ಕಳೆದ ಒಂದು ತಿಂಗಳಿಂದ ಕೆಆರ್‌ಎಸ್ ಡ್ಯಾಂನ ನೀರು ತಮಿಳುನಾಡು ಸೇರುತ್ತಿತ್ತೇ ವಿನಃ ಮಳೆ ಇಲ್ಲದೆ ನದಿಗೆ ಯಾವ ಮೂಲದಿಂದಲೂ ಕಾವೇರಿ ನೀರು ಹರಿದು ಬರುತ್ತಿರಲಿಲ್ಲ. ನೀರಿನ ಮಟ್ಟ ದಿನದಿಂದ ದಿನಕ್ಕೆ ಪಾತಾಳ ತಲುಪುವ ಹಂತಕ್ಕೆ ಬಂದಿತ್ತು. ಇದೀಗ ತುಸು ಉಸಿರು ಬಿಡುವಂತಾಗಿದೆ. ಕಳೆದ 3 ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ 34 ದಿನಗಳ ಬಳಿಕ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 100 ಅಡಿಗಳ ಗಡಿ ದಾಟಿದೆ. ಈ ಮೂಲಕ ಆತಂಕ ಮೂಡಿದ ರೈತರಿಗೆ ಸ್ವಲ್ಪ ಪ್ರಮಾಣದ ಸಮಾಧಾನ ತಂದಿದೆ.
ಈ ಬಾರಿ ಮುಂಗಾರು ಮಳೆ ಕೈ ಕೊಟ್ಟ ಪರಿಮಾಣ ಕೆಆರ್‌ಎಸ್ ನೀರಿನ ಮಟ್ಟ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಕಳೆದ ಸೆಪ್ಟೆಂಬರ್ 1 ರಿಂದ 100 ಅಡಿಗಿಂತ ಕಡಿಮೆ ಪ್ರಮಾಣದಲ್ಲಿ ಡ್ಯಾಂನ ನೀರಿನ ಮಟ್ಟ ಇತ್ತು. ಇದೀಗ ಕಳೆದ 3 ದಿನಗಳ ಹಿಂದೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಹಿನ್ನೆಲೆ ಇಂದು 100.36 ಅಡಿಗೆ ಡ್ಯಾಂ ನೀರಿನ ಮಟ್ಟ ಏರಿಕೆಯಾಗಿದೆ.
ಮಳೆ ಬಿದ್ದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಇದರಿಂದ ಡ್ಯಾಂ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ತಮಿಳುನಾಡು ನೀರಿನ ಕ್ಯಾತೆಯ ನಡುವೆ ಕೆಆರ್‌ಎಸ್ 100 ಅಡಿ ಭರ್ತಿಯಾಗಿರೋದು ಸಮಾಧಾನಕರ ಸಂಗತಿಯಾಗಿದೆ. ನಿನ್ನೆ 11,800 ಕ್ಯೂಸೆಕ್ ಒಳಹರಿವು ಇತ್ತು. ಇದೀಗ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ನಿಂತಿರುವ ಪರಿಣಾಮ ಡ್ಯಾಂಗೆ ಇಂದು 9,052 ಕ್ಯೂಸೆಕ್ ಒಳಹರಿವು ಇದೆ. ನಾಳೆ ಇನ್ನಷ್ಟು ಪ್ರಮಾದಲ್ಲಿ ಒಳಹರಿವು ಕಡಿಮೆಯಾಗಲಿದೆ. ಇತ್ತ ಡ್ಯಾಂನಿಂದ ತಮಿಳುನಾಡಿಗೆ 1,482 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ.
ಅಂತರ್ಜಾಲ ಮಾಹಿತಿ
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…