ಹಾಲಿನ ಹೆಸರಲ್ಲಿ ಕಲಬೆರಕೆ..? ಕೋಲಾರದಲ್ಲಿ ದಾಳಿ | 1,120 ಲೀಟರ್ ಹಾಲು ಜಪ್ತಿ

February 8, 2026
5:49 AM
ಕೋಲಾರ ಜಿಲ್ಲೆಯ ಖಾಸಗಿ ಹಾಲು ಕೇಂದ್ರಗಳಲ್ಲಿ ಕಲಬೆರಕೆ ಹಾಲು ಮಾರಾಟ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಡೆಸಿದ ಏಕಕಾಲದ ದಾಳಿಯಲ್ಲಿ 1,120 ಲೀಟರ್ ಹಾಲು ಜಪ್ತಿ ಮಾಡಲಾಗಿದ್ದು, 40 ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ಕೋಲಾರ ಜಿಲ್ಲೆಯ ಖಾಸಗಿ ಹಾಲು ಉತ್ಪಾದನೆ ಹಾಗೂ ಮಾರಾಟ ಕೇಂದ್ರಗಳಲ್ಲಿ ಕಲಬೆರಕೆ ಹಾಲು ಮಾರಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬುಧವಾರ ಬೆಳಗಿನ ಜಾವ ಸಂಯುಕ್ತ ಕಾರ್ಯಾಚರಣೆ ನಡೆಸಿದೆ.

ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಇಲಾಖೆಯ 30 ವಿಶೇಷ ತಂಡಗಳು ಜಿಲ್ಲಾದ್ಯಂತ ವಿವಿಧ ಹಾಲು ಕೇಂದ್ರಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದವು. ಕಾರ್ಯಾಚರಣೆಗೆ ಮುನ್ನ ಸಂಪೂರ್ಣ ರಹಸ್ಯವಾಗಿ ನೀಲನಕ್ಷೆ ಸಿದ್ಧಪಡಿಸಲಾಗಿತ್ತು.

ಅನಿರೀಕ್ಷಿತ ತಪಾಸಣೆ ವೇಳೆ ಯಾವುದೇ ದಾಖಲೆಗಳಿಲ್ಲದ ಹಾಗೂ ಸಂಶಯಾಸ್ಪದವಾಗಿದ್ದ ಒಟ್ಟು 40 ಹಾಲಿನ ಮಾದರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಾದರಿಗಳನ್ನು ತಕ್ಷಣವೇ ಬೆಂಗಳೂರು ರಾಜ್ಯ ಆಹಾರ ಪ್ರಯೋಗಾಲಯಕ್ಕೆ ವೈಜ್ಞಾನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ.

ಇದಕ್ಕೆ ಜೊತೆಗೆ, ಮುಳಬಾಗಿಲು ತಾಲ್ಲೂಕಿನ ಸಿ. ಕೊರವನೂರು ಗ್ರಾಮದಲ್ಲಿ ಅಕ್ರಮವಾಗಿ ಹಾಲು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ತಪಾಸಣೆ ನಡೆಸಿದ ಅಧಿಕಾರಿಗಳು, 28 ಕ್ಯಾನ್ಗಳಲ್ಲಿ ತುಂಬಿದ್ದ ಸುಮಾರು 1,120 ಲೀಟರ್ ಹಾಲನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಪ್ರಾಥಮಿಕ ತನಿಖೆಯಲ್ಲಿ ಈ ಹಾಲು ಯಾವುದೇ ಮಾನ್ಯತೆ ಅಥವಾ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಪರೀಕ್ಷಾ ವರದಿಗಳ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕಾರ್ಯಾಚರಣೆ ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ಕಲಬೆರಕೆ ಆಹಾರ ಮಾರಾಟಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಡೆಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಇದನ್ನೂ ಓದಿ…

ಆಗ್ನೇಯ ಏಷ್ಯಾದಲ್ಲಿ ‘ಅಡಿಕೆ ಅಲರ್ಟ್‌’ | WHO ಹೊಸ “Strategic Framework”

ಓದುಗರ ಅಭಿಪ್ರಾಯಕ್ಕೆ….

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ
April 13, 2026
7:45 AM
by: ದ ರೂರಲ್ ಮಿರರ್.ಕಾಂ
ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
April 13, 2026
7:09 AM
by: ಮಿರರ್‌ ಡೆಸ್ಕ್
ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ
April 13, 2026
7:07 AM
by: ಮಿರರ್‌ ಡೆಸ್ಕ್
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ
April 13, 2026
7:03 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror