ದ ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲ ಕಳೆದುಕೊಂಡು ಹಲವು ವರ್ಷಗಳಾದವು. ಇಲ್ಲಿರುವ ಬಣ ರಾಜಕೀಯವೇ ಕಾಂಗ್ರೆಸ್ ನಾಶಕ್ಕೆ ಕಾರಣವಾದರೆ, ಇನ್ನೊಂದು ಚುನಾವಣೆಯ ವೇಳೆಗೇ ನಡೆಯುವ ಕಮ್ಯೂನಲ್ ಸಂಗತಿಗಳು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದೆ. ಬಿಜೆಪಿ ಹಾಗಿಲ್ಲ, ಹಿಂದುತ್ವದ ಹೆಸರಿನಲ್ಲಿ ಮುನ್ನಡೆಯುತ್ತಿದ್ದರೂ ಹಿಂದೂಗಳಿಗೆ ಅನ್ಯಾಯವಾದರೆ ಯಾವುದೇ ಮಹತ್ವ ನೀಡುವುದಿಲ್ಲ, ಚುನಾವಣೆಯ ವೇಳೆಗೆ ಕಮ್ಯೂನಲ್ ಸಂಗತಿಗಳನ್ನೇ ಹೆಚ್ಚು ವೈಭವೀಕರಣ ಮಾಡುತ್ತದೆ. ಗೆಲ್ಲುತ್ತದೆ. ಹೀಗೆ ಗೆಲ್ಲುತ್ತಲೇ ಇರುವುದರಿಂದಲೇ ದ ಕ ಜಿಲ್ಲೆಯಲ್ಲಿ ಬಿಜೆಪಿಗೆ ಅಧಿಕಾರದ ಮದ ಏರಿದೆ. ಯಾವೊಬ್ಬ ಕಾರ್ಯಕರ್ತನನ್ನೂ ಕ್ಯಾರೇ ಮಾಡುತ್ತಿಲ್ಲ. ಈ ಸ್ಥಿತಿ ಹಿಂದೆ ಕಾಂಗ್ರೆಸ್ ನಲ್ಲಿತ್ತು. ಈಗ ಬಿಜೆಪಿ ಆ ಸ್ಥಿತಿಯಲ್ಲಿದೆ. ಈಗ ಅಧಿಕಾರದಲ್ಲಿರುವ ಬಿಜೆಪಿ ಕೋವಿಡ್ ಸಮಯದಲ್ಲೂ ಅಧಿಕಾರದ ಮದ ಪ್ರದರ್ಶನ ಮಾಡಿದೆ. ಮಾಡಿದ್ದೇ ಸರಿ ಎಂದಿದೆ, ಹಾಗಾಗಿ ಕಾಂಗ್ರೆಸ್ ಸ್ವಲ್ಪ ಜೀವ ತಳೆದಿದೆ. ಆದರೆ ಎಷ್ಟು ದಿನ ?
Advertisement
ಕೋವಿಡ್ ಬಗ್ಗೆ ಸರಕಾರಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸುತ್ತಿದ್ದಾಗಲೇ ದ ಕ ಜಿಲ್ಲಾದಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದರು. ಆದರೆ ಆ ಸಂದರ್ಭದಲ್ಲಿ ನೇಮ, ಕೋಲ ಎಂದು ಜಿಲ್ಲಾಧಿಕಾರಿಗಳ ಆದೇಶವನ್ನೇ ಸಡಿಲಿಕೆ ಮಾಡಿದರು. ಜಿಲ್ಲಾಧಿಕಾರಿಗಳು ಮೌನ ವಹಿಸಿದರು. ಕೊನೆಗೆ ಲಾಕ್ಡೌನ್ ಘೋಷಣೆ, ಆ ಕ್ರಮ ಈ ಕ್ರಮ ಎಂದೆಲ್ಲಾ ಹೇಳುತ್ತಲೇ ಕ್ರಮಕ್ಕೆ ಮುಂದಾಗುವ ವೇಳೆಗೆ ಕೊರೋನಾ ಊರಿಡೀ ಹಬ್ಬಿದೆ, ಈಗ ಗ್ರಾಮೀಣ ಭಾಗದಲ್ಲೂ ತುಂಬಿದೆ. ಇನ್ನೀನ ನಿಯಂತ್ರಣ ನಿಯಂತ್ರಣ ಎಂದರೆ ಹೇಗೆ ? ಅಷ್ಟು ಸುಲಭದ ಮಾತು ಈಗಿಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಕೋವಿಡ್ಇದ್ದವರು ಸುತ್ತಾಡುವುದರ ಬಗ್ಗೆ ಈಗಾಗಲೇ ಅಲ್ಲಲ್ಲಿ ದೂರು ಬಂದರೂ ಮಾತನಾಡದ ಸ್ಥಿತಿ ಇದೆ. ಇದು ಜಿಲ್ಲೆಯ ಆಡಳಿತದ ವ್ಯವಸ್ಥೆಯಾಯಿತು.
ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ, ಈಗಲೂ ಎಚ್ಚೆತ್ತುಕೊಳ್ಳದೇ ಹೇಗೆ?. ಒಂದು ವಿಪಕ್ಷವಾಗಿ ಸರಿಯಾದ ಆಡಳಿತ, ಜನರಿಗೆ ಬೇಕಾದ ವ್ಯವಸ್ಥೆ ಮಾಡದೇ ಇದ್ದಾಗ ಪ್ರತಿಭಟಿಸಲು ಸಾಧ್ಯವಾಗದೇ ಇದ್ದರೆ ಜನರಿಗೆ ನ್ಯಾಯ ಒದಗಿಸುವುದು ಹೇಗೆ ? ಉಳಿದವುಗಳೆಲ್ಲಾ ಸಣ್ಣ ಪಕ್ಷಗಳಾದವು. ಆ ಶಕ್ತಿ ಸದ್ಯಕ್ಕಿಲ್ಲ. ಹಾಗಿದ್ದರೂ ಸಿಪಿಎಂ, ಎಎಪಿ , ಜೆಡಿಎಸ್ ಕೆಲವು ಸಂದರ್ಭ ಮಾತನಾಡಿದರೂ ಧ್ವನಿ ಕ್ಷೀಣವಾಗಿರುತ್ತದೆ. ಹೀಗಿರುವಾಗ ಪುತ್ತೂರು, ಸುಳ್ಯದಲ್ಲಿ ಈಗ ಕಾಂಗ್ರೆಸ್ ಸ್ವಲ್ಪ ಬಲ ಪಡೆದುಕೊಂಡಿದೆ.
ಸುಳ್ಯದಲ್ಲಿ ಸೇವೆಯ ಹೆಸರಿನಲ್ಲಿ ಬಿಜೆಪಿ ಸರಕಾರಿ ಆಸ್ಪತ್ರೆಗಳಲ್ಲಿ ಮಾಡುತ್ತಿರುವ ಕೆಲಸದ ಬಗ್ಗೆ ಕಾಂಗ್ರೆಸ್ ಇತ್ತೀಚೆಗೆ ಇಶ್ಯೂ ಮಾಡಿತು. ಅದಕ್ಕೆ ಸುಳ್ಯ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿತು. ಕಾಂಗ್ರೆಸ್ ಅದಕ್ಕೆ ಸರಿಯಾದ ಉತ್ತರ ನೀಡಲು ವಿಫಲವಾಯಿತು. ವಾಸ್ತವಾಗಿ ಕೆಲವು ಕಡೆಗಳಲ್ಲಿ ಈಗಲೂ ಕೋವಿಡ್ ವ್ಯಾಕ್ಸಿನೇಶನ್ ಸೇರಿದಂತೆ ಸೇವೆಯ ಹೆಸರಿನಲ್ಲಿ ತೊಂದರೆ ಆಗುವ ಬಗ್ಗೆ ಜನರ ಹಳ್ಳಿಯಲ್ಲಿ ಮಾತನಾಡುತ್ತಾರೆ, ಆದರೆ ಧೈರ್ಯವಾಗಿ ಹೇಳಲು ಹಿಂಜರಿಯುತ್ತಾರೆ. ಇದನ್ನೇ ಕಾಂಗ್ರೆಸ್ ಕೂಡಾ ಹೇಳಲು ಹಿಂಜರಿಯುತ್ತದೆ…!.
ಕೊರೋನಾ ಸಮಯದಲ್ಲಿ ಜನರ ಹಿತಕ್ಕಾಗಿ ರಾಜಕೀಯ ಬಿಟ್ಟು ಮಾತನಾಡಲು ಏಕೆ ಆಗುವುದಿಲ್ಲ.?
ಕೋವಿಡ್ ಸಮಯದ ಕೆಲವು ಸಂಗತಿಗಳು ಇವೆ. ಕೋವಿಡ್ ರಾಜಕೀಯವೂ ಇದೆ. ಇಷ್ಟೇ ಅಲ್ಲ ಇನ್ನೂ ಕೆಲವು ಸಂಗತಿಗಳು ಇದೆ ಮುಂದಿನ ಬರಹದಿಂದ ಸ್ಟ್ರಾಂಗ್ ಚಹಾ ಮಾಡೋಣ….
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…