ಅಭಿವೃದ್ಧಿ ನಿರಂತರ. ಯಾವತ್ತೂ ಶಿಥಿಲದಿಂದ ಸುಧಾರಣೆಯ ಕಡೆಗೆ. ಆದರೆ ಗ್ರಾಮೀಣ ಭಾಗ ಕಟ್ಟ-ಕೊಲ್ಲಮೊಗ್ರ ಪ್ರದೇಶ ಜನರಿಗೆ ಹಾಗಲ್ಲ ಶಿಥಿಲದಿಂದ ಶಿಥಿಲಾವಸ್ಥೆ ಕಡೆಗೆ..!. ಬುಧವಾರದ ಮಳೆಗೆ ಇದ್ದ ಸೇತುವೆ ಕೊಚ್ಚಿ ಹೋಗಿ ಈ ಸ್ಥಿತಿ ಬಂದಿದೆ..!. ಘಟನೆ ಇದು.
ಸುಳ್ಯ ತಾಲೂಕಿನ ಕಟ್ಟ-ಕೊಲ್ಲಮೊಗ್ರ ಗ್ರಾಮೀಣ ಭಾಗ. ಕಾಡು ಹಾಗೂ ಶಿಥಿಲ ರಸ್ತೆಯ ಮೂಲಕ ಸಂಪರ್ಕ ಇರುವ ಊರು. ಇಲ್ಲಿ ಕಟ್ಟ – ಕೊಲ್ಲಮೊಗ್ರ ಮಾರ್ಗ ಮಧ್ಯೆ ಮುಳುಗು ಸೇತುವೆ ಇದೆ. ಕಳೆದ ಸುಮಾರು ಆರು ವರ್ಷದಿಂದ ಸ್ವಲ್ಪ ಸ್ವಲ್ಪ ಶಿಥಿಲಾವಸ್ಥೆಯಿಂದ ಕೂಡಿತ್ತು. ಬುಧವಾರ ಸುರಿದ ಮಳೆಗೆ ಇದ್ದ ಸೇತುವೆಯೂ ಸಂಪೂರ್ಣವಾಗಿ ಶಿಥಿಲಗೊಂಡಿದೆ.
ಈ ಹಿಂದೆ ದ್ವಿಚಕ್ರ ವಾಹನ ಸವಾರರು ದಾಟುತ್ತಿದ್ದು ಈಗ ದ್ವಿಚಕ್ರವಾಹನಕ್ಕೂ ಸವಾರಿ ಕಷ್ಟವಾಗಿದೆ. ಪಾದಾಚಾರಿಗಳಿಗೆ ಮಾತ್ರಾ ಹೋಗುವ ಸ್ಥಿತಿಗೆ ಬಂದಿದೆ. ಆಡಳಿತವು ಈ ಕಡೆಗೆ ಗಮನಹರಿಸಬೇಕಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಸೇತುವೆಗಳು ಸಂಪರ್ಕದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳುತ್ತದೆ. ಅತೀ ಅಗತ್ಯವಾಗಿ ದುರಸ್ತಿ ಆಗಬೇಕಿದೆ ಎಂಬುದು ಜನರ ಒತ್ತಾಯ.
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…
ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…