ದ್ಯಾವ್ರೆ ಮಳೆ ಹರ್ಸ್…

March 15, 2023
9:32 AM
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಕುದ್ರಿಕೆ ಬೊತ್ತು ಈ ಸೆಕೇಲಿ…
ಕೆರೆಲೂ ನೀರಿಲ್ಲೆ , ಬಾಮೀಲೂ ನೀರಿಲ್ಲೆ.
ಬೆವ್ರ್ ಮಾತ್ರ ಒಂದೇ ಸಮನೆ ಅರ್ದದೆ….
ಅಯ್ಯೋ ದ್ಯಾವ್ರೆ ಮಳೆ ಯಾಗ ಬಂದಾದೆ
ಮೊಣ್ಣ್‌ನು ಒಂಣಿಗಿಟ್ಟು, ಹೂಬೊಳ್ಳಿ ಕರ್ಚಿಂಟ್ಟು.
ಬೋರುನಾ ನೀರ್‌ನು ತುರ್ ತುರ್ ಹಾರ್ದೆ
ದನ ಕರ್ ಗು ತಿಂಬಾಕೆ ಹುಲ್ಲಿಲ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಕಾಡ್ ಗು ಕಿಚ್ಚಿ ಬಿದ್ದುಟ್ಟು….
ಊರಿಗೆ ಊರೆ ಕರ್ಂಚ್‌ತ್ತಾ ಉಟ್ಟು
ಪಚ್ಚೆ ಭೂಮಿ ಕೆಂಪಾಗಿ ಹೋವ್ಟು…..
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಬಿಸ್‌ಲ್‌ಲಿ ಹೊರೆಗೆ ಹೊರ್ಡಿಕೆ ಬೊತ್ತು
ಸೆಕೆಲಿ ಒಳೆಗೆ ಕುದ್ರಿಕೆ ಬೊತ್ತು…
ಮಲ್ಗಿರೆ ಕಣ್ಣ್‌ಗೆ ನಿದ್ದೆನೂ ಬಾದ್ಲೆ……
ಓ ದ್ಯಾವ್ರೆ ಮಳೆ ಯಾಗ ಬಂದಾದೆ
ಒಮ್ಮೆ ಕಣ್ಬುಟ್ಟು ಚೂರಾರ್ ಮಳೆ ಹರ್ಸ್
ಭೂಮಿನ ತೊಂಪು ಮಾಡ್
ದಮ್ಮಯ್ಯಾ ದ್ಯಾವ್ರೆ ಬೆಂದೊಕೆ ಮುಂದೆ ಮಳೆ ಹರ್ಸ್…..
 
ಬರಹ :
ಅಪೂರ್ವ ಚೇತನ್ ಪೆರುಂದೋಡಿ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

700 ಕ್ಕೂ ಅಧಿಕ ರೆಸಿಪಿ | ದಿವ್ಯ ಮಹೇಶ್‌ ಅವರಿಗೆ “ಪಾಕ ಪ್ರವೀಣೆ” ಪ್ರಶಸ್ತಿ
August 5, 2025
8:05 AM
by: ದ ರೂರಲ್ ಮಿರರ್.ಕಾಂ
ವಿಶ್ವದಲ್ಲಿ ಅಡಿಕೆ ಕೃಷಿ ಹೇಗಿದೆ..? ಭಾರತದಲ್ಲಿ ಅಡಿಕೆ ಆಮದು ಎಷ್ಟು..?
August 5, 2025
7:22 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು
August 3, 2025
8:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಬೀಜ ಮತ್ತು ಕಾಳು ಪಲ್ಯ
August 2, 2025
6:57 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group