ರೈತರಿಗೆ ಆಶಾದಾಯಕ ಕೃಷಿಭಾಗ್ಯ ಯೋಜನೆ

May 23, 2025
10:32 PM

ಮಂಗಳೂರು ತಾಲೂಕಿನ ಎಲ್ಲಾ ಗ್ರಾಮಗಳು ಮಳೆಯಾಶ್ರಿತ ಕೃಷಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ ಹವಾಮಾನ ಬದಲಾವಣೆಯಿಂದ ಗಂಭೀರವಾಗಿ ಪ್ರಭಾವಕ್ಕೊಳಗಾಗಿದೆ. ಬೆಳೆ ಹಂಗಾಮುಗಳಲ್ಲಿ ಹೆಚ್ಚುತ್ತಿರುವ ಮಧ್ಯಮ ಶ್ರೇಣಿಯ ಬರ ಮತ್ತು ಪ್ರವಾಹಗಳಿಂದ ಮಳೆಯಾಶ್ರಿತ ಕೃಷಿಯು ಅನಿಶ್ಚಿತವಾಗಿರುತ್ತದೆ. ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರಿತ ಕೃಷಿಯಿಂದ ಸುಸ್ಥಿರ ಕೃಷಿಯನ್ನಾಗಿ ರೈತರ ಜೀವನ ಮಟ್ಟವನ್ನು ಉತ್ತಮಪಡಿಸಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.

Advertisement

ನೀರಾವರಿ ಪ್ರದೇಶದ ರೈತರಿಗೆ ನೀರಿನ ಲಭ್ಯತೆ ಖಚಿತವಾದ ಕಾರಣ ನೀರಾವರಿಯಲ್ಲಿ ನಿರೀಕ್ಷಿತ ಆದಾಯ ಸಿಗುವುದರಿಂದ, ವಿವಿಧ ಯೋಜನೆಗಳ ಅನುಕೂಲಗಳನ್ನು ಪಡೆದು ವ್ಯವಸಾಯದಲ್ಲಿ ಹೂಡುವಳಿ ಮಾಡುತ್ತಾರೆ. ಆದರೆ ಒಣ ಭೂಮಿ ರೈತರ ಆದಾಯ, ಮಳೆ ಮೇಲೆ ಅವಲಂಬಿತರಾಗಿರುವುದರಿಂದ ಈ ಸವಲತ್ತುಗಳನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಇವರ ಜೀವನೋಪಾಯದ ಮೇಲೆ ಪ್ರಭಾವ ಬೀರಿದೆ. ಕಡಿಮೆ ಮಳೆ ಬೀಳುವ ರೈತರು 1000 ಅಡಿವರೆಗೂ ಕೊಳವೆ ಬಾವಿ ಕೊರೆಯಲು ರೂ.2.0 ಲಕ್ಷದವರೆಗೂ ವೆಚ್ಚ ಮಾಡುತಿದ್ದಾರೆ. ಈ ಕೊಳವೆ ಬಾವಿ ವಿಫಲವಾದರೆ ಅಥವಾ ಕೆಲವು ವರ್ಷಗಳ ನಂತರ ಬತ್ತಿ ಹೋದ ಸಂದರ್ಭದಲ್ಲಿ ರೈತರು ಸಾಲ ಭಾಧೆಗೆ ಸಿಲುಕುತಿದ್ದಾರೆ. ಆದ್ದರಿಂದ ರೈತರು ಕೊಳವೆ ಬಾವಿಯ ಬದಲಾಗಿ ಹೂಡಿಕೆಯನ್ನು ಕೃಷಿಭಾಗ್ಯ ಯೋಜನೆಯ ಘಟಕಗಳಲ್ಲಿ ಹೂಡಿಕೆ ಮಾಡಿ ಸುಸ್ಥಿರ ಕೃಷಿಗಾಗಿ ಬಳಸಬಹುದಾಗಿದೆ. ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸರಕಾರ ಶೇ. 90 ರಷ್ಟು ಸಹಾಯಧನ ನೀಡುತ್ತಿದೆ. ತಾಲೂಕಿನಲ್ಲಿ 2024-25 ನೇ ಸಾಲಿನಲ್ಲಿ ಒಟ್ಟು 44 ಕೃಷಿ ಹೊಂಡ ನಿರ್ಮಾಣ ಮಾಡುವ ಗುರಿ ಹೊಂದಿತ್ತು. 44 ರೈತರು ಅರ್ಜಿ ಸಲ್ಲಿಸಿದ್ದರು. ಗುರಿಯಂತೆ 44 ಫಲಾನುಭವಿಗಳು ಕೃಷಿ ಹೊಂಡವನ್ನು ಸರಕಾರದ ಸಹಾಯಧನ ಪಡೆದು ನಿರ್ಮಿಸಿಕೊಂಡಿದ್ದಾರೆ.

