ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಜಲಾಶಯ ಡಿಸೆಂಬರ್‌ನಲ್ಲೂ ಭರ್ತಿಯಾಗಿದ್ದು, ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿದೆ. 30 ವರ್ಷಗಳ ಬಳಿಕ ಅಣೆಕಟ್ಟೆ ಎರಡನೇ ಬಾರಿ ಭರ್ತಿಯಾಗಿ ದಾಖಲೆ ಬರೆದಿದೆ.
49.457 ಅಡಿ ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಲ್ಲಿ, ಪ್ರಸ್ತುತ ಅಷ್ಟೇ ಪ್ರಮಾಣದ ನೀರಿನ ಸಂಗ್ರಹವಿದೆ. ತಮಿಳುನಾಡಿಗೆ ಬಿಡಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಈ ಬಾರಿ ಬಿಡಲಾಗಿದೆ. ಕೇರಳದ ಕೆಲವು ಭಾಗ, ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕೆಆರ್‌ಎಸ್ ಡ್ಯಾಂಗೆ ಉತ್ತಮ ಒಳಹರಿವು ಬಂದಿದೆ. ಕಳೆದ ವರ್ಷ ಅಣೆಕಟ್ಟೆಗೆ 136 ಹೊಸ ಗೇಟುಗಳನ್ನು ಅಳವಡಿಸಿದ ಪರಿಣಾಮ ನಿತ್ಯ ಪೋಲಾಗುತ್ತಿದ್ದ 1 ಸಾವಿರ ಕ್ಯುಸೆಕ್ ನೀರನ್ನು ತಡೆಗಟ್ಟಲಾಗಿದೆ.31 ಕಿಲೋಮೀಟರ್ ಉದ್ದದ ನಾಲೆಗಳ ಆಧುನೀಕರಣ ಕಾಮಗಾರಿ ಹಾಗೂ ನೀರುಗಂಟಿಗಳು ಅತ್ಯುತ್ತಮವಾಗಿ ನೀರು ನಿರ್ವಹಣೆ ಮಾಡಿರುವುದು ಸೇರಿದಂತೆ ಇತರ ಕಾರಣಗಳಿಂದಾಗಿ ಕನ್ನಂಬಾಡಿ ಅಣೆಕಟ್ಟೆಯು ಡಿಸೆಂಬರ್ ಅಂತ್ಯದಲ್ಲೂ ಭರ್ತಿಯಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ ಇದೆ. ಈಗಿನಂತೆ ಎಪ್ರಿಲ್ 2ರಿಂದ…
ರಾಜ್ಯದಲ್ಲಿ ನಂದಿನಿ ಹಾಲು, ಮೊಸರು ಹಾಗೂ ವಿದ್ಯುತ್ ದರ ದುಬಾರಿಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.
ಒಂದು ದೇವಸ್ಥಾನದ ಎಂದರೆ ಶ್ರದ್ಧೆಯ ಕೇಂದ್ರ, ಒಂದು ಊರಿನ ದೇವಸ್ಥಾನ ಎಂದರೆ ಸೌಹಾದರ್ತೆಯ…
ಏಪ್ರಿಲ್ 3 ಹಾಗೂ 4 ರಂದು ಕರಾವಳಿ ಹಾಗೂ ಉತ್ತರ ಮತ್ತು ದಕ್ಷಿಣ…