ಸಾಧನೆಗೆ ಒಲಿದ ಕಲಾದೇವತೆ | ಓದುವುದಿಲ್ಲ , ಕೇಳುತ್ತಲೇ 250 ಹಾಡು ಕಂಠಪಾಠ ಮಾಡಿರುವ “ಕಿಶೋರ” |

Share

ಈ ಬಾಲಕ ಓದುವುದಿಲ್ಲ, ಕೇಳುತ್ತಲೇ ಹಾಡು ಕಲಿತು ಕಂಠಪಾಠ ಮಾಡಿ  250 ಹಾಡುಗಳನ್ನು  ಎಲ್ಲಿ, ಯಾವಾಗ ಬೇಕಾದರೂ ಹಾಡಬಲ್ಲರು. ಸಂಗೀತದಲ್ಲಿ  ಈಗ ಉನ್ನತ ಕಲಿಕೆಯಲ್ಲಿದ್ದಾರೆ. ಸ್ವತಂತ್ರವಾಗಿ ಕೀಬೋರ್ಡ್‌ ನುಡಿಸುತ್ತಾರೆ. ಸುಮಾರು 50 ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಸುಶ್ರಾವ್ಯವಾಗಿ ಹಾಡುತ್ತಾರೆ. ಆದರೆ, ಈ ಸಾಧಕನಿಗೆ ಕಣ್ಣು ಕಾಣಿಸದು….!, ಭಗವಂತ ಸಾಧನೆಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಈ ಬಾಲಕ ಗಡಿನಾಡು ಜಿಲ್ಲೆ ಕಾಸರಗೋಡಿನ ಬದಿಯಡ್ಕ ಬಳಿಯ ಪೆರ್ಮುಖದ ಕೃಷ್ಣಕಿಶೋರ್.

Advertisement
Advertisement
ಸಾಧನೆಗೆ ಬೇಕಾದ್ದು ಛಲ ಹಾಗೂ ಪರಿಶ್ರಮ, ಹಾಗಿದ್ದರೇ ಭಗವಂತ ಒಲಿಯುತ್ತಾನೆ. ಇಲ್ಲೂ ಹಾಗೆಯೇ. ಪೆರ್ಮುಖದ ಕೃಷ್ಣಕಿಶೋರ ಅವರಿಗೆ ಈಗ  24  ವರ್ಷ. ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡಿದ್ದರು. ತಿಂಗಳಾಗುವ ಮೊದಲೇ ಜನಿಸಿದ ಕೃಷ್ಣ ಕಿಶೋರಗೆ ದೃಷ್ಟಿ ಕಾಣಿಸದಾಗಿತ್ತು. ಶಾಲೆಗೆ ತೆರಳುವುದು ಕಷ್ಟವಾಗಿತ್ತು. ಆದರೆ 7  ನೇ ತರಗತಿ ವರೆಗೆ ಅಂಧರ ಶಾಲೆಗೆ ತೆರಳಿ ಬ್ರೈಲ್‌ ಲಿಪಿಯಲ್ಲಿ  ಕಲಿತು ಆ ಬಳಿಕ ಸಾಮಾನ್ಯ ಶಾಲೆಗೆ ತೆರಳಿ ಪಾಠವನ್ನು  ಕೇಳಿ, ಬೇರೆಯವರಿಂದ ಕೇಳಿಸಿಕೊಂಡು ಬೇರೆಯವರ ಮೂಲಕ ಪರೀಕ್ಷೆ ಬರೆಯುತ್ತಾ ಪಿಯುಸಿವರೆಗೆ ‌ ಎಡನೀರು ಮಠದ ಕಾಲೇಜಿನಲ್ಲಿ  ವ್ಯಾಸಾಂಗ ಮಾಡಿದ್ದಾರೆ. ಇದರ ಜೊತೆಗೇ ಸಂಗೀತವನ್ನೂ ಅಭ್ಯಾಸ ಮಾಡುತ್ತಾ ಹಾಡುಗಳನ್ನು ಕಂಠಪಾಠ ಮಾಡುತ್ತಾ ಸಂಗೀತ ಕ್ಷೇತ್ರದಲ್ಲಿ  ಸಾಧನೆಗೆ ತೊಡಗಿಸಿದರು.
ಆರಂಭದಲ್ಲಿ  ಕುದುಮಾರು ವೆಂಕಟ್ರಾಮ್‌ ಅವರಿಂದ ಮನೆಯಲ್ಲಿಯೇ ಪ್ರಾರಂಭಿಸಿ ಸಂಗೀತ ಕಲಿತು ಬಳಿಕ ಶಕುಂತಲಾ ಕೃಷ್ಣ ಭಟ್‌ ಅವರಿಂದ ಸಂಗೀತ ಪಾಠ ಕಲಿತು ಜೂನಿಯರ್ ಪರೀಕ್ಷೆ ತೇರ್ಗಡೆಯಾಗಿ ಬಳಿಕ ವೆಳ್ಳಿಕ್ಕೋತ್‌ ವಿಷ್ಣು ಭಟ್‌, , ಗೀತಾ ಸಾರಡ್ಕ ಅವರ ಜೊತೆ ಸೀನಿಯರ್‌ ವ್ಯಾಸಾಂಗ ಮಾಡಿ  ನಂತರ ಲಲಿತಾ ಬರಿನಾಥ್‌ ಅವರಿಂದ ಕಲಿತು ಸದ್ಯ ವಿದ್ವಾನ್‌ ಕಾಂಚನ ಈಶ್ವರ ಭಟ್‌  ಅವರ ಜೊತೆ ವಿದ್ವತ್‌ ಪಾಠವನ್ನು  ಕಲಿಯುತ್ತಿರುವ ಕೃಷ್ಣ ಕಿಶೋರ್ ಈಗಾಗಲೇ 250 ಹಾಡುಗಳನ್ನು ಕಂಠಪಾಠ ಮಾಡಿದ್ದಾರೆ.
Advertisement
ಹಾಡುಗಳನ್ನು ಮೊಬೈಲ್‌ ಮೂಲಕ ಕೇಳುತ್ತಲೇ ಕಂಠಪಾಠ ಮಾಡುವ ಕೃಷ್ಣ ಕಿಶೋರ್‌ ಒಂದು ವಾರದಲ್ಲಿ  ಹಾಡನ್ನು ಕಂಠಪಾಠ ಮಾಡುತ್ತಾರೆ. ಒಮ್ಮೆ ಕಂಠಪಾಠ ಮಾಡಿದ ಹಾಡನ್ನು  ನೆನಪಲ್ಲಿ ಅಚ್ಚೊತ್ತಿದ ಬಳಿಕ ಆಗಾಗ ಹೇಳುತ್ತಲೇ ನೆನಪಿಟ್ಟುಕೊಳ್ಳುತ್ತಾರೆ. ಸುಮಾರು 8 ನೇ ವರ್ಷ ವಯಸ್ಸಿನಿಂದಲೇ ಸಂಗೀತ ಅಭ್ಯಾಸ ಮಾಡುತ್ತಿದ್ದಾಗ ಕೆಲವು ವರ್ಷದ ಬಳಿಕ ಧ್ವನಿಯ ಕಾರಣದಿಂದ ಸಂಗೀತ ಹಾಡಲು ಕಷ್ಟವಾದಾಗ ಕೀಬೋರ್ಡ್‌ ನುಡಿಸಲು ಸ್ವತ: ಆರಂಭಿಸಿದರು. ಹಾಡು ಕೇಳುತ್ತಾ, ಕೀಬೋರ್ಡ್‌ ನುಡಿಸುತ್ತಾ ಅಭ್ಯಾಸ ಮಾಡಿ, ಈಗ ಕೀಬೋರ್ಡ್‌ ಕೂಡಾ ನುಡಿಸುತ್ತಾರೆ.  ಈಗಾಗಲೇ ಸುಮಾರು  50 ಕ್ಕೂ ಅಧಿಕ ಸಂಗೀತ ಕಛೇರಿಯನ್ನೂ ನಡೆಸಿಕೊಟ್ಟಿದ್ದಾರೆ.
ಸದ್ಯ ಹಾಡು ಕಲಿಯುತ್ತಾ ಕಲಾರಾಧನೆಯನ್ನು, ಅಧ್ಯಯನವನ್ನೂ ಮುಂದುವರಿಸಿರುವ ಕೃಷ್ಣ ಕಿಶೋರ್‌ ಅವರು ದಿವಂಗತ ರಾಮ ಭಟ್‌ ಪೆರ್ಮುಖ ಹಾಗೂ ಸತ್ಯಭಾಮಾ ಅವರ ಪುತ್ರ. ಬಡಿಯಡ್ಕದ ಪೆರ್ಮುಖದಲ್ಲಿ ಕೃಷಿ ಹೊಂದಿರುವ ಇವರು  ಸದ್ಯ ತಾಯಿ ಹಾಗೂ ಸಹೋದರಿಯ ಜೊತೆ ಸಂಗೀತಾರಾಧನೆಯನ್ನು  ಮಾಡುತ್ತಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಆರ್ದ್ರಾ ನಕ್ಷತ್ರಕ್ಕೆ ಗುರು | ಈ 7 ರಾಶಿಗೆ ಗುರು ಬಲ, ಬೇಡವೆಂದರೂ ಲಾಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 hour ago

ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ | ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲೂ ಉತ್ತಮ ಮಳೆ ನಿರೀಕ್ಷೆ |

ಮುಂದಿನ ಐದು ದಿನಗಳಲ್ಲಿ ಕೇರಳದಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತ ಹವಾಮಾನ ಇಲಾಖೆ…

1 hour ago

1954 ರಿಂದ 2025 | ಅಡಿಕೆ ಮೇಲೆ ಆಪಾದನೆಗಳು ಬಂದ ದಾರಿ ಯಾವುದೆಲ್ಲಾ…?

1985 ರಲ್ಲಿ ಅಡಿಕೆ ಮಾರುಕಟ್ಟೆಗೆ ಕೊಠಾರಿ ಸಮೂಹ ಪ್ರವೇಶ ಮಾಡಿತು. ಅಲ್ಲಿಂದ ಅಡಿಕೆ…

2 hours ago

ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಲು ಆಗ್ರಹ | ದಾವಣಗೆರೆಯಲ್ಲಿ ರೈತರ ಪ್ರತಿಭಟನೆ

ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರಬೇಕು ಮತ್ತು ಪ್ರಸ್ತುತ 3500…

12 hours ago

ಅತೀ ಹೆಚ್ಚು ಪ್ರಮಾಣದ ತೊಗರಿ ಖರೀದಿಸಿದ ವಿಜಯಪುರ ಜಿಲ್ಲೆ

ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ನೊಂದಾಯಿಸಿಕೊಂಡ 45,843…

12 hours ago

ಮಳೆಗೆ ರಾಜಧಾನಿ ಬೆಂಗಳೂರು ಅಸ್ತವ್ಯಸ್ತ | ಉತ್ತರ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ | ಕೋಲಾರದಲ್ಲಿ ಬೆಳೆ ನಷ್ಟ | ಚಿಕ್ಕಮಗಳೂರಿನಲ್ಲಿ ನಿರಂತರ ಮಳೆ

ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ನಗರದ ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.…

12 hours ago