ಕನಸಿನ ದಾರಿಯಲಿ ಸಾಗೋಣ ಬಾ ಸಖ
ಒಂಟಿ ಹೆಜ್ಜೆ ಸಾಕಿನ್ನು ,ಜಂಟಿಯಾಗೋಣ ಬಾ ಸಖ
ಒಲವಿನ ರಾಗವು ,ಮನ ಪಟಲದಿ ಮೊಳಗುತಿದೆ
ಕಂಡ ಕನಸಗಳನು ,ನನಸಾಗಿಸಲು ಜೊತೆ ಸೇರು ಬಾ ಸಖ
ಹರೆಯದ ಬಯಕೆಗಳದು, ಪ್ರಜ್ವಲಿಸುವ ತಾರೆಗಳಂತೆ
ತೋಳೋಳಗೆ ಬೆರೆತು, ತಂಗಾಳಿಯ ಸವಿಯೋಣ ಬಾ ಸಖ
ನಂಜಿನ ಕಂಗಳು ದಿಟ್ಟಿಸಿವೆ ,ಉರಿವ ಪಂಜಂತೆ
ಸಗ್ಗವೇ ನಾಚುವಂತೆ ,ನಲುಮೆಯಲಿ ನಡೆಯೋಣ ಬಾ ಸಖ
ಗಾಲಿಗಳೆರಡು ಜೊತೆಯಲಿ ಸಾಗಲು,ಪಯಣವು ಸುಖವಂತೆ
ಹೆಜ್ಜೆಗೆಜ್ಜೆಗಳ ಕೂಡಿಸಿ ,ನಾವು ಬೆರೆತು ಬಾಳೋಣ ಬಾ ಸಖ
#ಅಪೂರ್ವ ಚೇತನ್ ಪೆರಂದೋಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel