ಕ್ಯಾಂಪ್ಕೋ ಸದ್ಯ ಲಾಭದಲ್ಲಿದೆ. ಕಳೆದ ಆರ್ಥಕ ವರ್ಷದಲ್ಲಿ 12 ಕೋಟಿ ರೂಪಾಯಿ ನಷ್ಟದಲ್ಲಿ ಸಂಸ್ಥೆ ಇತ್ತು. ಆದರೆ ಈಗ ಲಾಭದತ್ತ ಸಂಸ್ಥೆ ಬಂದಿದೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಯಾವತ್ತೂ ಕ್ಯಾಂಪ್ಕೋ ಇದೆ. ಸಂಸ್ಥೆಗೆ ನಷ್ಟವಾದರೂ ಅಡಿಕೆ ಬೆಳೆಗಾರರನ್ನು ಸೋಲಲು ಕ್ಯಾಂಪ್ಕೋ ಬಿಡಲಿಲ್ಲ, ಬಿಡುವುದೂ ಇಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕ್ಯಾಂಪ್ಕೋ ಸಂಸ್ಥೆಯ 49 ನೇ ವಾರ್ಷಿಕ ಮಹಾಸಭೆಯು ಮಂಗಳೂರಿನ ಸಂಘನಿಕೇತನದಲ್ಲಿ ಬುಧವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು, ಸಂಸ್ಥೆಯು ಕಳೆದ ಆರ್ಥಿಕ ವರ್ಷದಲ್ಲಿ 12 ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ಕಾರಣ ಅಡಿಕೆಯ ಗುಣಮಟ್ಟ. ಮಳೆಗಾಲದ ವ್ಯವಸ್ಥೆಯಿಂದ ಅಡಿಕೆ ಗುಣಮಟ್ಟ ಕುಸಿತವಾಗಿತ್ತು. ಹೀಗಾಗಿ ಕಳಪೆ ಗುಣಮಟ್ಟದ ಅಡಿಕೆಗೆ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಸಿಗಲಿಲ್ಲ. ಈ ಕಾರಣದಿಂದ ಬ್ಯಾಂಕ್ ಬಡ್ಡಿ ಬಹಿತ ಇತರ ಕಾರಣಗಳಿಂದ ಸಂಸ್ಥೆಗೆ ನಷ್ಟವಾಗಿದೆ. ಆದರೆ ಆ ಬಳಿಕ ಸುಧಾರಿಸಿಕೊಂಡಿದ್ದು, ಸದ್ಯ ಸಂಸ್ಥೆಯ ಲಾಭದ ಹಾದಿಯಲ್ಲಿದೆ. ಸುಮಾರು 20 ಕೋಟಿಯಷ್ಟು ಸದ್ಯ ಲಾಭದತ್ತ ಮುನ್ನಡೆದಿದೆ, ಮುಂದೆಯೂ ಲಾಭದ ನಿರೀಕ್ಷೆ ಇದೆ ಎಂದರು.
ಸಂಸ್ಥೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕರೆಯಿಸಿ ಕಾರ್ಯಕ್ರಮ ಮಾಡಲಾಗಿತ್ತು. ಈ ಕಾರ್ಯಕ್ರಮ ಅನೇಕರಿಗೆ ನಷ್ಟಕ್ಕೆ ಕಾರಣ ಎಂಬ ಭಾವನೆ ಇದೆ, ಆದರೆ ದೊಡ್ಡ ಕಾರ್ಯಕ್ರಮಗಳಿಗೆ ಖರ್ಚು ಇರುವುದು ನಿಜ. ಆದರೆ ಈ ಕಾರ್ಯಕ್ರಮದ ನಂತರ ಅಡಿಕೆ ಬೆಳೆಗಾರರ ಕಡೆಗೂ ಕೇಂದ್ರ ಸರ್ಕಾರ ಗಮನಹರಿಸಿದೆ. ಅಡಿಕೆ ಆಮದು ದರ ಏರಿಕೆ ಮಾಡಿದೆ, ಇದರಿಂದ ಬೆಳೆಗಾರರಿಗೆ ಲಾಭವಾಗಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅಡಿಕೆ ಆಮದು ತಡೆಗೆ ಸತತ ಪ್ರಯತ್ನ ಕ್ಯಾಂಪ್ಕೋ ಮಾಡಿದೆ. ಅಕ್ರಮ ಅಡಿಕೆ ತಡೆಗೂ ಪ್ರಯತ್ನವಾಗಿದೆ. ಸೋಡಿಯಂ ನೈಟ್ರೇಟ್, ಖರ್ಜೂರ ಹೆಸರಿನಲ್ಲಿ ಅಡಿಕೆ ಆಮದಾಗುತ್ತಿತ್ತು, ಈ ಕಡೆಗೂ ಗಮನಹರಿಸಿ ಅಡಿಕೆ ಆಮದು ತಡೆಗೆ ಪ್ರಯತ್ನವಾಗಿದೆ ಎಂದು ಕೊಡ್ಗಿ ಹೇಳಿದರು.
ಅಡಿಕೆ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ ಸೇರಿದಂತೆ ಅಡಿಕೆ ರೋಗ ನಿಯಂತ್ರಣ ಹಾಗೂ ಸೂಕ್ತ ಕ್ರಮಗಳಿಗಾಗಿ ಸಂಸ್ಥೆಯ ಬೈಲಾ ತಿದ್ದುಪಡಿ ಮಾಡಿ ಸಂಶೋಧನೆಗೂ ಕ್ಯಾಂಪ್ಕೋ ತೊಡಗಿಸಿಕೊಳ್ಳಲಿದೆ. ಅದಾಗ್ಯೂ ಈಗಾಗಲೇ ಹಲವು ಕ್ರಮಗಳನ್ನು ವಿಜ್ಞಾನಿಗಳ ಮೂಲಕ ಮಾಡಲು ಪ್ರಯತ್ನ ಮಾಡಿದೆ ಎಂದರು.
