ಬಲಕಳೆದುಕೊಂಡ ಕಾಂಗ್ರೆಸ್‌ ಚೇತರಿಕೆ ಕಾಣುತ್ತಿದೆ | ಅಧಿಕಾರದ ಮದದಲ್ಲಿ ಮೆರೆಯುತ್ತಿದೆ ಬಿಜೆಪಿ | ಕೋವಿಡ್‌ ಸಮಯದಲ್ಲಿ ಈ ಬದಲಾವಣೆ ಗಮನಿಸಿದ್ದೀರಾ ?

June 5, 2021
10:14 PM
ಹೊಸದಾದ ಅಂಕಣವೊಂದು ಅರಂಭವಾಗಿದೆ. ವಿವಿಧ ಮಾಧ್ಯಮಗಳಲ್ಲಿ  ಕೆಲಸ ಮಾಡಿ ಇದೀಗ ಸ್ವಂತ ಉದ್ಯಮ ನಡೆಸುತ್ತಿರುವ ಭಾರ್ಗವ ಅವರು ಖಡಕ್‌ ಚಾಯ್‌ ಹೆಸರಿನಲ್ಲಿ  ರಾಜಕೀಯ ಸೇರಿದಂತೆ ರಾಜ್ಯದ ವಿವಿಧ ಬೆಳವಣಿಗೆಗಳ ಬಗ್ಗೆ ಬರೆಯುತ್ತಾರೆ. ಈ ಅಂಕಣದಲ್ಲಿ ಬರೆಯುವ ಎಲ್ಲಾ ಲೇಖನಗಳು ಲೇಖಕರ ವಿಶ್ಲೇಷಣೆಯಾಗಿರುತ್ತದೆ. ಇದು ರೂರಲ್‌ ಮಿರರ್‌ ಅಭಿಪ್ರಾಯವಲ್ಲ – ಟೀಂ ಮಿರರ್‌ 

ಳೆದ ಒಂದೆರಡು ತಿಂಗಳ ಹಿಂದಿನಿಂದ ಕೋವಿಡ್‌ ಕಾರಣದಿಂದ ದ ಕ ಜಿಲ್ಲೆ ಸ್ತಬ್ಧವಾಗಿದೆ. ಅಂದರೆ ಆರ್ಥಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ. ಹಾಗಿದ್ದರೂ ರಾಜಕೀಯ ವಹಿವಾಟು ಕಳೆಗುಂದಿಲ್ಲ. ಮುಂದಿನ ಅಧಿಕಾರದ ಲೆಕ್ಕಾಚಾರ ನಡೆಯುತ್ತಲೇ ಇದೆ. ಕೋವಿಡ್‌ ಇದ್ದರೂ ರಾಜಕೀಯ ನಡೆಯುತ್ತಲೇ ಇದೆ. ಅದು ಕೋವಿಡ್‌ ಸಂದರ್ಭದಲ್ಲೂ ನಿಲ್ಲಲಿಲ್ಲ. ಎಷ್ಟೇ ಆದರೂ ದ ಕ ಜಿಲ್ಲೆಯಲ್ಲಿ ಕಾಂಗ್ರೆಸ್‌ – ಬಿಜೆಪಿ ನಡುವೆ ಸದ್ಯ ಟಗ್‌ ಆಫ್‌ ವಾರ್. ‌

Advertisement
Advertisement
Advertisement

ದ ಕ ಜಿಲ್ಲೆಯಲ್ಲಿ  ಕಾಂಗ್ರೆಸ್ ಬಲ ಕಳೆದುಕೊಂಡು ಹಲವು ವರ್ಷಗಳಾದವು. ಇಲ್ಲಿರುವ ಬಣ ರಾಜಕೀಯವೇ ಕಾಂಗ್ರೆಸ್‌ ನಾಶಕ್ಕೆ ಕಾರಣವಾದರೆ, ಇನ್ನೊಂದು ಚುನಾವಣೆಯ ವೇಳೆಗೇ ನಡೆಯುವ ಕಮ್ಯೂನಲ್‌ ಸಂಗತಿಗಳು ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಿದೆ. ಬಿಜೆಪಿ ಹಾಗಿಲ್ಲ, ಹಿಂದುತ್ವದ ಹೆಸರಿನಲ್ಲಿ ಮುನ್ನಡೆಯುತ್ತಿದ್ದರೂ ಹಿಂದೂಗಳಿಗೆ ಅನ್ಯಾಯವಾದರೆ ಯಾವುದೇ ಮಹತ್ವ ನೀಡುವುದಿಲ್ಲ, ಚುನಾವಣೆಯ ವೇಳೆಗೆ ಕಮ್ಯೂನಲ್‌ ಸಂಗತಿಗಳನ್ನೇ ಹೆಚ್ಚು ವೈಭವೀಕರಣ ಮಾಡುತ್ತದೆ. ಗೆಲ್ಲುತ್ತದೆ. ಹೀಗೆ ಗೆಲ್ಲುತ್ತಲೇ ಇರುವುದರಿಂದಲೇ ದ ಕ ಜಿಲ್ಲೆಯಲ್ಲಿ ಬಿಜೆಪಿಗೆ ಅಧಿಕಾರದ ಮದ ಏರಿದೆ. ಯಾವೊಬ್ಬ ಕಾರ್ಯಕರ್ತನನ್ನೂ ಕ್ಯಾರೇ ಮಾಡುತ್ತಿಲ್ಲ. ಈ ಸ್ಥಿತಿ ಹಿಂದೆ ಕಾಂಗ್ರೆಸ್‌ ನಲ್ಲಿತ್ತು. ಈಗ ಬಿಜೆಪಿ ಆ ಸ್ಥಿತಿಯಲ್ಲಿದೆ. ಈಗ ಅಧಿಕಾರದಲ್ಲಿರುವ ಬಿಜೆಪಿ ಕೋವಿಡ್‌ ಸಮಯದಲ್ಲೂ  ಅಧಿಕಾರದ ಮದ ಪ್ರದರ್ಶನ ಮಾಡಿದೆ. ಮಾಡಿದ್ದೇ ಸರಿ ಎಂದಿದೆ, ಹಾಗಾಗಿ ಕಾಂಗ್ರೆಸ್‌ ಸ್ವಲ್ಪ ಜೀವ ತಳೆದಿದೆ. ಆದರೆ ಎಷ್ಟು ದಿನ ?

Advertisement

ಕೋವಿಡ್‌ ಬಗ್ಗೆ ಸರಕಾರಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸುತ್ತಿದ್ದಾಗಲೇ ದ ಕ ಜಿಲ್ಲಾದಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು. ಆದರೆ ಆ ಸಂದರ್ಭದಲ್ಲಿ  ನೇಮ, ಕೋಲ ಎಂದು ಜಿಲ್ಲಾಧಿಕಾರಿಗಳ ಆದೇಶವನ್ನೇ ಸಡಿಲಿಕೆ ಮಾಡಿದರು. ಜಿಲ್ಲಾಧಿಕಾರಿಗಳು ಮೌನ ವಹಿಸಿದರು. ಕೊನೆಗೆ ಲಾಕ್ಡೌನ್‌ ಘೋಷಣೆ, ಆ ಕ್ರಮ ಈ ಕ್ರಮ ಎಂದೆಲ್ಲಾ ಹೇಳುತ್ತಲೇ ಕ್ರಮಕ್ಕೆ ಮುಂದಾಗುವ ವೇಳೆಗೆ ಕೊರೋನಾ ಊರಿಡೀ ಹಬ್ಬಿದೆ, ಈಗ ಗ್ರಾಮೀಣ ಭಾಗದಲ್ಲೂ ತುಂಬಿದೆ. ಇನ್ನೀನ ನಿಯಂತ್ರಣ ನಿಯಂತ್ರಣ ಎಂದರೆ ಹೇಗೆ ? ಅಷ್ಟು ಸುಲಭದ ಮಾತು ಈಗಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಕೋವಿಡ್ಇದ್ದವರು ಸುತ್ತಾಡುವುದರ ಬಗ್ಗೆ ಈಗಾಗಲೇ ಅಲ್ಲಲ್ಲಿ  ದೂರು ಬಂದರೂ ಮಾತನಾಡದ ಸ್ಥಿತಿ ಇದೆ. ಇದು ಜಿಲ್ಲೆಯ ಆಡಳಿತದ ವ್ಯವಸ್ಥೆಯಾಯಿತು.

ಕಾಂಗ್ರೆಸ್‌ ಈಗ ಎಚ್ಚೆತ್ತುಕೊಂಡಿದೆ, ಈಗಲೂ ಎಚ್ಚೆತ್ತುಕೊಳ್ಳದೇ ಹೇಗೆ?. ಒಂದು ವಿಪಕ್ಷವಾಗಿ ಸರಿಯಾದ ಆಡಳಿತ, ಜನರಿಗೆ ಬೇಕಾದ ವ್ಯವಸ್ಥೆ ಮಾಡದೇ ಇದ್ದಾಗ ಪ್ರತಿಭಟಿಸಲು ಸಾಧ್ಯವಾಗದೇ ಇದ್ದರೆ ಜನರಿಗೆ ನ್ಯಾಯ ಒದಗಿಸುವುದು ಹೇಗೆ ? ಉಳಿದವುಗಳೆಲ್ಲಾ ಸಣ್ಣ ಪಕ್ಷಗಳಾದವು. ಆ ಶಕ್ತಿ ಸದ್ಯಕ್ಕಿಲ್ಲ. ಹಾಗಿದ್ದರೂ ಸಿಪಿಎಂ, ಎಎಪಿ , ಜೆಡಿಎಸ್‌ ಕೆಲವು ಸಂದರ್ಭ ಮಾತನಾಡಿದರೂ ಧ್ವನಿ ಕ್ಷೀಣವಾಗಿರುತ್ತದೆ. ಹೀಗಿರುವಾಗ ಪುತ್ತೂರು, ಸುಳ್ಯದಲ್ಲಿ ಈಗ ಕಾಂಗ್ರೆಸ್‌ ಸ್ವಲ್ಪ ಬಲ ಪಡೆದುಕೊಂಡಿದೆ.

