ಕಸವನು ಸುರಿವರು ಬೀದಿಯ ಬದಿಯಲಿ
ಸ್ವಚ್ಛತೆ ಎಲ್ಲಿದೆ ಹೇಳಮ್ಮ
ತುಚ್ಛ ಮನುಜರು ಹಾದಿಯ ಬಿಡುವರೆ
ಹುಚ್ಚರು ಇವರು ತಿಳಿಯಮ್ಮ ||
ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು
ಕೆಟ್ಟ ವಾಸನೆ ಹಬ್ಬುತಿದೆ
ರೋಗದ ಮಾರಿಯು ಕಾಯುತ ಕೂರಲು
ಪಕ್ಕದ ಜನರನು ಕಾಡುತಿದೆ ||
ನಿತ್ಯದ ಬದುಕಲಿ ನರಕದ ದರ್ಶನ
ಸಹಿಸಲಸಾಧ್ಯದ ವಾಸನೆಯು
ನಿಷ್ಠೆಯ ಪಥದಲಿ ಸಾಗಿರಿ ಮನುಜರೆ
ಮಾಡಲೇ ಬೇಡಿರಿ ಮೋಸವನು ||
ನಾಳಿನ ಬಾಳಿಗೆ ಕೊಳ್ಳಿಯ ಇಡುವರು
ಮಳ್ಳಿಯ ಹಾಗೆ ನಡೆಯುತಲಿ
ಬಾಳಿನ ಮೂಲಕೆ ಕುತ್ತನು ತರುವರು
ಮುಳ್ಳಿನ ಕೂಪಕೆ ಬೀಳುತಲಿ ||
ನಮ್ಮನೆ ಕಸವನು ತಿಪ್ಪೆಗೆ ಎಸೆಯದೆ
ಒಳ್ಳೆಯ ಗೊಬ್ಬರ ಮಾಡೋಣ
ಕಸದಿಂದ ರಸವನು ತಪ್ಪದೆ ಗಳಿಸುತ
ಸ್ವಸ್ಥತೆಯನ್ನು ಪಡೆಯೋಣ ||
ಪರಿಸರ ಕಾಳಜಿ ನಮ್ಮಲಿ ಬೆಳೆಯಲಿ
ಸ್ವಚ್ಛ ಭಾರತ ತೋರೋಣ
ಮುಂದಿನ ಜನರಿಗೆ ಬಳುಬಳಿಯಾಗಿಸಿ
ಭೂತಾಯಿಯ ಮಡಿಲಲಿ ನಲಿಯೋಣ ||
#ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement