Advertisement
MIRROR FOCUS

“ಕೃಷ್ಣಂ ವಂದೇ ಜಗದ್ಗುರುಂ” | ಕೃಷ್ಣಾಷ್ಟಮಿಯ  ಸಡಗರ-ಸಂಭ್ರಮ |

Share

ಪ್ರಸನ್ನ ಪಾರಿಜಾತಾಯ ತೋತ್ರವೇತ್ರೈಕೃಪಾಣಯೇ ,
ಜ್ಞಾನಮುದ್ರಾಯ ಕೃಷ್ಣಾಯ ಗೀತಮೃತದುಹೇ ನಮಃ”

ಆಶ್ರಯ ಬಯಸಿದವರಿಗೆ ಪಾರಿಜಾತದಂತಹ ಕಲ್ಪವೃಕ್ಷವಾಗಿರುವ, ಒಂದು ಕೈಯಲ್ಲಿ ಚಾವಟಿಗೆಯನ್ನು ಹಿಡಿದಿರುವ, ಮತ್ತೊಂದು ಕೈಯಲ್ಲಿ ಜ್ಞಾನಮುದ್ರೆಯನ್ನು ತೋರಿಸುತ್ತಿರುವ ಗೀತೆಯೆಂಬ ಅಮೃತವನ್ನು  ಕರೆದಿರುವ ಕೃಷ್ಣನಿಗೆ ನಮಸ್ಕಾರ. ಎಂಬುದು ಶ್ರೀ ಮಧುಸೂದನ ಸರಸ್ವತಿಯವರು ರಚಿಸಿದ  ಮೇಲಿನ ಶ್ಲೋಕದ ತಾತ್ಪರ್ಯ.

ಕೃಷ್ಣನೆಂದರೆ  ಗುಡಿಯೊಳಗಿರುವ ಭಗವಂತನೆಂದು  ಅನಿಸದು. ಅವ ನಮ್ಮೊಳಗೆ ಇರುವವ, ನಮ್ಮವನೆಂದೇ ಅನಿಸುವುದು.   ಮುರಾರಿಯ ಹುಡುಕಿ ಊರೂರು ಅಲೆಯ ಬೇಕಾಗಿಲ್ಲ. ನಾವೆಲ್ಲಿರುವೆವೋ ಅಲ್ಲೇ ಅವನಿರವು ಅಲ್ಲವೇ? ಬಕುತಿಯಲಿ ಮಾಡುವೆಲ್ಲಾ ಕಾರ್ಯಗಳಲ್ಲೂ ಭಗವಂತನೇ ಇರುವಾಗ   ಹುಡುಕಿಕೊಂಡು ಅಲೆಯುವುದರಲ್ಲಿ ಅರ್ಥವಿಲ್ಲವಲ್ಲವೇ?

ಮನದೊಡೆಯಾನಾದ ಕೃಷ್ಣನ  ಹುಟ್ಟು  ಹಬ್ಬವನ್ನು  ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯೆಂದು ನಾವು  ಸಂಭ್ರಮದಿಂದ ಆಚರಿಸುತ್ತೇವೆ.  ದೇವಕಿ, ವಾಸುದೇವರ ಪುತ್ರ ಕೃಷ್ಣ ಹುಟ್ಟಿನಿಂದಲೇ ತನ್ನ ಚಮತ್ಕಾರಗಳನ್ನು ತೋರಿಸಿದವ.  ಮುರಾರಿಯೆಂದರೆ  ಮಕ್ಕಳಿಂದ ಹಿರಿಯರವರೆಗೂ  ಆತ್ಮೀಯನೇ ಅಲ್ಲವೇ?   ಗಣೇಶನನ್ನೆಷ್ಟು ಆರಾಧಿಸುತ್ತೇವೆಯೋ ಮುಕುಂದನನ್ನು  ಅಷ್ಟೇ ಪ್ರೀತಿಸುತ್ತೇವೆ.    ರಾಮಾಯಣ ಮಹಾಭಾರತದ ಕಥೆಗಳನ್ನು ಬಾಲ್ಯದಲ್ಲಿ ಕೇಳಿ ಹ್ಯಾಗೆ ಆನಂದಿಸಿದೆವೋ ಹಾಗೇ  ಗಿರಧಾರಿಯ ಕಥಾನಕವನ್ನು ಇಷ್ಟ ಪಟ್ಟು ಕೇಳಿದ್ದು ನಿಜವೇ ತಾನೇ?

ಪ್ರತಿಯೊಂದು ಹೆಜ್ಜೆಯಲ್ಲೂ  ಕಷ್ಟಗಳನ್ನೇ  ಉಣ್ಣುತ್ತಾ , ಅವುಗಳನ್ನು ನಿಭಾಯಿಸುತ್ತಾ ಭಕ್ತರ ಕಷ್ಟಗಳಿಗೆ ಸ್ಪಂದಿಸಿ ಯದುಪತಿ ಈತ. ಹೆಜ್ಜೆ ಹೆಜ್ಜೆಗೆ ಎದುರಾಗುತ್ತಿದ್ದ ರಕ್ಕಸರ  ಸಂಹರಿಸಿದ  ಯದುವಂಶಿ . ಕೃಷ್ಣ  ಎಲ್ಲರಿಗೂ ಇಷ್ಟವಾಗುವಂತವ. ಅವನು  ದೇವರಾದರೂ ನಮ್ಮ ನಿಮ್ಮೆಲ್ಲರಂತೆ.  ಸ್ವಯಂ ಶಕ್ತಿವಂತನಾದರೂ ಎಲ್ಲೂ ಅನಗತ್ಯ ಪ್ರದರ್ಶನ ಮಾಡದೆ  ಅಗತ್ಯವಿದ್ದಾಗ ಪ್ರಯೋಗಿಸುವವ. ಯಾರು ಸಂಪೂರ್ಣ ಆತನಿಗೆ ಶರಣಾಗುತ್ತರೋ ಅವರನ್ನು ಸದಾ ಕಾಯುವವ.  ಕಷ್ಟಗಳು ಬಂದಾಗ , ನೆನೆದವರ ಮನದಲ್ಲಿ ನಾ ಬಂದೆ ಎಂದು ಅಲ್ಲಿರುವ ಸಖನೀತ.

ಬದುಕಿನ  ದುಃಖದ ಕ್ಷಣದಲ್ಲಿ ಎಲ್ಲರನ್ನು ನೆನಪಿಸಿ ಕೊಳ್ಳುತ್ತೇವೆ. ಆದರೆ ಖುಷಿಯಲ್ಲಿದ್ದಾಗಲೂ ನೆನಪಾಗುವವರು, ಮನಸ್ಸಿಗೆ  ಹತ್ತಿರದವರು. ಅಚ್ಯುತ ಕಷ್ಟದಲ್ಲೂ, ಖುಷಿಯಲ್ಲೂ  ನೆನಪಾಗುವವ. ಅವನ ಹುಟ್ಟು ಹಬ್ಬವೆಂದರೆ ಸಂಭ್ರಮವಲ್ಲವೆ?  ತಿಂಡಿಗಳೆಂದರೆ  ,ಅದರಲ್ಲೂ ಸಿಹಿಯೆಂದರೆ ಬಲು ಇಷ್ಟ. ಕೃಷ್ಣಾಷ್ಟಮಿಯಂದು  ತರತರಹದ ಉಂಡೆಗಳು , ಚಕ್ಕುಲಿಗಳು, ಉದ್ದಿನ ಕಡುಬು, ಪಾಯಸ , ರಸಾಯನ , ಹಾಲು, ಬೆಣ್ಣೆ , ಮೊಸರು ಹೀಗೆ ಬಗೆಬಗೆಯ ನೈವೇದ್ಯವನ್ನು ಸಮರ್ಪಿಸುವುದು  ಮೆಚ್ಚಿನ ಕೆಲಸ.  ಬಹಳ ನಿರೀಕ್ಷಿಸಿ ಆಚರಿಸುವ ತಿಂಡಿಗಳ ಹಬ್ಬವೇ ಅಷ್ಟಮಿ.

ಎಲ್ಲರಿಗೂ ಅಷ್ಟಮಿ  ಹಬ್ಬದ ಶುಭಾಶಯಗಳು

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

19 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

20 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

20 hours ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

20 hours ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

1 day ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago