ಕೃಷಿ ಈ ದೇಶವನ್ನು ಬಲಪಡಿಸುವ ಕ್ಷೇತ್ರ. ಹೆಚ್ಚು ಉದ್ಯೋಗ ನೀಡಬಲ್ಲ ಕ್ಷೇತ್ರವೂ ಕೃಷಿ. ಈಚೆಗೆ ಹಲವು ಸಮಸ್ಯೆಗಳೂ ಇಲ್ಲಿ ಕಾಡುತ್ತಿವೆ. ಅದರಲ್ಲಿ ಕಾರ್ಮಿಕರ ಕೊರತೆಯೂ ಒಂದು. ನುರಿತ ಕಾರ್ಮಿಕರಂತೂ ಸಿಗುವುದೇ ಕಷ್ಟ ಎನ್ನುವ ಹಂತದಲ್ಲಿದೆ ಈ ಕ್ಷೇತ್ರ. ಹೀಗಾಗಿ ಕೃಷಿ ಕಾರ್ಮಿಕರ ಕ್ಷೇತ್ರದಲ್ಲಿ ತರಬೇತಿ ಹಾಗೂ ಇಡೀ ಕೆಲಸವನ್ನು ತಂಡವಾಗಿ ನಿರ್ವಹಣೆ ಮಾಡಬಲ್ಲ ತಂಡವು ಸಿದ್ಧವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬಾಳಿಲದಲ್ಲಿ “ಕೃಷಿಪರಿವಾರ” ಎನ್ನುವ ಸಂಸ್ಥೆ ಈಗ ಈ ಕೆಲಸ ಆರಂಭಿಸಿದೆ.
ಕೃಷಿಯಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗದ ಪರಿಸ್ಥಿತಿ ಹಲವು ಕೃಷಿಕರನ್ನು ಕಾಡುತ್ತಿದೆ. ಇದಕ್ಕಾಗಿ ಕೃಷಿ ಕ್ಷೇತ್ರದ ಕಾಲ ಕಾಲಕ್ಕೆ ಅಗತ್ಯ ಕೆಲಸಗಳನ್ನು ನಿರ್ವಹಣೆ ಮಾಡಲು ತಂಡವನ್ನು ಸುಳ್ಯದ ಬಾಳಿಲದಲ್ಲಿ ಕೃಷಿಪರಿವಾರ ಸಂಸ್ಥೆಯು ತಂಡವನ್ನು ಸಿದ್ಧ ಮಾಡಿದೆ. ಈಗಾಗಲೇ ಕೆಲಸವನ್ನು ಆರಂಭಿಸಿದೆ. ಸ್ಥಳೀಯವಾಗಿ ಹಾಗೂ ಇತರೆಡೆಯ ಕಾರ್ಮಿಕರನ್ನು ಇಲ್ಲಿ ಬಳಸಿಕೊಂಡು ತೋಟದ ಕೆಲಸವನ್ನು ಮಾಡಲಾಗುತ್ತಿದೆ. ಈ ಸಂಸ್ಥೆಯು ಮಣ್ಣು ಪರೀಕ್ಷೆ, ಗೊಬ್ಬರ ಪೂರೈಕೆ, ಗೊಬ್ಬರ ಹಾಕಿ ಕೊಡುವ ವ್ಯವಸ್ಥೆ, ತೋಟದ ಕಳೆ ತೆಗೆಯುವುದು, ತೋಟದ ಸಂಪೂರ್ಣ ನಿರ್ವಹಣೆ, ಔಷಧಿ ಸಿಂಪಡಣೆ, ಅಡಿಕೆ ಕೊಯಿಲು, ತೆಂಗು ಕೊಯಿಲು, ಅಡಿಕೆ ಸುಲಿಯುವುದು ಸೇರಿದಂತೆ ತೋಟದ ನಿರ್ವಹಣೆಗೆ ಏನೆಲ್ಲಾ ವ್ಯವಸ್ಥೆ ಬೇಕು ಅದನ್ನು ಮಾಡಲು ನುರಿತ ಕಾರ್ಮಿಕರನ್ನು ಜೋಡಿಸಿಕೊಂಡಿದೆ. ಈಗಾಗಲೇ ಈ ಸಂಸ್ಥೆಯ ಅಧಿಕೃತ ಉದ್ಘಾಟನೆಯೂ ನೆರವೇರಿದೆ.