ತಾಲೂಕಿನ ಬಹುತೇಕ ರೈತರು ಮಳೆಯ ನೀರನ್ನು ಅವಲಂಬಿತರಾಗಿದ್ದು ಬೇಸಿಗೆಯಲ್ಲಿ ಕೊಳವೆ ಬಾವಿ ನೀರನ್ನು ಅವಲಂಬಿತರಾಗಿದ್ದಾರೆ. ಆದರೆ ಕೊಳವೆ ಬಾವಿ ನೀರಿನಿಂದ ಕೇವಲ 5-6 ಸ್ಪ್ರಿಂಕ್ಲರ್‍ಗಳಿಂದ ನೀರು ಬೆಳೆಗಳಿಗೆ ಹಾಯಿಸಬಹುದಾಗಿದೆ. ಆದರೆ ಕೃಷಿ ಹೊಂಡ ನಿರ್ಮಾಣದಿಂದ ಸರಾಸರಿ 10-15 ಸ್ಪ್ರಿಂಕ್ಲರ್‍ಗಳಿಂದ ನೀರು ಬೆಳೆಗಳಿಗೆ ಹಾಯಿಸಬಹುದಾಗಿದೆ. ಇದರಿಂದ ವಿದ್ಯುಚಕ್ತಿ ಬಳಕೆಯನ್ನು ಕಡಿಮೆ ಮಾಡಬಹುದಾಗಿದೆ. ಹಾಗು ಇಡೀ ಭತ್ತದ ಗದ್ದೆಗೆ ಒಮ್ಮೆಲೇ ನೀರು ಹಾಹಿಸಬಹುದಾಗಿದೆ. ಇದರಿಂದ ಕೂಲಿಕಾರ್ಮಿಕರ ಖರ್ಚು ಕೂಡ ಕಡಿಮೆಯಾಗಿದೆ ಹಾಗು ರೈತರಲ್ಲಿ ಕೃಷಿಯಲ್ಲಿನ ಆಸಕ್ತಿ ಹೆಚ್ಚಿದೆ. ಇಷ್ಟೇ ಅಲ್ಲದೆ ರೈತರು ಕೃಷಿ ಹೊಂಡದಲ್ಲಿ ಮೀನು ಕೃಷಿ ಮಾಡುತ್ತಿದ್ದು ಇದು ರೈತರ ಆದಾಯವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ. ಮೀನಿನ ತ್ಯಾಜ್ಯ ನೀರು ಸಸ್ಯಗಳಿಗೆ ಪೋಷಕಾಂಶಗಳ ಮೂಲವಾಗಿದೆ ಮೀನಿನ ತ್ಯಾಜ್ಯ ವಿಶೇಷವಾಗಿ ಮಲ ವಸ್ತು ಮತ್ತು ತಿನ್ನದ ಆಹಾರವು ಸಾರಜನಕ, ರಂಜಕ ಮತ್ತು ಪೊಟ್ಯಾಷಿಯಂ ನಂತಹ ಅಗತ್ಯ ಸಸ್ಯ ಪೋಷಕಾಂಶಗಳಿಂದ ಸಮ್ರದ್ದವಾಗಿದೆ, ಇದು ನೈಸರ್ಗಿಕ ಮತ್ತು ಸುಸ್ಥಿರ ಗೊಬ್ಬರವಾಗಿ ಕೃಷಿಗೆ ಬಳಸಬಹುದಾಗಿದೆ.

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇರಳದಲ್ಲಿ 1 ಲಕ್ಷ ಹೆಕ್ಟೇರ್‌ ರಬ್ಬರ್‌ ತೋಟದಲ್ಲಿ ಟ್ಯಾಪಿಂಗ್‌ ಇಲ್ಲ..!
July 3, 2025
2:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 03-07-2025 | ಇಂದು ಸಾಮಾನ್ಯ ಮಳೆ | ಜು.6 ರ ನಂತರ ಮಲೆನಾಡು-ಕರಾವಳಿ ಹವಾಮಾನ ಹೇಗೆ ? | ಜು.4 ರಿಂದ ಒಳನಾಡು ವಾತಾವರಣ ಹೇಗೆ ?
July 3, 2025
12:35 PM
by: ಸಾಯಿಶೇಖರ್ ಕರಿಕಳ
ಮಕ್ಕಳಿಗೊಂದು ಪುಟ | ನಮ್ಮದೊಂದು ಬೆಳಕು….
July 3, 2025
10:43 AM
by: ಮಹೇಶ್ ಪುಚ್ಚಪ್ಪಾಡಿ
ವೃಷಭದಲ್ಲಿ ಶುಕ್ರ ಸಂಚಾರದಿಂದ ಮಹಾಲಕ್ಷ್ಮೀ ರಾಜಯೋಗ
July 3, 2025
7:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group