ಬೆಂಗಳೂರು ಅಂದ್ರೆ ಅದೊಂದು ಮಾಯಾನಗರಿ. ನೀವು ಕೆಲಸಕ್ಕೆಂದು ಹೋದರೆ ಕೈ ಹಿಡಿಯುತ್ತೆ… ಹಾಗೆ ಕೈ ಸುಡುತ್ತೆ ಕೂಡಾ…!. ಇಂತಹ ಮಹಾನಗರಿಯಲ್ಲಿ ಒಂದು ಮನೆ ಹುಡುಕುವುದು ಅಂದರೆ ಅದು ತಮಾಷೆಯ ವಿಷಯವಲ್ಲ. ಅದರಲ್ಲೂ ಕೋಟಿ ಜನರ ಕನಸಿನ ನಗರಿಯಲ್ಲಿ ಸಿಂಗಲ್ ಬೆಡ್ ರೂಂಗೂ ಬಾಯಿ ತೆರೆಯುವಷ್ಟು ಕಾಸು ಕೊಡ್ಬೇಕು. ಇಲ್ಲಿ ನಮಗೆ ಇಷ್ಟ ಆಗುವ ಮನೆ ಬೇಕು ಅಂದರೆ ದುಪ್ಪಟ್ಟು ಹಣ ನೀಡಲೇಬೇಕು. ಅದರಲ್ಲೂ ಓನರ್ಗಳ ಒಂದಷ್ಟು ರೂಲ್ಸ್ಗೆ ಓಕೆ ಅನ್ನಬೇಕು…! ಸದ್ಯ ಬೆಂಗಳೂರಿನ ಇಂದಿರಾನಗರದಲ್ಲಿ ಬಾಡಿಗೆ ಮನೆ ಪಡೆಯಲು ಮನೆಗೆ ಠೇವಣಿ ನೀಡುವ ಬಗ್ಗೆ ವ್ಯಕ್ತಿಯೊಬ್ಬರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಅನೇಕರು ಬಾರಿ ಕಮೆಂಟ್ ಗಳನ್ನೇ ಹಾಕುತ್ತಿದ್ದಾರೆ.
ಇಂದಿರಾನಗರದಲ್ಲಿ ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟಕ್ಕಿದೆ… ಇದು ತಮಾಷೆಗಾಗಿ, ಆದ್ರೆ ನನಗೆ ಇಂದಿರಾನಗರದಲ್ಲಿ ಮನೆ ಬೇಕಿದೆ. ನನ್ನ ಪ್ರೊಫೈಲ್ಗಾಗಿ ಇಲ್ಲಿ ಸ್ಕ್ಯಾನ್ ಮಾಡಿ ಎಂದು ಕ್ಯೂಆರ್ ಕೋಡ್ ಹಾಕಿರುವ ಪೋಸ್ಟರನ್ನು ಮರಕ್ಕೆ ಅಂಟಿಸಲಾಗಿದೆ. ಸದ್ಯ ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದು ತಮಾಷೆಯ ಪೋಸ್ಟ್ ಆಗಿದ್ದರೂ ಜನಸಾಮಾನ್ಯರ ಗೋಳಾಗಿದೆ. ಟ್ವಿಟರ್ ಬಳಕೆದಾರ ಹೆಸರಿನಲ್ಲಿ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಟೆಕ್ ಕ್ಯಾಪಿಟಲ್ ಬೆಂಗಳೂರಿನಲ್ಲಿ ಮನೆಗಳ ಹೆಚ್ಚಿನ ಬಾಡಿಗೆ ಮತ್ತು ಠೇವಣಿಗಳ ಬಗ್ಗೆ ಜನರು ಪ್ರತಿಕ್ರಿಯಿಸುವುದರೊಂದಿಗೆ ತಮ್ಮ ಅನುಭವವನ್ನೂ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟರ್ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಡಿಗೆ ಮತ್ತು ಠೇವಣಿಗಳ ಕುರಿತು ಚರ್ಚೆಗೆ ವೇದಿಕೆಯಾಗಿದೆ.
ಅನಿತಾ ರಾಣೆ ಎಂಬುವವರು, ಬೆಂಗಳೂರು ದೇಶ ಮತ್ತು ಪ್ರಪಂಚದ ಹಲವು ಭಾಗಗಳ ಜನರಿಗೆ ನೆಲೆಯಾಗಿದೆ. ಮಾರ್ಕೆಟಿಂಗ್ ತಂತ್ರಗಳನ್ನು ಆಶ್ರಯಿಸಬೇಕಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.
ಅಭಿತೋಷ್ ಅನ್ನೋರು, ತಾವು ಮನೆ ಹುಡುಕುವಾಗ ಮಾಲೀಕರಿಗೆ ನಿನ್ನನ್ನು ಶ್ರೀಮಂತನನ್ನಾಗಿ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬದುಕಬೇಕು ಎಂದು ನಿರ್ಧರಿಸುವವರಿಗೆ ನಿಜಕ್ಕೂ ಇದೊಂದು ಎಚ್ಚರಿಕೆಯ ಗಂಟೆ. ದುಡಿದದ್ದೆಲ್ಲಾ ಬಾಡಿಗೆ ಕಟ್ಟಾಕೆ ಸರಿ ಎಂಬ ಮಾತು ಬೆಂಗಳೂರಿನಲ್ಲಿ ಜನಜನಿತ. ಕೊರನಾ ಮುಗಿದ ಮೇಲಂತು ಸಿಲಿಕಾನ್ ಸಿಟಿಯಲ್ಲಿ ಬಾಯಿಗೆ ಬಂದ ರೇಟ್ ಹೇಳುತ್ತಾರೆ. ಮನೆ ಖಾಲಿ ಇದ್ರು ತಾವು ನಿರೀಕ್ಷಿಸಿದಷ್ಟು ಭಾಡಿಗೆ ಬಂದಿಲ್ಲ ಅಂದ್ರೆ ಹಾಗೆ ಖಾಲಿ ಬೇಕಾದ್ರು ಇಟ್ಟುಕೊಳ್ಳುತ್ತಾರೆ, ಆದ್ರೆ ಬಾಡಿಗೆಗ ಮಾತ್ರ ಕೊಡಲ್ಲ. ಇದು ಸದ್ಯದ ಬೆಂಗಳೂರಿನ ಬಾಡಿಗೆ ಮನೆ ಮಾಲಿಕರ ಸ್ಟೇಟಸ್..
ಅವರ ಈ ಹಠಮಾರಿತನಕ್ಕೆ ಬಾಡಿಗೆದಾರರು ಕಿಡ್ನಿ ಮಾರಿ ಬದುಕುವ ಪರಿಸ್ಥಿತಿ ಬಾರದಿದ್ದರೆ ಅಷ್ಟೇ ಸಾಕು..!
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಾರ್ಚ್…
ಸಣ್ಣಪುಟ್ಟ ಸಮಸ್ಯೆಗಳಿಗೆ, ಮುಂದೆ ಆಗಬಹುದಾದ ಅನೇಕ ಸಾಧ್ಯತೆಗಳ ಊಹಾತ್ಮಕ ಘಟನೆಗಳಿಗೆ, ಇನ್ನೂ ಅನೇಕ…
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ಭಾರತೀಯ…
ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…
ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…
ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…