Advertisement

ಸುಳ್ಯದಲ್ಲಿ  ಸೇವೆಯ ಹೆಸರಿನಲ್ಲಿ  ಬಿಜೆಪಿ ಸರಕಾರಿ ಆಸ್ಪತ್ರೆಗಳಲ್ಲಿ  ಮಾಡುತ್ತಿರುವ ಕೆಲಸದ ಬಗ್ಗೆ ಕಾಂಗ್ರೆಸ್‌ ಇತ್ತೀಚೆಗೆ ಇಶ್ಯೂ ಮಾಡಿತು. ಅದಕ್ಕೆ ಸುಳ್ಯ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತು. ಕಾಂಗ್ರೆಸ್‌ ಅದಕ್ಕೆ ಸರಿಯಾದ ಉತ್ತರ ನೀಡಲು ವಿಫಲವಾಯಿತು. ವಾಸ್ತವಾಗಿ ಕೆಲವು ಕಡೆಗಳಲ್ಲಿ ಈಗಲೂ ಕೋವಿಡ್‌ ವ್ಯಾಕ್ಸಿನೇಶನ್‌ ಸೇರಿದಂತೆ ಸೇವೆಯ ಹೆಸರಿನಲ್ಲಿ  ತೊಂದರೆ ಆಗುವ ಬಗ್ಗೆ ಜನರ ಹಳ್ಳಿಯಲ್ಲಿ  ಮಾತನಾಡುತ್ತಾರೆ, ಆದರೆ ಧೈರ್ಯವಾಗಿ ಹೇಳಲು ಹಿಂಜರಿಯುತ್ತಾರೆ. ಇದನ್ನೇ  ಕಾಂಗ್ರೆಸ್‌ ಕೂಡಾ ಹೇಳಲು ಹಿಂಜರಿಯುತ್ತದೆ…!.

ಕೊರೋನಾ ಸಮಯದಲ್ಲಿ ಜನರ ಹಿತಕ್ಕಾಗಿ ರಾಜಕೀಯ ಬಿಟ್ಟು ಮಾತನಾಡಲು ಏಕೆ ಆಗುವುದಿಲ್ಲ.?

Advertisement

ಕೋವಿಡ್‌ ಸಮಯದ ಕೆಲವು ಸಂಗತಿಗಳು ಇವೆ. ಕೋವಿಡ್‌ ರಾಜಕೀಯವೂ ಇದೆ. ಇಷ್ಟೇ ಅಲ್ಲ ಇನ್ನೂ ಕೆಲವು ಸಂಗತಿಗಳು  ಇದೆ ಮುಂದಿನ ಬರಹದಿಂದ ಸ್ಟ್ರಾಂಗ್‌ ಚಹಾ ಮಾಡೋಣ….

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಸಮರ್ಥ ಸಮನ್ಯು

ಸಮರ್ಥ ಸಮನ್ಯು , - ಬರಹಗಾರರು, ವಿಮರ್ಶಕರು.

ಇದನ್ನೂ ಓದಿ

ಮನೆಯು ಮತ್ತೊಮ್ಮೆ ಮೊದಲ ಪಾಠಶಾಲೆಯಾಗಲಿ
November 20, 2024
8:49 PM
by: ಡಾ.ಚಂದ್ರಶೇಖರ ದಾಮ್ಲೆ
ಭತ್ತ ಬೆಳೆಸುವ ಪ್ರಯೋಗ, ಅಕ್ಕಿ ತಯಾರಿಸುವ ಪ್ರಕ್ರಿಯೆ
November 13, 2024
9:43 PM
by: ಡಾ.ಚಂದ್ರಶೇಖರ ದಾಮ್ಲೆ
ಆಧುನಿಕ ಯುಗದಲ್ಲಿ ಭಾರತೀಯ ಪ್ರಜೆ
November 6, 2024
6:42 AM
by: ಡಾ.ಚಂದ್ರಶೇಖರ ದಾಮ್ಲೆ
ವಕ್ಫ್ ಆಸ್ತಿ ವಿವಾದ | ಕಾಂಗ್ರೇಸ್ಸಿನ ತುಷ್ಟೀಕರಣದ, ಬಿಜೆಪಿಯ ದ್ವೇಷ ರಾಜಕಾರಣದ ಮತ್ತು ಮಾಧ್ಯಮಗಳ ವಿವೇಚನಾ ರಹಿತ ಚರ್ಚೆಗಳ ಭಾವನಾತ್ಮಕ ಪ್ರನಾಳ ಶಿಶು……..
November 5, 2024
7:22 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror