“ಕೃಷಿಕಾವಿಷ್ಕಾರಗಳು ಶ್ರಮವನ್ನು ಹಗುರ ಮಾಡುವಲ್ಲಿ ದೊಡ್ಡ ಕೊಡುಗೆ ನೀಡಿದೆ. ಮನೆಮಟ್ಟದ ಕಿರು ಉದ್ಯಮಗಳ ಅಭಿವೃದ್ಧಿಗೆ ಚಿಕ್ಕ ಪುಟ್ಟ ಸಾಧನ, ಯಂತ್ರಗಳು ನೆರವಾಗಿವೆ. ಬದಲಾದ ತಂತ್ರಜ್ಞಾನದ ಹಿನ್ನೆಲೆಯಲ್ಲಿ ರೈತ ಮಟ್ಟದ ಆವಿಷ್ಕಾರಗಳು ಕೃಷಿಯಲ್ಲಿ ವೆಚ್ಚವನ್ನು ಕಡಿಮೆಗೊಳಿಸಬಲ್ಲುದು. ಅಲ್ಲದೆ ಸ್ಥಳೀಯವಾಗಿ ಸಿದ್ಧವಾಗುವ ಉತ್ಪನ್ನಗಳು ಆತ್ಮ ನಿರ್ಭರ ಭಾರತದ ಆಶಯವನ್ನು ಸಾಕಾರಗೊಳಿಸುತ್ತದೆ.” ಎಂದು ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂ.ನಾ.ಖಂಡಿಗೆ ಅಭಿಪ್ರಾಯ ಪಟ್ಟರು.
ಅವರು ಏಳ್ಮುಡಿಯ ಮರಿಕೆ ಸಾವಯವ ಮಳಿಗೆಯಲ್ಲಿ ಜರುಗಿದ ಕೃಷಿಕ ಅನಂತಪ್ರಸಾದ್ ನೈತ್ತಡ್ಕ ಆವಿಷ್ಕಾರ ಮಾಡಿದ ‘ಕೋಪ್ರಾ ಬ್ರೇಕರ್’ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, “ತೆಂಗಿನ ಕಿರು ಉದ್ಯಮದ ಆಭಿವೃದ್ಧಿಗೆ ಈ ಸಾಧನ ತುಂಬಾ ಸಹಕಾರಿ.” ಎಂದರು. ಕೃಷಿಕ ತಂತ್ರಜ್ಞ ಶ್ಯಾಮಸುಂದರ ಭಟ್ ಬಟ್ಯಡ್ಕ ಶುಭಾಶಂಸನೆ ಮಾಡಿದರು.
ಅಕ್ಷ ಆರ್ಗಾನಿಕ್ಸ್ ಮತ್ತು ಹೌಸ್‍ಹೋಲ್ಡ್ ಅಪ್ಲಾಯನ್ಸನ್ ಸಂಸ್ಥೆಯ ಅನಂತಪ್ರಸಾದ್ ನೈತ್ತಡ್ಕ ಇವರು ತೆಂಗು ಇಬ್ಭಾಗಿಸುವ ‘ಕೋಪ್ರಾ ಬ್ರೇಕರ್’ ಸಾಧನದ ಕಾರ್ಯಕ್ಷಮತೆಯನ್ನು ವಿವರಿಸಿ ಸ್ವಾಗತಿಸಿದರು.
ಲೇಖಕ, ಹವ್ಯಾಸಿ ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಸುಹಾಸ ಎ.ಪಿ.ಮರಿಕೆ ವಂದಿಸಿದರು.
ಸಮಾರಂಭದಲ್ಲಿ ವೇಣುಗೋಪಾಲ ಶಿಬರ, ಎ.ಪಿ.ಸದಾಶಿವ ಮರಿಕೆ, ಅಕ್ಷತಾ, ಅಕ್ಷಯರಾಮ, ತೇಜಸ್ವಿನಿ ಉಪಸ್ಥಿತರಿದ್ದರು.
(ಚಿತ್ರ : ಚೇತನ ಸ್ಟುಡಿಯೋ ಪುತ್ತೂರು)
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…