Advertisement
ವೈರಲ್ ಸುದ್ದಿ

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?

Share

ಕೇರಳದ ಪ್ರಸಿದ್ಧ ಕೊಟ್ಟಿಯೂರು ಮಹಾದೇವ ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಎನ್ನಲಾದ ಆಚರಣೆಗೆ ಸಂಬಂಧಿಸಿದಂತೆ ಹೊಸ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ, ಕರ್ನಾಟಕದ ಕಾರ್ಮಿಕರ ಕನಿಷ್ಟವೇತನ ಸಲಹಾ ಮಂಡಳಿಯ ಅಧ್ಯಕ್ಷ, ಸುಳ್ಯದ ಶಾಹಿದ್ ತೆಕ್ಕಿಲ್ ಮತ್ತು ಅವರ ತಂಡ ಕೊಟ್ಟಿಯೂರಿಗೆ ಭೇಟಿ ನೀಡಿ ಬಾವಳಿ ನದಿಯಲ್ಲಿ ಕಲ್ಲುಗಳನ್ನು ಜೋಡಿಸಿ ವಿಡಿಯೋ ಚಿತ್ರೀಕರಿಸಿದ್ದು, ಬಳಿಕ ಅದನ್ನು ದೇವಸ್ಥಾನದ ಪಾರಂಪರಿಕ ಆಚರಣೆ ಎಂದು ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೇರಳದ ಹಿಂದು ಐಕ್ಯವೇದಿ ಖಂಡಿಸಿದೆ.

 ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ, ಮುಸ್ಲಿಂ ಕುಟುಂಬವೊಂದು ದೇವಸ್ಥಾನಕ್ಕೆ ಸಂಬಂಧಿಸದ ಆಚರಣೆಯನ್ನು ಮಾಡಿದೆ ಎಂಬ ಭಾವನೆ ಮೂಡಿಲಾಗಿದೆ. ಅಲ್ಲದೆ, ‘ಬಾವಳಿಕೆಟ್ಟು’ ಎಂಬ ಹೆಸರಿನ ಯಾವುದೇ ಅಧಿಕೃತ ಆಚರಣೆ ಇಲ್ಲ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಕೇರಳದ ಹಿಂದು ಐಕ್ಯವೇದಿ ಕೂಡಾ ಈ ಘಟನೆಯನ್ನು ಖಂಡಿಸಿದೆ.  ದೇವಸ್ವಂ ಬೋರ್ಡ್‌ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಅಲ್ಲದೆ ಕೇವಲ ಬೆರಳೆಣಿಕೆಯ ಜನರನ್ನು ಸೇರಿಸಿ ಮಾಡಿರುವ ಆಚರಣೆ ಸರಿಯಲ್ಲ.  ಶಬರಿಮಲೆಯಂತೆ ಇಲ್ಲಿಯೂ ಮುಸ್ಲಿಂ ಆಚರಣೆಯೂ ಇತ್ತು ಎನ್ನುವ ಕಾರಣ ಕೊಟ್ಟು ದೇವಸ್ಥಾನದ ಬಳಿಯಿರುವ ನದಿಯಲ್ಲಿ ಕಲ್ಲುಗಳನ್ನು ಜೋಡಿಸಿ ಆಚರಣೆಯ ಭಾಗವೆನ್ನುವ ಪ್ರತೀತಿ ಸೃಷ್ಟಿಸುವ ಪ್ರಯತ್ನ ನಡೆಸಿರುತ್ತಾರೆ ಇದು ಸರಿಯಲ್ಲ ಎಂದು ಹಿಂದೂ ಐಕ್ಯವೇದಿ ಹೇಳಿದೆ.

ಈ ಆರೋಪಗಳಿಗೆ ಸಂಬಂಧಿಸಿದಂತೆ ದೇವಸ್ಥಾನ ಆಡಳಿತ ಮಂಡಳಿ ಅಥವಾ ಸಂಬಂಧಿತ ಅಧಿಕಾರಿಗಳಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣ ಬಂದಿಲ್ಲ. ಕೇರಳದ ಕೆಲವು ಮಾಧ್ಯಮಗಳೂ ಈ ಬಗ್ಗೆ ಸುದ್ದಿಯನ್ನು ಮಾಡಿವೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಮಾಹಿತಿಯ ಸತ್ಯಾಸತ್ಯತೆ ಕುರಿತು ಇನ್ನೂ ಸ್ಪಷ್ಟತೆ ಬಂದಿಲ್ಲ.

ಇತ್ತೀಚಿನ ದಿನಗಳಲ್ಲಿ ಕೊಟ್ಟಿಯೂರು ದೇವಸ್ಥಾನಕ್ಕೆ ಸಂಬಂಧಿಸಿದ ಕೆಲವು ಸಂಪ್ರದಾಯಗಳು ಮತ್ತು ವಿವಿಧ ಸಮುದಾಯಗಳ ಭಾಗವಹಿಸುವಿಕೆ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು, ಈ ಹೊಸ ವಿವಾದವೂ ಅದೇ ಹಿನ್ನೆಲೆಯಲ್ಲಿ ಗಮನ ಸೆಳೆದಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಆದರೆ ಈ ವಿವಾದ ಹೊಸದೇನಲ್ಲ, ಶತಮಾನಗಳಿಂದ ನಡೆದುಕೊಂಡು ಬಂದಿರುವ ಒಂದು ಸಂಪ್ರದಾಯದ ಭಾಗವಾಗಿದೆ ಎಂದು ಸ್ಥಳೀಯ ಇತಿಹಾಸ ಮತ್ತು ದೇವಸ್ಥಾನ ಸಂಪ್ರದಾಯಗಳ ಉಲ್ಲೇಖವೂ ಇದೆ. ಕೊಟ್ಟಿಯೂರು ಮಹಾದೇವ ದೇವಸ್ಥಾನವು ಕೇರಳದ ಅತ್ಯಂತ ಪುರಾತನ ಶಿವ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿವರ್ಷ ನಡೆಯುವ ವೈಶಾಖ ಮಹೋತ್ಸವದಲ್ಲಿ ವಿವಿಧ ಸಮುದಾಯಗಳು ತಮ್ಮದೇ ಆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಸಂಪ್ರದಾಯವೂ ಇದೆ. ಇಲ್ಲಿ ವಿವಿಧ ಸಮುದಾಯಗಳಿಗೆ ನಿರ್ದಿಷ್ಟ ಆಚರಣೆಗಳ ಜವಾಬ್ದಾರಿಗಳನ್ನು ಐತಿಹಾಸಿಕವಾಗಿ ಹಂಚಿಕೆ ಮಾಡಲಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಈ ಹಕ್ಕುಗಳು ಮತ್ತು ಕರ್ತವ್ಯಗಳು ಮುಂದುವರಿದು ಬಂದಿವೆ. ಇದರಿಂದ ಉತ್ಸವವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿಯೇ ಅಲ್ಲದೆ, ಸಾಮಾಜಿಕ ಸಹಬಾಳ್ವೆಯ ಪ್ರತೀಕವಾಗಿಯೂ ಗುರುತಿಸಿಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.

A social media post has triggered controversy regarding an alleged ritual called “Bavalikkettu” at Kerala’s Kottiyoor Temple. The post accuses a Muslim family and a Karnataka-based individual of attempting to portray a non-existent ritual as a temple tradition. However, no official confirmation or response has been issued by temple authorities regarding these claims.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

2 hours ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

1 day ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

1 day ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

1 day ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

1 day ago

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ

ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…

3 days ago