Advertisement
ಸುದ್ದಿಗಳು

ಪೇರಳೆ ಹಣ್ಣನ್ನು ಆಯ್ಕೆ ಮಾಡುವಾಗ ಈ ಟಿಪ್ಸ್ ನೋಡಿಕೊಳ್ಳಿ

Share
ಮೊದಲೆಲ್ಲ ಪ್ರತಿಯೊಂದು ಮನೆಯಲ್ಲೂ ಪೇರಳೆ ಮರ ಇರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾರುಕಟ್ಟೆಯಿಂದ ಎಲ್ಲವನ್ನೂ ತರುತ್ತಾರೆ. ಆದರಲ್ಲೂ ಬಾಳೆಎಲೆ ಸಹ ಈಗ ಮಾರುಕಟ್ಟೆಯಲ್ಲೇ ಸಿಗುತ್ತದೆ. ಆತರ ಕಾಲ ಬದಲಾವಣೆ ಹೊಂದಿದೆ. ಈಗ ಮಾರುಕಟ್ಟೆಯಲ್ಲಿ ಪೇರಳೆ ಹಣ್ಣಿನದೇ ಕಾರುಬಾರು ಅಂದರೆ ತಪ್ಪಾಗಲಾರದು.
ಈ ಪೇರಳೆ ಹಣ್ಣು ಹೊರಗೆ ಸುಂದರವಾಗಿ ಕಾಣುವ ಪ್ರತಿಯೊಂದು ಹಣ್ಣು ಒಳಗೆ ಸಿಹಿಯಾಗಿರುವುದಿಲ್ಲ. ಕೆಲವು ಹೊರಗೆ ಸಿಹಿಯಾಗಿರುವಂತೆ ಕಂಡರೂ ಆದರೆ ಒಳಗೆ ಹುಳಿಯಾಗಿರುತ್ತದೆ. ಹೀಗಾಗಿ ಉತ್ತಮ ಸಿಹಿಯಾದ ಪೇರಳೆ ಹಣ್ಣುಗಳನ್ನು ಆಯ್ಕೆ ಮಾಡಲು ಕೆಲವೊಂದು ಟಿಪ್ಸ್ ಗಳು ಇಲ್ಲಿದೆ:
  • ಸಿಪ್ಪೆಯ ಲಕ್ಷಣಗಳು: ಉತ್ತಮ ಪೇರಳೆಯೂ ನಯವಾದ, ಹೊಳೆಯುವ ಸಿಪ್ಪೆನ್ನು ಹೊಂಇರಬೇಕು. ಹಣ್ಣಿನ ಮೇಲೆ ಅನೇಕ ಕಪ್ಪು ಕಲೆಗಳು, ಸುಕ್ಕುಗಳ ಇಲ್ಲದೆ ಇರುವುದನ್ನು ಗಮನಿಸಬೇಕು.
  • ಕೈಯಲ್ಲಿ ಹಿಡಿದು ಪರೀಕ್ಷಿಸುವುದು: ಹಣ್ಣು ತುಂಬ ಮೃದುವಾಗಿದ್ದರೆ, ವಾಸನೆ ಬರುತ್ತಿದ್ದರೆ ಅದು ಕೊಳೆತು ಹೋಗಿದೆ. ಒಂದು ವೇಳೆ ನೀವು ಕೈಯಲ್ಲಿ ಒತ್ತಿದ ಸ್ವಲ್ಪ ಸಮಯದ ನಂತರ ಮೃದುವಾದ ಅನುಭ ನೀಡಿದರೆ ಅದು ಸಿಹಿ ಮತ್ತು ರುಚಿಕರವಾದ ಪೇರಳೆಯಾಗಿದೆ.
  • ತೂಕ ಮತ್ತು ಗಾತ್ರ: ಉತ್ತಮವಾದ ಪೇರಳೆಯು ಸಾಮಾನ್ಯವಾಗಿ ಅದರ ಗಾತ್ರಕ್ಕೆ ಸೂಕ್ತವಾದ ತೂಕವನ್ನು ಹೊಂದಿರುತ್ತದೆ. ಒಂದೇ ಗಾತ್ರದ ಎರಡು ಹಣ್ಣುಗಳನ್ನು ಹೋಲಿಸಿದಾಗ, ಭಾರವಾದದ್ದು ಹೆಚ್ಚು ತಿರುಳು ಮತ್ತು ರಸವನ್ನು ಹೊಂದಿರುತ್ತದೆ ಮತ್ತು ಸಿಹಿಯಾಗಿರುತ್ತದೆ. ಹಗುರವಾದ ಹಣ್ಣುಗಳು ಒಳಗೆ ಒಣಗಬಹುದು ಅಥವಾ ಹೆಚ್ಚು ಬೀಜಗಳನ್ನು ಹೊಂದಿರಬಹುದು ಮತ್ತು ಅಷ್ಟು ರುಚಿಯಾಗಿಲ್ಲದೇ ಇರಬಹುದು.
  • ಸಿಹಿ ಪರಿಮಳ: ಒಳ್ಳೆ ಪೇರಳೆಯೂ ಸಿಹಿ ಪರಿಮಳವನ್ನು ನೀಡುತ್ತದೆ. ವಾಸನೆ ಬರುತ್ತಿದ್ದರೆ ಅದು ಕೆಟ್ಟಿದೆ ಎಂದು ತಿಳಿದು ಕೊಳ್ಳಿ.
  • ಬಣ್ಣದಿಂದ ಗುರುತಿಸುವಿಕೆ: ಪೇರಳೆ ಹಣ್ಣು ತೂಂಬಾ ಕಡು ಹಸಿರು ಬಣ್ಣದ್ದಾಗಿದ್ದರೆ, ಅದು ಇನ್ನೂ ಕಾಯಿ ಆಗಿದೆ ಎಂದರ್ಥ. ಅವು ಗಟ್ಟಿಯಾಗಿರುತ್ತದೆ. ಮತ್ತು ತಿನ್ನಲು ಸ್ವಲ್ಪ ಕುರುಕಲು ಆಗಿರುತ್ತದೆ. ಹಣ್ಣು ಸಿಹಿಯಾಗಿರಲು ತಿಳಿ ಹಸಿರು ಅಥವಾ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಲೇಬೇಕು. ಇದು ಸರಿಯಾದ ಪಕ್ವತೆಯ ಸಂಕೇತವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

6 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

6 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

6 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

6 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 day ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 day ago