ಕೇರಳ ಬಜೆಟ್‌ನಲ್ಲಿ ರಬ್ಬರ್‌ ಬೆಳೆಗಾರರಿಗೆ ಬಂಪರ್‌ ಸಿಹಿ ಸುದ್ದಿ- ಬೆಂಬಲ ಬೆಲೆ ₹250ಕ್ಕೆ ಏರಿಕೆ

June 22, 2026
7:20 AM
ಕೇರಳ ಸರ್ಕಾರ ರಬ್ಬರ್‌ ಬೆಂಬಲ ಬೆಲೆಯನ್ನು ₹200ರಿಂದ ₹250ಕ್ಕೆ ಹೆಚ್ಚಿಸಿದೆ. ಮಾರುಕಟ್ಟೆ ಬೆಲೆ ದಾಖಲೆ ಮಟ್ಟದಲ್ಲಿದ್ದರೂ ರೈತರಿಗೆ ಆದಾಯ ಭದ್ರತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇರಳ ಸರ್ಕಾರ ತನ್ನ ಪರಿಷ್ಕೃತ ಬಜೆಟ್‌ನಲ್ಲಿ ರಬ್ಬರ್‌ ಬೆಳೆಗಾರರಿಗೆ ಮಹತ್ವದ ಘೋಷಣೆ ಮಾಡಿದ್ದು, ರಬ್ಬರ್‌ಗೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು (Support Price) ಪ್ರತಿ ಕೆ.ಜಿ.ಗೆ ₹200ರಿಂದ ₹250ಕ್ಕೆ ಏರಿಸಿದೆ. ಕೇರಳ ರಾಜ್ಯದ ಸುಮಾರು 5 ಲಕ್ಷಕ್ಕೂ ಅಧಿಕ ರಬ್ಬರ್‌ ಬೆಳೆಗಾರರಿಗೆ ಈ ಕ್ರಮದಿಂದ ನೇರ ಪ್ರಯೋಜನವಾಗಲಿದೆ.

ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್‌ ಬೆಲೆ ದಾಖಲೆ ಮಟ್ಟ ತಲುಪಿದ್ದು, ಆರ್‌ಎಸ್‌ಎಸ್-4 (RSS-4) ದರ್ಜೆಯ ರಬ್ಬರ್‌ ಬೆಲೆ ಕೆಲ ಮಾರುಕಟ್ಟೆಗಳಲ್ಲಿ ₹260-₹280ರ ಗಡಿಯನ್ನು ದಾಟಿದೆ. ಹಾಗಿದ್ದರೂ ಮಾರುಕಟ್ಟೆ ಬೆಲೆಯಲ್ಲಿ ಏರಿಳಿತ ಸಂಭವಿಸಿದರೂ ರೈತರಿಗೆ ಕನಿಷ್ಠ ಆದಾಯದ ಭದ್ರತೆ ಒದಗಿಸಲು ಕೇರಳ ಸರ್ಕಾರ ಬೆಂಬಲ ಬೆಲೆಯನ್ನು ₹250ಕ್ಕೆ ಹೆಚ್ಚಿಸಿದೆ.

ಕೇರಳದ ಈಗಿನ ಯುಡಿಎಫ್‌ ಸರ್ಕಾರದ ಮೊದಲ ಬಜೆಟ್‌ನಲ್ಲಿ ಕೃಷಿ ಮತ್ತು ಸಾಂಪ್ರದಾಯಿಕ ಉದ್ಯಮಗಳಿಗೆ ವಿಶೇಷ ಒತ್ತು ನೀಡಲಾಗಿದ್ದು, ರಬ್ಬರ್‌ ಕ್ಷೇತ್ರಕ್ಕೆ ಹೆಚ್ಚುವರಿ ಉತ್ತೇಜನ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ರಬ್ಬರ್‌ ಬೆಲೆ ಏರಿಕೆಯಿಂದ ಇತ್ತೀಚಿನ ತಿಂಗಳುಗಳಲ್ಲಿ ರಬ್ಬರ್ ವಲಯದಲ್ಲಿ ಉತ್ಸಾಹ ಮೂಡಿದ್ದು, ಹಲವು ಕಡೆ ನಿರ್ಲಕ್ಷ್ಯಗೊಂಡಿದ್ದ ತೋಟಗಳಲ್ಲಿ ಮತ್ತೆ ಟ್ಯಾಪಿಂಗ್‌ ಚಟುವಟಿಕೆಗಳು ಆರಂಭವಾಗಿವೆ ಎಂದು ವರದಿಗಳು ತಿಳಿಸಿವೆ.

Kerala has increased the support price of natural rubber from ₹200 to ₹250 per kg in its revised budget. The move is expected to benefit over five lakh rubber farmers in the state and provide income security despite market fluctuations. The decision comes at a time when rubber prices have touched historic highs in India.

ಹಲಸಿನ ಕಾಯಿ ತಂಬುಳಿ – ಊಟಕ್ಕೆ ತಂಪು ನೀಡುವ ಸಾಂಪ್ರದಾಯಿಕ ಸವಿರುಚಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror