#KidneyStones| ಮೂತ್ರಪಿಂಡದ ಕಲ್ಲುಗಳ ಸಮಸ್ಯೆ| ಆಯುರ್ವೇದದಲ್ಲಿದೆ ಸುಲಭ ಪರಿಹಾರ

August 11, 2023
8:02 PM
ಪದೇ ಪದೇ ಕಾಫಿ ಸೇವನೆ ಮಾಡುವುದು ನಮ್ಮ ಚಯಾಪಚಯ ಕ್ರಿಯೆಯನ್ನು (ಮೆಟಾಬಾಲಿಸಂ) ಹೆಚ್ಚಿಸುತ್ತವೆ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣ ಉಂಟಾಗುತ್ತದೆ. ಪರಿಣಾಮವಾಗಿ ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುತ್ತವೆ.
Advertisement

ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ. ನಮ್ಮಆಹಾರ ಪದ್ಧತಿಯು ಬದಲಾಗಿದ್ದು ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಸಮಸ್ಯೆಗಳಲ್ಲಿ ಮೂತ್ರಕೋಶದಲ್ಲಿ ಕಲ್ಲು ಕಾಣಿಸಿಕೊಳ್ಳುವುದು ಒಂದಾಗಿದೆ.

Advertisement

ಆಯುರ್ವೇದದ ಪ್ರಕಾರ ಮೂತ್ರಪಿಂಡದ ಕಲ್ಲುಗಳಿಗೆ ಅಶ್ಮರಿ ಎಂದು ಕರೆಯಲಾಗುತ್ತದೆ.ಈ ಸಂಸ್ಕೃತ ಪದವು ಎರಡು ಪದಗಳನ್ನು ಸೇರಿಸಿ ಮಾಡಲಾಗಿದೆ. ಅಸ್ಮ ಮತ್ತು  ಅರಿ  ಎಂಬ ಎರಡು ಪದಗಳು  ಅಶ್ಮ ಎಂದರೆ ಕಲ್ಲು . ಅರಿ ಎಂದರೆ ಶತ್ರು ಎಂದರ್ಥ.

Advertisement
Advertisement

ಮೂತ್ರಪಿಂಡದ ಕಲ್ಲುಗಳಿಗೆ ಕಾರಣ :

* ಕ್ಯಾಲ್ಸಿಯಂ ಆಕ್ಸಲೆಟ್ ಮತ್ತು ಯೂರಿಕ್ ಆಮ್ಲದಂತಹ ಖನಿಜಗಳ ಮಟ್ಟಗಳು ಮೂತ್ರದಲ್ಲಿ ತುಂಬಾ ಹೆಚ್ಚಾಗಿ ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆ ಆಗುತ್ತದೆ ಮತ್ತು ಅವುಗಳನ್ನು ಸರಿಯಾಗಿ ಕರಗಿಸಲು ದ್ರವದ ಕೊರತೆಯಿಂದಾಗಿ ಅವು ಹೆಚ್ಚಿನ ಸಮಯದವರೆಗೆ ಸಂಗ್ರಹವಾಗುತ್ತದೆ

Advertisement

* ಅತಿ ಕಡಿಮೆ ನೀರಿನ ಸೇವನೆ

* ಅತಿ ಪ್ರೊಟೀನ್, ಸಕ್ಕರೆ ಅಥವಾ ಸೋಡಿಯಂ ಸಮೃದ್ಧವಾಗಿರುವ ಆಹಾರ ಸೇವನೆ

Advertisement

* ಅಧಿಕ ತೂಕ/ಬೊಜ್ಜು

* ಮೂತ್ರಪಿಂಡದ ಕಲ್ಲುಗಳ ಅನುವಂಶಿಕ ಇತಿಹಾಸ ಹಾಗೂ ಹಳೆಯ ಕಿಡ್ನಿ ಸ್ಟೋನ್ ನ ಪುನರ್ ರಚನೆ

Advertisement

* ಕರುಳಿನ ಶಸ್ತ್ರಚಿಕಿತ್ಸೆ ಅಥವಾ ಗ್ಯಾಸ್ಟ್ರಿಕ್ ನ ಸಮಸ್ಯೆ

* ಪೋಲಿ ಸಿಸ್ಟಿಕ್ ಅಥವಾ ಸಿಸ್ಟಿಕ್ ನಂತಹ ಮೂತ್ರಪಿಂಡದ ಕಾಯಿಲೆಗಳು

Advertisement

* ಕ್ಯಾಲ್ಸಿಯಂ ಆಧಾರಿತ antacids(ಗ್ಯಾಸ್ಟ್ರಿಕ್ ಮಾತ್ರೆಗಳು )ಅಥವಾ ಮೂತ್ರವರ್ಧಕಗಳು  ಸೇರಿದಂತೆ  ಹಲವು ಔಷಧಿಗಳ ಪ್ರಯೋಗ