ಇದೀಗ ಅಡಿಕೆಯ ಜೊತೆಗೆ ಬೆಳೆಗಾರರು ತಾಳೆ, ಕಾಫಿ, ಸಾಂಬಾರ ಬೆಳೆ ಬೆಳೆಗೆ ಅವಕಾಶ ನೀಡಬೇಕಾಗಿದ್ದು ಕ್ಯಾಂಪ್ಕೋ ಕೂಡಾ ಬೈಲಾ ತಿದ್ದುಪಡಿಯ ಮೂಲಕ ಈ ಕ್ಷೇತ್ರದತ್ತಲೂ ಗಮನಹರಿಸಲಿದೆ ಎಂದರು.
ಅಡಿಕೆ ಹಾನಿಕಾರಕವಲ್ಲ ಎಂಬ ಬಗ್ಗೆ ಅಧ್ಯಯನದ ಪ್ರಯತ್ನ ನಡೆಯುತ್ತಿದೆ. ಜೀಬ್ರಾ ಮೀನನ ಮೇಲೆ ಅಡಿಕೆಯ ಪ್ರಯೋಗ ಮಾಡಲಾಗಿದ್ದು, ಅಡಿಕೆ ಕ್ಯಾನ್ಸರ್ ವಿರೋಧಿ ಔಷಧಿ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಸಭೆಯಲ್ಲಿ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು. ಸದಸ್ಯ ಪುರುಷೋತ್ತಮ ಭಟ್ ಮಾತನಾಡಿ, ಮಕ್ಕಳು ಶ್ರೀಮಂತರಾಗಿ – ತಾಯಿ ಬಡವಳಾದ ಹಾಗೆ ಆಗಬಾರದು. ಸಂಸ್ಥೆಯೂ ಲಾಭದಲ್ಲಿಯೇ ಮುನ್ನಡೆಯಬೇಕು. ಕೊರೋನಾ ಸಮಯದಲ್ಲೂ ಅಡಿಕೆ ಬೆಳೆಗಾರರನ್ನು ಸಂಸ್ಥೆಯು ಕೈಬಿಡಲಿಲ್ಲ. ಹೀಗಾಗಿ ಈಗ ಸಂಸ್ಥೆಯ ನಷ್ಟ ಗಂಭೀರವಾಗಿ ಗಮನಿಸಬೇಕು, ಎಲ್ಲಿ ನಷ್ಟವಾಗಿದೆ ಎಂಬುದನ್ನು ಆಡಳಿತ ಮಂಡಳಿ ಗಮನಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ಅಡಿಕೆ ಬೆಳೆ ವಿಸ್ತರಣೆ ಅಪಾಯ ಏನು? ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ,
ಅಡಿಕೆ ಬೆಳೆ ವಿಸ್ತರಣೆ ಕ್ಯಾಂಪ್ಕೋ ಜವಾಬ್ದಾರಿ ಇಲ್ಲ. ಇದನ್ನು ಅಧಿಕಾರಿಗಳು ಹಾಗೂ ಸರ್ಕಾರವೇ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದರು.
ಮಹಾಸಭೆಯ ಆರಂಭದಲ್ಲಿ ಕ್ಯಾಂಪ್ಕೋ 50 ನೇ ವರ್ಷದ ನೆನಪಲ್ಲಿ “ಪೂಗಸಿರಿ” ಎನ್ನುವ ಪುಸ್ತಕ ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಬಿಡುಗಡೆಗೊಳಿಸಿದರು. ಅದಕ್ಕೂ ಮುನ್ನ ಸಾಧಕ ಕೃಷಿಕ ಬೆಳ್ತಂಗಡಿಯ ಕೃಷಿಕ ಬಿ ಕೆ ದೇವರಾವ್ ಹಾಗೂ ಗೋಪಾಲಕೃಷ್ಣ ಶರ್ಮ ಅವರನ್ನು ಗೌರವಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಗೌರವಿಸಿದರು.ಇದೇ ವೇಳೆ ಕ್ಯಾಂಪ್ಕೋ ಸಂಸ್ಥೆಯ ನೂತನ ಉತ್ಪನ್ನಗಳನ್ನು ಅಡಿಕೆ ಟಾಸ್ಕ್ ಫೋರ್ಸ್ ಸಮಿತಿಯ ಅರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದರು.
ಮಂಗಳೂರು ತಾಲೂಕಿನ ಎಲ್ಲಾ ಗ್ರಾಮಗಳು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ…
ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ನೋಂದಾವಣೆಗೊಂಡ ರೈತರ ತಾಲೂಕಿನಲ್ಲಿ ವಿಮೆ ಮಾಡಿಸಲಾಗಿರುವ…
ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಪ್ರಮುಖವಾಗಿ ಕುಮುಟಾ ಮತ್ತು ಅಂಕೋಲಾದಲ್ಲಿ…
ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಡಾ. ಎಂ.ಎಚ್ ಮರೀಗೌಡ ಸಭಾಂಗಣದಲ್ಲಿ ಮೂರು ದಿನಗಳ…
ಜೇನು ಕೃಷಿ ಲಾಭದಾಯಕವಾಗಿದ್ದು, ರೈತರು ಈ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೇಂದ್ರ…
24.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…