ಮನ್ಸ್ ನ ಕದ್ದಂವ,ಕನ್ಸ್ ಲಿ ಬಂದಂವ
ತಣ್ಣಂಗೆ ಬೀಸುವ ಗಾಳಿಲಿ
ನಂಗೆ ಒಂದು ಪತ್ರ ಕಳ್ಸಿದಂವ
ಅಂವ ನನ್ನಂವ…..
ಕಣ್ಣ್ ನ ರೆಪ್ಪೆಲಿ ಪೆನ್ಸಿಲ್ ಹಿಡ್ದ್
ಮನ್ಸ್ ನ ಕನ್ನಡಿಲಿ ಚಿತ್ರ ಬುಡ್ಸಿ
ನಿದ್ದೆ ಕದ್ದ್ ಓಡ್ದಂವ
ಅಂವ ನನ್ನಂವ….
ನನ್ನ ಕನ್ಸ್ ಗಳಿಗೆ ಗರಿ ಕಟ್ಟಿ
ನನ್ನ ಹೆಜ್ಜೆ ಒಟ್ಟಿಗೆ ಹೆಜ್ಜೆ ಹಾಕಿ
ಪ್ರೀತಿನ ದೋಣಿಲಿ ನನ್ನ ಸುತ್ತಾಡ್ಸಿದಂವ
ಅಂವ ನನ್ನಂವ….
ಹಣೆಗೆ ಕುಂಕುಮ ಬೊಟ್ಟು ಇಸಿ
ಕಿನೆ ಬೆರ್ಳ್ ಹಿಡ್ದ್ ,ಏಳ್ ಹೆಜ್ಜೆ ನಡ್ದ್
ನನ್ನ ಬದ್ಕಿಗೆ ಬೆಳಕಾದಂವ
ಅಂವ ನನ್ನಂವ….
# ಅಪೂರ್ವಚೇತನ್ ಪೆರಂದೋಡಿ
ವಿಧಾನ ಪರಿಷತ್ ಇಂದು ಬೆಳಗ್ಗೆ ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನೋತ್ತರ ಕಲಾಪಕ್ಕೆ…
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಮನಗರ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಜಿಲ್ಲೆಯ…
ಬೇಸಿಗೆ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಾರ್ಗವನ್ನು ಮತ್ತಷ್ಟು…
ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…