ಸಂಸ್ಥೆಯ ಅಧಿಕೃತ ಉದ್ಘಾಟನಾ ಕಾರ್ಯಕ್ರಮವು ಈಚೆಗೆ ಬಾಳಿಲ ಮುಪ್ಪೇರ್ಯದ ಧರ್ಮಶಾಸ್ತಾ ಭಜನಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಬಾಳಿಲ ವಿದ್ಯಾಬೋಧಿನೀ ಎಜ್ಯುಕೇಶನಲ್ ಸೊಸೈಟಿ ಅಧ್ಯಕ್ಷರಾದ ಯು ರಾಧಾಕೃಷ್ಣ ರಾವ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಕಸ್ಟಮ್ಸ್ ಅಧಿಕಾರಿ ಆರ್ .ಕೆ .ಭಟ್ ಕುರುಂಬುಡೇಲು, ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ರಾವ್ ಕಿಲಂಗೋಡಿ, ಕಳಂಜ ಬಾಳಿಲ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಕೊಸಪ್ಪಗೌಡ ಮಗುಪ್ಪು, ಶ್ರೀದೇವಿ ಅಗ್ರಿಟೆಕ್ ನಿಂತಿಕಲ್ಲು ಇದರ ಮ್ಯಾಲಕರಾದ ತಿಮ್ಮಪ್ಪ ರೈ ಹಾಗೂ ಬಾಳಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರಮೇಶ್ ರೈ ಅಗಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.…… ಮುಂದೆ ಓದಿ……
ಸಂಸ್ಥೆಯ ಮುಖ್ಯಸ್ಥರಲ್ಲಿ ಓರ್ವರಾದ ರಾಜೇಶ್ ಸುವರ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಪರಿವಾರ ಸಂಸ್ಥೆಯು ಕೃಷಿಕರಿಗೆ ಅಗತ್ಯವಾದ ಕೃಷಿ ಚಟುವಟಿಕೆಗಳಿಗೆ ನುರಿತ ಕಾರ್ಮಿಕರನ್ನು ಒದಗಿಸಲಿದೆ. ಇದು ಒಂದು ಸಾಂಸ್ಥಿಕ ರೂಪದಲ್ಲಿ ನಡೆಯುವ ವ್ಯವಸ್ಥೆಯಾಗಿದ್ದು ಕೃಷಿಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನೈಪುಣ್ಯತೆ ಹೊಂದಿರುವ ಕಾರ್ಮಿಕರನ್ನು ಒದಗಿಸುವ ಕಾರ್ಯ ಮಾಡುತ್ತದೆ. ಇದರಿಂದಾಗಿ ಕೃಷಿಕರ ಕೆಲಸ ಕಾರ್ಯಗಳು ಕಾಲಕಾಲಕ್ಕೆ ನಡೆಯುವ ಮೂಲಕ ಕೃಷಿಯಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯವಿದೆ ಎಂದರು. ಸಂಸ್ಥೆಯ ಇನ್ನೋರ್ವ ಮುಖ್ಯಸ್ಥರಾದ ಬಾಲಕೃಷ್ಣ ಗೌಡ ಮರೆಂಗಾಲ ವಂದಿಸಿದರು. ಜಾಹ್ನವಿ ಕಾಂಚೋಡು ಕಾರ್ಯಕ್ರಮ ನಿರೂಪಿಸಿದರು. ಸಂಪರ್ಕ ಸಂಖ್ಯೆ : 8310566261 , 7676548863 . ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ ಸೇರಿಕೊಳ್ಳಿ….
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…