ಒಂದು ವೇಳೆ ಕೇಂದ್ರ ಸರ್ಕಾರವು ನೈಸರ್ಗಿಕ ರಬ್ಬರ್ ಬೆಲೆಯನ್ನು ಕೆ.ಜಿ.ಗೆ 300 ರೂ. ಮಾಡಿದರೆ, ಚರ್ಚ್‌ನಲ್ಲಿ ನಂಬಿಕೆ ಇಟ್ಟವರು ಈ ಬಾರಿ ಕೇರಳದಿಂದ ಬಿಜೆಪಿಯ ಮೊದಲ ಸಂಸದರನ್ನು ಆಯ್ಕೆ ಮಾಡಲು ನೆರವು ನೀಡಲಿದ್ದಾರೆ ಎಂದು ತಲಶ್ಶೇರಿಯಲ್ಲಿ ಮಾರ್ ಜೋಸೆಫ್ ಪಂಪ್ಲಾನಿ ಹೇಳಿದ್ದಾರೆ.
ಕೇರಳದ ರೋಮನ್ ಕ್ಯಾಥೋಲಿಕ್ ಬಿಷಪ್ ಒಬ್ಬರು ಭಾರತೀಯ ಜನತಾ ಪಕ್ಷದ ಪರವಾಗಿ ಮಾತನಾಡಿದ್ದು, ಅವರ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಅವರ ಈ ಹೇಳಿಕೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ. ಉತ್ತರ ಕೇರಳದ ತಲಶ್ಶೇರಿಯಲ್ಲಿ ಆಯೋಜಿಸಲಾಗಿದ್ದ ಕ್ಯಾಥೋಲಿಕ್ ರೈತರ ಸಮಾವೇಶದಲ್ಲಿ ಮಾತನಾಡಿದ ಬಿಷಪ್, ದೇಶವನ್ನು ಆಳುತ್ತಿರುವ ಪಕ್ಷವನ್ನು ಚರ್ಚ್‌ಗಳಿಂದ ದೂರ ಇಡುವ ಅಗತ್ಯವಿಲ್ಲ ಎಂದಿದ್ದಾರೆ. ಕೇರಳದ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ನೈಸರ್ಗಿಕ ರಬ್ಬರ್‌ಗೆ ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 130ರಿಂದ 150 ರೂ. ಇದೆ. ಕೇಂದ್ರ ಸರ್ಕಾರವು ಈ ಬೆಲೆಯನ್ನು ಕೆಜಿಗೆ 300 ರೂ.ಗೆ ಏರಿಕೆ ಮಾಡಬೇಕು ಎಂಬುದು ಬಿಷಪ್ ಅವರ ಬೇಡಿಕೆಯಾಗಿದೆ. ಒಂದು ವೇಳೆ, ಈ ಬೇಡಿಕೆಯನ್ನು ಕೇಂದ್ರ ಸರ್ಕಾರವು ಈಡೇರಿಸಿದರೆ, ಕೇರಳದಿಂದ ಬಿಜೆಪಿಯ ಮೊದಲ ಸಂಸದರನ್ನು ಆಯ್ಕೆ ಮಾಡಲು ಸಹಜವಾಗಿಯೇ ಚರ್ಚ್ ನೆರವು ನೀಡಲಿದೆ ಎಂದು ಬಿಷಪ್ ಹೇಳಿದ್ದಾರೆ.
ಬಿಜೆಪಿಯ ಕಡೆಗೆ ಚರ್ಚ್ ಎಂದಿಗೂ ಅಸ್ಪೃಶ್ಯತೆಯನ್ನು ಹೊಂದಿಲ್ಲ. ಯಾಕೆಂದರೆ, ಅದು ದೇಶವನ್ನು ಆಳುತ್ತಿರುವ ಪಕ್ಷವಾಗಿದೆ. ಒಂದು ವೇಳೆ, ರೈತರ ಸಮಸ್ಯೆಯನ್ನು ಬಗೆಹರಿಸಿದರೆ, ನಾವು ಬಿಜೆಪಿಗೆ ವೋಟ್ ಹಾಕುತ್ತೇವೆ ಎಂದು ಅವರು ಹೇಳಿದ್ದಾರೆ.
ಬಿಷಪ್ ಅವರ ಈ ಹೇಳಿಕೆಗೆ ಸಿಪಿಎಂ ಮತ್ತು ಕಾಂಗ್ರೆಸ್ ಟೀಕಿಸಿವೆ. ಇದೇ ವೇಳೆ, ಬಿಜೆಪಿಯು ಈ ಹೇಳಿಕೆಯನ್ನು ಸ್ವಾಗತಿಸಿದೆ.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…