Advertisement
ಸುದ್ದಿಗಳು

ಶಬರಿಮಲೆ ದೇವಸ್ಥಾನಕ್ಕೆ 10 ವರ್ಷದ ಬಾಲಕಿ ಭೇಟಿಯ ಮನವಿಯನ್ನು ಕೇರಳ ಹೈಕೋರ್ಟ್ ತಿರಸ್ಕಾರ |

Share

ಶಬರಿಮಲೆ ದೇವಸ್ಥಾನಕ್ಕೆ 10 ವರ್ಷದ ಬಾಲಕಿಗೆ ಭೇಟಿ ನೀಡಲು ಕೇರಳ ಹೈಕೋರ್ಟ್ ಅನುಮತಿ ನಿರಾಕರಿಸಿದೆ.
2018ರ ಶಬರಿಮಲೆ ಪ್ರವೇಶ ನಿರ್ಬಂಧಗಳ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿರುವುದರಿಂದ 10 ವರ್ಷದ ಬಾಲಕಿಯ ಮನವಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.ಇತ್ತೀಚೆಗಷ್ಟೇ 10 ವರ್ಷದ ಬಾಲಕಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಕೇರಳ ಹೈಕೋರ್ಟ್ ಅನುಮತಿ ನಿರಾಕರಿಸಿತ್ತು.

Advertisement
Advertisement

ದೇಶದ ಪ್ರಸಿದ್ಧ  ದೇವಾಲಯವಾದ ಶಬರಿಮಲೆ ಪ್ರವೇಶವನ್ನು  10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಋತುಚಕ್ರದ ವಯಸ್ಸಿನ ಮಹಿಳೆಯರು ಮತ್ತು ಹುಡುಗಿಯರ ಪ್ರವೇಶವನ್ನು ನಿಷೇಧಿಸುವ ಕ್ರಮವಾಗಿದೆ ಎನ್ನುವುದು ಈ ಹಿಂದೆಯೇ ತಿಳಿಸಲಾಗಿದೆ. ಆದರೆ,  2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲಾ ವಯೋಮಾನದ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಹೇಳಿತ್ತು.ಆದರೆ, ಈ ತೀರ್ಪನ್ನು ಪ್ರಶ್ನಿಸುವ ಮರುಪರಿಶೀಲನಾ ಅರ್ಜಿಯು ಉನ್ನತ ನ್ಯಾಯ ಪೀಠದ ಮುಂದೆ ಬಾಕಿ ಉಳಿದಿದೆ.

Advertisement

ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಹರಿಶಂಕರ್ ವಿ ಮೆನನ್ ಅವರ ವಿಭಾಗೀಯ ಪೀಠವು ಉನ್ನತ ನ್ಯಾಯಾಲಯದಲ್ಲಿನ ಪರಿಶೀಲನಾ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು ದೇವಾಲಯಕ್ಕೆ ಪ್ರವೇಶಿಸಲು 10 ವರ್ಷದ ಬಾಲಕಿಯ ಮನವಿಯನ್ನು ವಜಾಗೊಳಿಸಿದೆ.

ಶಬರಿಮಲೆಗೆ ಭೇಟಿ ನೀಡುವ ಆನ್‌ಲೈನ್ ಅರ್ಜಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿ ತಿರಸ್ಕರಿಸಿದ ನಂತರ  ಬಾಲಕಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಪ್ರೌಢಾವಸ್ಥೆಗೆ ಬಂದ ಹುಡುಗಿಯರ ಪ್ರವೇಶ ನಿಷೇಧಕ್ಕಾಗಿ 10 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ ಎಂಬುದು ಅವರ ಪ್ರಾಥಮಿಕ ವಾದವಾಗಿತ್ತು. ತಾನು ಪ್ರೌಢಾವಸ್ಥೆಗೆ ಬಂದಿಲ್ಲವಾದ್ದರಿಂದ ಶಬರಿಮಲೆ ಯಾತ್ರೆಯಲ್ಲಿ ಭಾಗವಹಿಸಲು ಅರ್ಹಳಾಗಿದ್ದೇನೆ ಎಂದು ವಾದಿಸಿದ್ದರು.

Advertisement

A 10-year-old girl’s plea to undertake a pilgrimage to the Sabarimala temple during the Mandala-Makaravilakku season is denied by the high court.

Source: The Hindu

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ

ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರವನ್ನು ಕಳೆದ ಹಲವಾರು ಸಮಯಗಳಿಂದ…

14 hours ago

ಪರೋಪಕಾರಾರ್ಥ ಫಲಂತಿ ವೃಕ್ಷಾಃ

"ಪ್ರಕೃತಿಯು ಮಾನವನ ಅಧೀನ, ಮಾನವನೇ ಅದರ ಯಜಮಾನ” ಎಂಬ ಮನೋಧರ್ಮವು ಇಂದು ರೂಪುಗೊಂಡಿದೆ.…

14 hours ago

ಹವಾಮಾನ ವರದಿ | 03.07.2024 | ಕರಾವಳಿ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ | ಲಯ ತಪ್ಪುತ್ತಿದೆಯೇ ಮುಂಗಾರು…?

ಈಗಿನಂತೆ ಒಳನಾಡು ಭಾಗಗಳಲ್ಲಿ ಮಳೆಯ ಸಾಧ್ಯತೆ ಎರಡು ದಿನಗಳ ಕಾಲ ಮುಂದಕ್ಕೆ ಹೋಗಿ…

21 hours ago

ಸಂಗೀತ ಪರೀಕ್ಷೆಯನ್ನು ನಡೆಸದ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ | ಪರೀಕ್ಷೆಯ ನಿರೀಕ್ಷೆಯಲ್ಲಿ ಸಂಗೀತ, ನೃತ್ಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು

ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯ ವತಿಯಿಂದ ಪರೀಕ್ಷೆ ನಡೆಸಲಾಗದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ…

22 hours ago

ಸೌರ ಮಿಷನ್ ಆದಿತ್ಯ-L1ನಿಂದ ಐತಿಹಾಸಿಕ ಸಾಧನೆ | ಪ್ರಭಾವಲಯದ ಮೊದಲ ಸುತ್ತನ್ನು ಪೂರ್ಣಗೊಳಿಸಿದ ಆದಿತ್ಯ-ಎಲ್1 – ಇಸ್ರೋದಿಂದ ಮಾಹಿತಿ

ನಮ್ಮ ಭಾರತೀಯ ಬಾಹ್ಯಾಕಾಶ ಸಂಸ್ಥೆ(ISRO) ಚಂದ್ರಯಾನ -2ರ(Chandrayana-2) ಯಶಸ್ಸಿನ ನಂತರ ದೇಶದ ಮೊದಲ…

22 hours ago

ಮುಜಂಟಿ ಜೇನಿನ ಬಗ್ಗೆ ಒಂದಷ್ಟು ಮಾಹಿತಿ | ಶೂನ್ಯ ಬಂಡವಾಳದಲ್ಲಿ ಜೇನು ಸಾಕಾಣಿಕೆ ಸಾಧ್ಯ…!

ಮುಜಂಟಿ ಜೇನನ್ನು(stingless bee) ಮಿಸಿರಿ ಜೇನು, ಮಸರು ಜೇನು, ರಾಳ ಜೇನು, ಮೂಲಿ…

23 hours ago