ ದ್ರೋಹ ಬಗೆದಂತೆ ಅನ್ನುವರಿಲ್ಲಿ
ತಳ ಸಮುದಾಯದ ಹೆಣ್ಣು ಮಕ್ಕಳ
ಶಾಲೆ ತೆರೆದರು ಪೂಣೆಯಲ್ಲಿ
ಬಾರತದ ದಿಟ್ಟ ಹೋರಾಟಗಾರ್ತಿ ಪ್ರಥಮ ಶಿಕ್ಷಕಿ
ಖಾದಿ ಸೀರೆಯಲಿ ದಣಿವರಿಯದ ಸತ್ಯಶೋಧಕಿ
ಸ್ತ್ರೀ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟ ಸಾಧಕಿ
ಪ್ಲೇಗ್ ರೋಗಿಗಳ ಸೇವೆಯಲ್ಲಿ ಪ್ಲೇಗಿಗೆ ಬಲಿಯಾದ ನಾಯಕಿ
# ಡಾ | ವಾಣಿಶ್ರೀ ಕಾಸರಗೋಡು