*Renal tubular Acidosis, Cystinuria, urinary tract infection( ಮೂತ್ರನಾಳದ ಸೋಂಕು)   Hyperparathyroidism ಇತ್ಯಾದಿ ವೈದ್ಯಕೀಯ ಪರಿಸ್ಥಿತಿಗಳು

Advertisement

ಲಕ್ಷಣಗಳು

  • ನೋವು…. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದಿಂದ ಮೂತ್ರನಾಳಕ್ಕೆ ಹಾದು ಹೋಗುವಾಗ ಬಹಳಷ್ಟು ನೋವನ್ನು ಉಂಟು ಮಾಡುತ್ತದೆ. ಪಕ್ಕೆಲಬುಗಳ ಕೆಳಗೆ ಬೆನ್ನು ಹೊಟ್ಟೆಯ ಕೆಳಭಾಗದಲ್ಲಿ ವಿಪರೀತ ನೋವು ಉಂಟಾಗುವುದು
  • ಮೂತ್ರ ವಿಸರ್ಜಿಸುವಾಗ ವಿಪರೀತ ನೋವು
  • ಪದೇ ಪದೇ ಮೂತ್ರ ವಿಸರ್ಜನೆ
  • ಮೂತ್ರದಲ್ಲಿ ಕೆಲವೊಮ್ಮೆ ಕೀವು ಅಥವಾ ರಕ್ತಸ್ರಾವ
  • ಮೂತ್ರದ ಬಣ್ಣದಲ್ಲಿ ಬದಲಾವಣೆ ( ಹಳದಿ ಕೆಂಪು ಗುಲಾಬಿ ಬಣ್ಣದ ಮೂತ್ರ ವಿಸರ್ಜನೆ )
  • ವಾಂತಿ ವಾಕರಿಕೆ ಜ್ವರ ಮೈ ಕೈ ನೋವು ಇತ್ಯಾದಿ ಲಕ್ಷಣಗಳನ್ನು ಕಾಣಬಹುದು

ಚಿಕಿತ್ಸೆ ಮತ್ತು ಪರಿಹಾರ  – ಮೂತ್ರಪಿಂಡದ ಕಲ್ಲಿನ ಚಿಕಿತ್ಸೆಯು ಅದರ ಕಾರಣದ ಅಂಶಗಳ ಮೇಲೆ ಅವಲಂಬಿತವಾಗಿದೆ..ಕಲ್ಲಿನ ಗಾತ್ರ ಕಲ್ಲಿನ ಸಂಯೋಜನೆ ಮತ್ತು ಅದು ಮೂತ್ರನಾಳವನ್ನು ನಿರ್ಬಂಧಿಸುತ್ತದೆಯೇ  ಹಾಗೂ ನೋವಿನ ತೀವ್ರತೆ ಇದನ್ನೆಲ್ಲ ಅರಿತು ಚಿಕಿತ್ಸೆ ನೀಡಬೇಕು

Advertisement

ಅತಿ ಹೆಚ್ಚು ನೀರನ್ನು ಕುಡಿಯುವ ಮೂಲಕ ಹಾಗೂ ನಿರ್ದಿಷ್ಟ ಆಹಾರ ವ್ಯಾಯಾಮ ಮತ್ತು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಗಳಿಂದ ಸಣ್ಣ ಗಾತ್ರದ ಮೂತ್ರಪಿಂಡದ ಕಲ್ಲನ್ನು ದೇಹದಿಂದ ಹೊರಹಾಕಬಹುದು. ದೊಡ್ಡ ಗಾತ್ರದ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆಗಳು ಅಥವಾ ವ್ಯಾಪಕವಾದ ಹೈಡ್ರೋಥೆರಪಿ ಅಥವಾ. ಫ್ಲಶ್ ತೆರಪಿ  ಬೇಕಾಗಬಹುದು

 ಪರಿಹಾರ

Advertisement
  • ಹೆಚ್ಚು ನೀರು ಕುಡಿಯುವುದು,
  • ಸಾತ್ವಿಕ ಆಹಾರ ಸೇವನೆ – ಕ್ಯಾರೆಟ್ ಬಾಳೆಹಣ್ಣು ಸೋರೆಕಾಯಿ ಮೂಲಂಗಿ ಕುಂಬಳಕಾಯಿ ನಿಂಬೆಹಣ್ಣು ಬಾರ್ಲಿ ಹೆಸರುಬೇಳೆ ಹುರುಳಿಕಾಳುಗಳ ಸೇವನೆ ನೀರಿನ ಅಂಶ ಜಾಸ್ತಿ ಇರುವ ಕಳ್ಳಂಗಡಿಯನ್ನು ಕಬ್ಬು ನೆಲ್ಲಿಕಾಯಿ ಎಳನೀರು ಮಜ್ಜಿಗೆ ಬಾರ್ಲಿ ನೀರು ಕುಂಬಳಕಾಯಿ ಸೂಪ್ ಬಳಸುವುದು ಉತ್ತಮ.
  • ಮೈದಾ ಟೊಮೇಟೊ ಅತಿ ಪ್ರೊಟೀನ್ ಮತ್ತು ಸೋಡಿಯಂ ಆಹಾರ ಇವುಗಳನ್ನು ತ್ಯಜಿಸುವುದು ಉತ್ತಮ
  • ಕಲ್ಲುಗಳ ಚಿಕಿತ್ಸೆ ನೀಡಲು ಹಾಗೂ ತಡೆಗಟ್ಟಲು ಆಯುರ್ವೇದದ ಹಲವಾರು ಗಿಡಮೂಲಿಕೆಗಳ ಬಳಕೆ ಇದೆ.ಆದರೆ ಅದನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಬಳಕೆಯನ್ನು ವೈದ್ಯರ ಸಲಹೆ ಮೇರೆಗೆ ಮಾಡುವುದು ಉತ್ತಮ.

