ಆಧುನಿಕ ಭಾರತದ ರವೀಂದ್ರನಾಥ್ ಠಾಗೋರ್ ಎಂದೇ ಖ್ಯಾತರಾದ ಕಾರಂತರ ಹುಟ್ಟುಹಬ್ಬ ಇಂದು. 10 ಒಕ್ಟೋಬರ್ 1902 ರಂದು ಸಾಲಿಗ್ರಾಮದಲ್ಲಿ ಜನಿಸಿದರು. ಭಾರತದ ಸಾರಸ್ವತ ಲೋಕಕ್ಕೆ ಅತ್ಯಮೂಲ್ಯ ವಾದ ಕೊಡುಗೆಗಳನ್ನು ಕೊಟ್ಟವರು. 427 ಪುಸ್ತಕಗಳ ಕರ್ತೃ. ಅವುಗಳಲ್ಲಿ 47 ಕಾದಂಬರಿಗಳು. ಮೂಕಜ್ಜಿಯ ಕನಸುಗಳು ಕೃತಿ ಗೆ ಜ್ಞಾನ ಪೀಠ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರವಾಸವನ್ನು ಬಹು ಇಷ್ಟ ಪಡುತ್ತಿದ್ದ ಕಾರಂತರು ರಷ್ಯಾ ಹೊರತು ಪಡಿಸಿ ವಿಶ್ವದೆಲ್ಲೆಡೆ ಪಯಣಿಸಿದ್ದರು. ನಮ್ಮ ಸುಳ್ಯ , ಪುತ್ತೂರು ಪರಿಸರವೆಂದರೆ ವಿಶೇಷ ಪ್ರೀತಿ. ಬೆಟ್ಟದ ಜೀವ ಕಾದಂಬರಿಯನ್ನು ಕಟ್ಟ ಗೋವಿಂದಯ್ಯನವರ ಮನೆಯಲ್ಲೇ ಬರೆದರಂತೆ. ಸಾಹಿತ್ಯ ದ ಎಲ್ಲಾ ಪ್ರಾಕಾರ ಗಳಲ್ಲಿ ತಮ್ಮ ಪ್ರೌಢ್ಯ ಮೆರೆದಿದ್ದಾರೆ.
ಆ ದಿನವನ್ನು ನಮ್ಮಲ್ಲಿ ಯಾರೂ ಮರೆಯಲಾರರು. ಅಂದು ನಮ್ಮ ಶಾರದ ನಿಲಯ ಅಯ್ಯನಕಟ್ಟೆ ಮನೆಯಲ್ಲಿ ಹಬ್ಬದ ಸಂಭ್ರಮ. ಮನೆ ಮಂದಿ , ನೆಂಟರಿಷ್ಟರು, ಊರ ಮಹನೀಯರು , ಶಾಲಾ ಶಿಕ್ಷಕರು, ಆತ್ಮೀಯರೆಲ್ಲರೂ ಸೇರಿದ್ದರು. ಹಾಗೆಂದು ಅಲ್ಲಿ ಯಾವುದೇ ಸಭೆಯಾಗಲಿ , ಸಮಾರಂಭವಾಗಲಿ ಇರಲಿಲ್ಲ. ಆದರೆ ಎಲ್ಲರೂ ಸೇರಿದ್ದಾರೆ ಎಂದರೆ ಅದಕ್ಕೊಂದು ಪ್ರಬಲ ಕಾರಣವಿತ್ತು. ಕನ್ನಡ ನಾಡಿನ ಮಹಾ ಮಾನವತಾವಾದಿ, ವಿಶ್ವ ಪ್ರೇಮಿ ಕೋಟ ಶಿವರಾಮ ಕಾರಂತರು ಖಾಸಗಿ ಭೇಟಿಗೆ ಬರುವವರಿದ್ದರು. ಆರ್. ಕೆ . ಭಾಸ್ಕರ್ ಬಾಳಿಲ ಅವರ ನೇತೃತ್ವದಲ್ಲಿ ವಿನ್ಯಾಸ ಬಾಳಿಲ ವೇದಿಕೆಯಲ್ಲಿ” ಕಾರಂತರು ಮಾತನಾಡುತ್ತಾರೆ” ಕಾರ್ಯಕ್ರಮ ವನ್ನು 1983 ರ ಡಿಸೆಂಬರ್ 3 ರಂದು ಬಾಳಿಲ ವಿದ್ಯಾಭೋಧಿನಿ ಶಿಕ್ಷಣ ಸಂಸ್ಥೆ ಯಲ್ಲಿ
ಹಮ್ಮಿಕೊಳ್ಳಲಾಗಿತ್ತು. ಆ ದಿನಗಳಲ್ಲಿ ಮಾವ ಡಾ.ಪಿ .ಎಸ್ ಗಣಪಯ್ಯರು ಖ್ಯಾತ ಲೇಖಕರು ಹಾಗೂ ವಿನ್ಯಾಸ ಬಾಳಿಲದ ಸಂಚಾಲಕರಾಗಿದ್ದರು. ಶಿವರಾಮ ಕಾರಂತರು ನಮ್ಮ ಊರಿಗೆ ಬರುತ್ತಾರೆ ಎಂಬುದೇ ಹೆಮ್ಮೆಯ ವಿಷಯ. ಅವರನ್ನು ಸತ್ಕರಿಸುವ ಅವಕಾಶವನ್ನು ಪ್ರೀತಿಯಿಂದಲೇ ನಿಭಾಯಿಸಲಾಯಿತು. ಅತ್ತೆಯವರಾದ ಪಿ..ಜಿ .ಸಾವಿತ್ರಿಯವರು ಆ ದಿನಗಳ ಸಂಭ್ರಮ ವನ್ನು ಖುಷಿಯಿಂದಲೇ ಹಂಚಿಕೊಳ್ಳುತ್ತಾರೆ. ಕಬ್ಬಿನ ಹಾಲೆಂದರೆ ಕಾರಂತರಿಗೆ ಬಹಳ ಇಷ್ಟವೆಂದು ಮಾವ ಅದರ ವ್ಯವಸ್ಥೆಯನ್ನು ಮಾಡಿದ್ದರಂತೆ. ಮಧ್ಯಾಹ್ನ ಕ್ಕೆ ರಾಮಚಂದ್ರ ದೀಕ್ಷಿತರ ಹೋಳಿಗೆ ಊಟ ಅವರಿಗೆ ಬಹಳ ಮೆಚ್ಚುಗೆಯಾಯಿತೆಂದು ನೆನಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗಿನ ಮಾತುಕತೆಯನ್ನು ಮಕ್ಕಳು ಮೆಲುಕು ಹಾಕುತ್ತಾರೆ. ಅವರು ಬರೆದು ಕೊಟ್ಟ ಅಟೋಗ್ರಾಫ್ ಈಗಲೂ ಜೋಪಾನವಾಗಿದೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…