ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿ ಕ್ಷೇತ್ರದಲ್ಲಿ ನಾಡಿನ ಜೀವನದಿ ಕಾವೇರಿ ತೀರ್ಥೋದ್ಭವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಕಾ೯ಟಕ ಲಗ್ನದಲ್ಲಿ ಜರುಗಿತು. 1 ಗಂಟೆ 26 ನಿಮಿಷಕ್ಕೆ ಸರಿಯಾಗಿ ಪುಟ್ಟ ಕುಂಡಿಕೆಯಲ್ಲಿ ಕಾವೇರಿ ತನ್ನ ತೀಥ೯ ರೂಪವನ್ನು ತೋರಿದಳು. ಜೀವನದಿ ಕಾವೇರಿ ನಿಗದಿಯಂತೆ ಕರ್ಕಾಟಕ ಲಗ್ನದಲ್ಲಿ ತೀರ್ಥ ರೂಪಿಣಿಯಾಗಿ ನೆರೆದಿದ್ದ ಸಾವಿರಾರು ಭಕ್ತರಿಗೆ ದರ್ಶನ ನೀಡಿದ್ದಾಳೆ. ಮಾತೆ ಕಾವೇರಿಯ ತೀಥ೯ಸ್ವರೂಪವನ್ನು ಕಂಡ ಕಾವೇರಿ ಭಕ್ತರು ಧನ್ಯತಾ ಭಾವ ತಳೆದರು.
ಜೈ ಜೈ ಮಾತಾ ಕಾವೇರಿ ಮಾತ ಎಂಬ ಹಷೋ೯ದ್ಗಾರದೊಂದಿಗೆ ಕಾವೇರಿ ತೀಥೋ೯ದ್ವವವನ್ನು ತಲಕಾವೇರಿ ಕ್ಷೇತ್ರದಲ್ಲಿ ಸೇರಿದ್ದ ಭಕ್ತರು ವೀಕ್ಷಿಸಿ ಪುನೀತರಾದರು. ತೀಥೋ೯ದ್ವವ ನೆರವೇರುತ್ತಿದ್ದಂತೆಯೇ ಅಚ೯ಕರು ಪವಿತ್ರ ತೀಥ೯ವನ್ನು ಭಕ್ತಾಧಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್, ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂಥರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟರಾಜ, ಜಿ.ಪಂ. ಮುಖ್ಯಕಾಯ೯ನಿವ೯ಹಣಾಧಿಕಾರಿ ವಣಿ೯ತ್ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. ಸಿನಿಮಾ ರಂಗದ ನವ ಜೋಡಿ ಭುವನ್ ಪೊನ್ನಣ್ಣ. ಹರ್ಷಿಕಾ ಪೂಣಚ್ಚ ಕೂಡ ಹಾಜರಿದ್ದರು.
ಕಾವೇರಿ ತೀಥೋ೯ದ್ವವಕ್ಕೆ ಕೊಡಗಿನ ವಿವಿಧೆಡೆಗಳಿಂದ ನಡುರಾತ್ರಿಯ ಕೊರೆಯುವ ಛಳಿಯಲ್ಲಿಯೂ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಭಾಗಮಂಡಲದಿಂದ ತಲಕಾವೇರಿಗೆ ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅಂತೆಯೇ ಸಕಾ೯ರಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕಾವೇರಿ ಕ್ಷೇತ್ರದಲ್ಲೀಗ ಹಬ್ಬದ ಸಂಭ್ರಮ ಕಳೆಗಟ್ಟಿದೆ. ತಲಕಾವೇರಿ ಕ್ಷೇತ್ರದಲ್ಲಿ ಕೊಡಗು ಏಕೀಕರಣ ರಂಗದಿಂದ ಸಹಸ್ರಾರು ಭಕ್ತರಿಗೆ ಇನ್ನು 1 ತಿಂಗಳ ಕಾಲ ಅನ್ನಸಂತಪ೯ಣೆ ನಡೆಯಲಿದೆ. ಬುಧವಾರ ಜಿಲ್ಲೆಯ ವಿವಿಧೆಡೆಗಳಿಂದ ಮಾತ್ರವಲ್ಲದೇ ರಾಜ್ದದ ಹಲವೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕಾವೇರಿ ಕ್ಷೇತ್ರಕ್ಕೆ ಬಂದು ಪುಣ್ಯ ತೀಥ೯ ಸ್ವೀಕರಿಸಲಿದ್ದು ಅನೇಕ ಗ್ರಾಮಗಳಿಂದ ಸಕಾ೯ರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
In Talakaveri field at the foothills of Brahmagiri, Kakatak Lagna took place in the presence of thousands of devotees of Kaveri Titho99dva, the life of the country. At exactly 1 hour and 26 minutes, Kaveri showed its original form in a small bowl. She gave darshan to thousands of devotees who had gathered as Tirtha Rupini in Cancer Lagna as scheduled. Kaveri devotees were thankful to see the form of Mother Kaveri.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…