ದೇಶದಾದ್ಯಂತ ಪರಿಸರ ಕಾಳಜಿಯ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಎಲ್ಲೆಡೆಯೂ ಪ್ಲಾಸ್ಟಿಕ್ ತುಂಬಿಕೊಳ್ಳುತ್ತಿದೆ. ಒಂದೇ ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್ ನಿಷೇಧವಾದರೂ ಅಲ್ಲಲ್ಲಿ ಕಾಣುತ್ತಿದೆ. ಕೃಷಿಯಲ್ಲೂ ಹಲವು ಸಂದರ್ಭ ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಇದೀಗ ಕೇರಳದ ಕೃಷಿ ಇಲಾಖೆ ಕೃಷಿಯಲ್ಲಿ ಪ್ಲಾಸ್ಟಿಕ್ ಗ್ರೋಬ್ಯಾಗ್ ಬಳಕೆ ಬೇಡ ಎಂದು ಹೇಳಿದೆ. ಜೈವಿಕವಾದ ಗ್ರೋಬ್ಯಾಗ್ ಬಳಕೆಗೆ ಆದ್ಯತೆ ನೀಡಲು ಕೃಷಿಕರನ್ನು ಪ್ರೇರೇಪಿಸಿದೆ.
ಕೃಷಿಯಲ್ಲಿ ಪ್ಲಾಸ್ಟಿಕ್ ಗ್ರೋ ಬ್ಯಾಗ್ ಬೇಡ ಎಂದು ಹೇಳಿದ ಕೇರಳ ಕೃಷಿ ಇಲಾಖೆ ತನ್ನ ಯೋಜನೆಗಳಿಗಾಗಿ ಇಲಾಖೆಯು ಪ್ಲಾಸ್ಟಿಕ್ ಚೀಲಗಳ ಬದಲಾಗಿ ಪರಿಸರ ಸ್ನೇಹಿ ಪರ್ಯಾಯಗಳಾದ ಜೇಡಿಮಣ್ಣು ಅಥವಾ ತೆಂಗಿನಕಾಯಿಯ ಮಡಿಕೆಗಳು ಮತ್ತು ಮರುಬಳಕೆ ಮಾಡಬಹುದಾದ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ಪಾತ್ರೆಗಳೊಂದಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ. ಪರಿಸರ ಸ್ನೇಹಿ ಮಾರ್ಗವನ್ನು ತುಳಿಯುತ್ತಿರುವ ಕೇರಳದ ಕೃಷಿ ಇಲಾಖೆಯು ರಾಜ್ಯದಾದ್ಯಂತ ತರಕಾರಿ ತೋಟಗಳು ಮತ್ತು ಮೇಲ್ಛಾವಣಿ ಫಾರ್ಮ್‌ಗಳಲ್ಲಿ ಪ್ಲಾಸ್ಟಿಕ್ ಗ್ರೋ ಬ್ಯಾಗ್‌ಗಳನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಸರ್ಕಾರವೇ ಈ ಮಾದರಿಗಳನ್ನು ಮಾಡಿ ಜನರನ್ನು ಪ್ರೇರೇಪಿಸುತ್ತಿದೆ.
ಜೈವಿಕವಲ್ಲದ ಚೀಲಗಳನ್ನು ಕೃಷಿ ಉದ್ದೇಶಗಳಿಗಾಗಿ ಬಳಸುವುದರಿಂದ ಪರಿಸರಕ್ಕೆ ಗಮನಾರ್ಹ ಹಾನಿ ಉಂಟಾಗುತ್ತದೆ ಮತ್ತು ಅವುಗಳ ಬಳಕೆಯನ್ನುಕಡಿಮೆ ಮಾಡಬೇಕು ಎಂದು ಇಲಾಖೆ ತನ್ನ ಕಚೇರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಕೃಷಿ ಇಲಾಖೆ ಜಾರಿಗೆ ತಂದಿರುವ ಯೋಜನೆಗಳಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ ಗ್ರೋ ಬ್ಯಾಗ್‌ಗಳನ್ನು ಬಳಸಬಾರದು ಎಂದು ಸುತ್ತೋಲೆಯಲ್ಲಿ ಸೇರಿಸಿದೆ.
ಮನೆಯ ಮಟ್ಟದಲ್ಲಿ ತರಕಾರಿ ಕೃಷಿಯನ್ನು ಉತ್ತೇಜಿಸಲು ‘ಸುಭಿಕ್ಷಾ ಕೇರಳಂ’ ನಂತಹ ಆಹಾರ ಭದ್ರತಾ ಯೋಜನೆಗಳನ್ನು ಹೊರತಂದ ನಂತರ ರಾಜ್ಯಾದ್ಯಂತ ಗ್ರೋ ಬ್ಯಾಗ್‌ಗಳು ಹೆಚ್ಚು ಪರಿಚಯವಾಗಿತ್ತು.ಇದರಿಂದ ಕೃಷಿಯಲ್ಲೂ ಮತ್ತಷ್ಟು ಪ್ಲಾಸ್ಟಿಕ್ ತುಂಬುವ ಆತಂಕವಿತ್ತು. ಪರಿಸರ ಸ್ನೇಹಿ ವಿಧಾನಗಳ ಮೂಲಕ ಸುಸ್ಥಿರತೆ ಮತ್ತು ಆಹಾರ ಭದ್ರತೆಯನ್ನು ಇನ್ನಷ್ಟು ಗಟ್ಟಿಪಡಿಸಲು ಕೇರಳದ ಕೃಷಿ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ.
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…
ಬೆಳೆಗಾರರಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಕೊಳಚೆ…
ಅಡಿಕೆಯ ಮೇಲೆ ಯಾವುದೇ ಋಣಾತ್ಮಕ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಬೇಕಾದ ಹಲವು ಅಂಶಗಳು…