ಕೃಷಿಯನ್ನು(Agriculture) ಒಂದು ಉದ್ಯಮದ ರೀತಿಯಲ್ಲಿ ನೋಡಬೇಕೆ ? ನೋಡಬಹುದೇ?. ಖರ್ಚು. ಹಣಕಾಸು ನಿರ್ವಹಣೆ, ಹೂಡಿಕೆಯ ಮೇಲಿನ ಪ್ರತಿಫಲ, ಕೆಲಸಗಾರರ ತರಬೇತಿ, ಜವಾಬ್ದಾರಿ, ತಾಂತ್ರಿಕತೆಯ ಬಳಕೆ, … ಮುಂತಾದ ಚಿಂತನೆಗಳನ್ನು ಯಾಕೆ ತರಬಾರದು? ಎಂಬುದರ ಬಗ್ಗೆ ಸಂವಾದವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸೆ.20 ರಂದು ನಡೆಯಲಿದೆ.
ಸೆ.20 ರಂದು ಪುತ್ತೂರಿನ ಮುಳಿಯ ಜ್ಯುವೆಲ್ಸ್ ಪುತ್ತೂರಿನಲ್ಲಿರುವ ಮುಳಿಯ ಜ್ಯುವೆಲ್ಸ್ ಕಟ್ಟಡದಲ್ಲಿ ಬೆಳಿಗ್ಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕೃಷಿಯ ಕುರಿತ ಹಲವು ವರ್ಷಗಳ ಅನುಭವದೊಂದಿಗೆ ಹಾಗೂ ಮಣ್ಣು ಪರೀಕ್ಷೆ, NPK ತೆಂಗು-ಕಂಗು-ರಬ್ಬರ್ ಎಲ್ಲವೂ ನಮ್ಮ ಅನುಭವದ ಜ್ಞಾನ ದೊಂದಿಗೆ ನಾವು ಕೃಷಿಯನ್ನು ಮಾಡುತ್ತಿದ್ದೇವೆ. ಹಲವರಿಗೆ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬಳಕೆ ಬಗ್ಗೆ ಕುತೂಹಲ ಹಾಗೂ ಕೊರೋನಾ ಸಂದರ್ಭದಲ್ಲಿ ನಾವು ಮನೆಯೊಳಗೇ ನಿಂತು ಹೋದಾಗ ನಮ್ಮ ತೋಟದಲ್ಲೂ ಕೆಲವನ್ನು ಅಳವಡಿಸಿ ಬೆಳವಣಿಗೆಯನ್ನು ಕಂಡಿದ್ದೇವೆ.
ಆದರೆ, ಕೃಷಿಯನ್ನು ಒಂದು ಉದ್ಯಮದ ರೀತಿಯಲ್ಲಿ ನೋಡಬೇಕೆ? ನೋಡಬಹುದೇ? ಖರ್ಚು. ಹಣಕಾಸು ನಿರ್ವಹಣೆ, ಹೂಡಿಕೆಯ ಮೇಲಿನ ಪ್ರತಿಫಲ, ಕೆಲಸಗಾರರ ತರಬೇತಿ, ಜವಾಬ್ಧರಿ, ತಾಂತ್ರಿಕತೆಯ ಬಳಕೆ, … ಮುಂತಾದ ಚಿಂತನೆಗಳನ್ನು ಯಾಕೆ ತರಬಾರದು? ಎಂಬುದು ಈ ಸಂವಾದ ಕಾರ್ಯಕ್ರಮದ ಚರ್ಚೆ-ಚಿಂತನೆಯ ವಿಷಯ.ಹಲವು ಕ್ಷೇತ್ರಗಳ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮೈ ಅಂತರಾತ್ಮ ಸಂಸ್ಥೆಯ ವೇಣು ಶರ್ಮ ಕಾರ್ಯಕ್ರಮದ ಒಟ್ಟು ರೂಪುರೇಷೆಗಳನ್ನು ಮುನ್ನುಡಿಯಾಗಿ ಹೇಳುವರು. ಕೇಶವ ಪ್ರಸಾದ್ ಮುಳಿಯ ಸಂವಾದ ಕಾರ್ಯಕ್ರಮ ವನ್ನು ವಿದ್ಯುಕ್ತವಾಗಿ ದೀಪೋಜ್ವಲನದ ಮೂಲಕ ಚಾಲನೆ ನೀಡಿ ಕಾರ್ಯಕ್ರಮದ ಆಶಯ ವ್ಯಕ್ತ ಪಡಿಸುವರು.ನಂತರದಲ್ಲಿ
ಅಶೋಕ್ ಕುಮಾರ್ ಫೌಂಡರ್, ಮಾ ಇಂಟಿಗ್ರೇಟರ್ಸ್, ಇಂಟಿಗ್ರೇಟೆಡ್ ಅಗ್ರಿಕಲ್ಚರಿಸ್ಟ್ , ಎಚ್ ಮುರಳಿಕೃಷ್ಣ – ಚೀಫ್ ಟೆಕ್ನಿಕಲ್ ಆಫೀಸರ್ (ಟೆಕ್. ಇನ್ಫೋ.) , ವಿಶ್ವೇಶ್ವರ ಭಟ್ – ಬಂಗಾರಡ್ಕ, ಇವರು ತಮ್ಮ ವಿಚಾರವನ್ನು ಮಂಡಿಸುವರು. ಕೃಷಿ ಸಲಹೆಗಾರ ಪುರಂದರ ಕುಬಣೂರಾಯ ಮತ್ತು ವೇಣು ಶರ್ಮ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸುವರು. ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಕೃಷಿಕರು ಮತ್ತು ಅವರು ನಿರ್ವಹಿಸುವ ಹಣಕಾಸಿನ ಖರ್ಚು ವೆಚ್ಚ ಮುಂತಾದ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಲಿರುವವರು.
ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…
ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…
ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…
ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…
ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್…
ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…