ಮೂತ್ರ ಪಿಂಡದ ಕಲ್ಲನ್ನು ನಿರ್ವಹಿಸಲು ಸಹಾಯ ಮಾಡುವ ಕೆಲವು ಆಯುರ್ವೇದ ಗಿಡಮೂಲಿಕೆಗಳು

*ಪಾಷಾಣ ಭೇದ, ಪುನರ್ನವ, ವರುಣ, ಬಕುಲ, ಜಾಸ್ಮಿನ್, ಕೊತ್ತಂಬರಿ, ಕದಲಿಕಂದ (ಬಾಳೆ ದಿಂಡು )

Advertisement

ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಪ್ರಮುಖ ಅಂಶಗಳು :-

  • ಹಿತವಾಗಿ ಮಿತವಾಗಿ ಆಹಾರ ಸೇವನೆ ಮತ್ತು ನೀರಿನ ಸೇವನೆ
  • ಮೂತ್ರ ವಿಸರ್ಜನೆಯ ಪ್ರಚೋದನೆಯನ್ನು ತಡೆಗಟ್ಟದೇ ಇರುವುದು
  • ಹೆಚ್ಚು ನೀರಿನ ಅಂಶವಿರುವ ಹಣ್ಣು ತರಕಾರಿಗಳ ಸೇವನೆ
  • ಬೇಕರಿ ತಿಂಡಿ ತಿನಿಸು ಮೈದ ಯುಕ್ತಹಾರ, ಟೊಮೆಟೊ ಅತಿಕೊಬ್ಬಿನ ಆಹಾರಗಳನ್ನು ತ್ಯಜಿಸುವುದು
  • ಪ್ರತಿನಿತ್ಯ ಯೋಗಾಸನ ಮಾಡುವುದು ( ಉಷ್ಟ್ರಾಸನ, ಪವನಮುಕ್ತಾಸನ, ಭುಜಂಗಾಸನ ಅರ್ಧಮತ್ಸೇoದ್ರಾಸನ, ಧನುರಾಸನ ಇವುಗಳು ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಉತ್ತಮ ಯೋಗಾಸನಗಳು

ಡಾ. ಜ್ಯೋತಿ ಕೆ, ಆಯುರ್ವೇದ ವೈದ್ಯರು ಮಂಗಳೂರು

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತುರಿಗಜ್ಜಿ (ಸ್ಕೇಬಿಸ್) ಎಂದರೇನು? | ಹೋಮಿಯೋಪತಿಯಲ್ಲಿದೆ ಪರಿಣಾಮಕಾರಿ ಚಿಕಿತ್ಸೆ |
December 1, 2023
12:55 PM
by: The Rural Mirror ಸುದ್ದಿಜಾಲ
ಜೀವ ಜಗತ್ತಿನ ಮಾರಿ ಈ ಪ್ಲಾಸ್ಟಿಕ್‌ | ಮದುವೆಯ ಉದ್ದೇಶ ಸಂತಾನವಲ್ಲ, ಸಂತಾನ ಹೀನತೆ..! | ‌ ಪ್ಲಾಸ್ಟಿಕ್‌ ಎಷ್ಟು ಅಪಾಯಕಾರಿ…!
November 30, 2023
2:15 PM
by: The Rural Mirror ಸುದ್ದಿಜಾಲ
ಅಭ್ಯಂಗ -ಮಸಾಜ್…. ಇದು ಪಂಚಕರ್ಮ ಚಿಕಿತ್ಸೆಯ ಒಂದು ವಿಧಾನ | ಇದರಿಂದಾಗುವ ಪ್ರಯೋಜನಗಳೇನು..? |
November 30, 2023
1:03 PM
by: The Rural Mirror ಸುದ್ದಿಜಾಲ
ಭೂಮಂಡಲದಲ್ಲಿ ʻಆಮ್ಲಜನಕʼ ಕೊರತೆ | ವಿಜ್ಞಾನಿಗಳ ಹೊಸ ಸಂಶೋಧನೆಯಿಂದ ಬಹಿರಂಗ..!
November 29, 2023
1:43 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror