ನಮ್ಮಯ ಹೆಮ್ಮೆಯ ಕನ್ನಡ ನಾಡಲಿ
ಚಿತ್ರದುರ್ಗವೆನ್ನುವ ನಗರವಿದೆ.
ಐತಿಹ್ಯ ಸಾರುವ ಕಲ್ಲಿನ ಕೋಟೆಯು
ನಗರದ ಮಧ್ಯದಿ ಶೋಭಿಸಿದೆ
ಬಹು ಹಿಂದಿನ ಕಾಲದಿ ನಾಯಕ ಹೊಯ್ಸಳ
ಚಾಲುಕ್ಯರೆಲ್ಲರು ಜೊತೆಗೂಡಿ.
ಏಳು ಸುತ್ತಿನಲಿ ಭದ್ರತೆ ಹೊಂದಿದ
ಕೋಟೆಯ ಕಟ್ಟಿದರೊಡಗೂಡಿ
ಮಸೀದಿ ದೇಗುಲ ಇದರೊಳಗಿರುವುದು
ಹಿಡಿಂಬೇಶ್ವರ ಸಹಿತದಲಿ
ಪಾಂಡವರಂದಿನ ಕಾಲದಿ ಅಜ್ಞಾತ
ವಾಸದಲಿದ್ದರು ಈ ಸ್ಥಳದಿ
ಮದಕರಿನಾಯಕರಾಳಿದ ಕಾಲದಿ
ಧಾಳಿಯನಿಟ್ಟನು ಹೈದರನು
ಒಳಗಡೆ ನುಸುಳುತ ಕಿಂಡಿಯ ಮೂಲಕ
ಬರುತಲಿ ಇದ್ದರು ಶತ್ರುಗಳು
ಮುದ್ದುಹನುಮನ ಪತ್ನಿಯು ಓಬವ್ವ
ಕಂಡಳು ದುರುಳರ ಆಗಮನ
ಮೌನದಿ ಒನಕೆಯ ಹಿಡಿಯುತ ನಸುಳುತ
ಜನರಿಗೆ ಬಡಿದಳು ಪುನಾ ಪುನ
ಒಡನೆಯೆ ದೊರೆಗಳ ಕಿವಿಗದು ಮುಟ್ಟಿತು
ಅರಿಗಳು ನುಸುಳುವ ಸಂಗತಿಯು
ಆದರೆ ಕಪಟದಿ ಓರ್ವನು ಇರಿಯುತ
ಓಬವ್ವಳ ಪ್ರಾಣವ ಹೀರಿದನು
ಒನಕೆಯ ಓಬವ್ವ ಮಾಡಿದ ತ್ಯಾಗವು
ದೇಶದ ಪ್ರೇಮವ ಸಾರುತಿದೆ
ದುರ್ಗದ ಮಹಿಮೆಗೆ ಒಪ್ಪ ಓರಣವ
ನೀಡಿದ ಖ್ಯಾತಿಯ ಕಥೆಯು ಇದೇ.
ಓಬವ್ವನ ಪ್ರತಿಮೆಯು ಇಂದಿಗು ಇರುವುದು
ದುರ್ಗದ ನಗರದಿ ಸಂತೋಷ
ತ್ಯಾಗಕೆ ಅರ್ಥವ ಹುಡುಕುವ ಜನರಿಗೆ
ಬೇರೇತಕೆ ಬೇಕಿದೆ ಸಂದೇಶ
#ಡಾ ವಾಣಿಶ್ರೀ ಕಾಸರಗೋಡು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು,…
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…