ಚಳಿಗಾಲದಲ್ಲಿ ಬಿಸಿಬಿಸಿ ಕಡಲೆಕಾಯಿ ತಿನ್ನುವುದೇ ಖುಷಿ. ಕಡಲೆಕಾಯಿ ತಿನ್ನುವಾಗ ಹೆಚ್ಚಿನ ಜನರು ಅದರ ಮೇಲಿನ ಕೆಂಪು ಸಿಪ್ಪೆಯನ್ನು ತೆಗೆದುತಿನ್ನುತ್ತಾರೆ. ಆದರೆ, ಈ ಸಿಪ್ಪೆಯಲ್ಲಿ ಆರೋಗ್ಯಕ್ಕೆ ಬೇಕಾಗುವ ಅಂಶಗಳಿವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದೇ ಇಲ್ಲ. ಒಂದು ವೇಳೆ ಇದರ ಪ್ರಯೋಜನಗಳನ್ನು ತಿಳಿದುಕೊಂಡರೆ ಯಾವುದೇ ಕಾರಣಕ್ಕೂ ಕಸವೆಂದು ಎಸೆಯುವುದೇ ಇಲ್ಲ. ಇನ್ನು ಈ ಕೆಂಪು ಸಿಪ್ಪೆಯ ಪ್ರಯೋಜನಗಳು ಏನೆಂದು ನೋಡಿದರೆ:
• ಈ ಸಿಪ್ಪೆಯು ಒಂದು ಸಣ್ಣ ಪೌಷ್ಟಿಕಾಂಶದ ನಿಧಿಯಂತೆ ಇರುತ್ತದೆ. ಇದರಲ್ಲಿ ಫೈಬರ್, ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ವಿಟಮಿನ್ ಬಿ6 ಮತ್ತು ದೇಹಕ್ಕೆ ಅಗತ್ಯವಾದ ಖನಿಜಗಳು ಸಮೃದ್ಧವಾಗಿದೆ.
• ಈ ಕೆಂಪು ಸಿಪ್ಪೆಯಲ್ಲಿರುವ ಪಾಲಿಫಿನಾಲ್ ಗಳು ಮತ್ತು ಫ್ಲೇವನಾಯ್ಡ್ ಗಳು ದೇಹದಲ್ಲಿನ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡುತ್ತವೆ ಮತ್ತು ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ.
• ಇದು ವಯಸ್ಸಾಗುವಿಕೆಯ ಪರಿಣಾಮಗಳನ್ನು ಕಡಿಮೆ ಮಾಡುವುದಲ್ಲದೇ, ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಡುತ್ತದೆ.
• ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುವುದಿಲ್ಲ. ಹೀಗಾಗಿ ಮಧುಮೇಹಿಗಳಿಗೂ ಸುರಕ್ಷಿತ.
• ಕೆಂಪು ಸಿಪ್ಪೆಯೊಂದಗೆ ಕಡಲಡಕಾಯಿಯನ್ನು ನೆನೆಸಿಟ್ಟು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?. ಈ ಪ್ರಶ್ನೆಗೆ ಹಲವರದು ಹಲವು…
ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…
ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…
ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…
ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…
ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…