Advertisement
ಸುದ್ದಿಗಳು

KSRTC | ಬ್ರಾಂಡ್ ಹೆಸರು, ಟ್ಯಾಗ್ ಲೈನ್, ಗ್ರಾಫಿಕ್ ಡಿಸೈನ್ ಮಾಡಿ ಕೊಟ್ಟವರಿಗೆ ಬಹುಮಾನ…!

Share

ಕೆಎಸ್‌ಆರ್‌ಟಿಸಿಯು(KSRTC) ಪ್ರಯಾಣಿಕರಿಗೆ ನೂತನ ಸೇವೆಗಳಿಗೆ ಮುಂದಾಗಿದ್ದು, ಬ್ರಾಂಡಿಂಗ್‌ ಪರಿಕಲ್ಪನೆಯನ್ನು ಜನರ ತೀರ್ಮಾನಕ್ಕೆ ಬಿಟ್ಟಿದೆ. ಬಿಎಸ್‌ 6-9600 ವೋಲ್ವೋ ಮಲ್ಟಿ ಆಕ್ಸಲ್‌ ಸ್ಲೀಪರ್‌ ಮತ್ತು ಒಲೆಕ್ಸಾ ಎಲೆಕ್ಟ್ರಿಕ್‌ ಈ ಎರಡು ಮಾದರಿಯ ಬಸ್‌ಗಳಿಗೆ ನಿಮ್ಮ ಉತ್ತಮವಾದ ಐಡಿಗಳನ್ನು ಕಳುಹಿಸುವ ಮೂಲಕ ನಗದು ಬಹುಮಾನವನ್ನು ಪಡೆಯಬಹುದು ಎಂದು ತಿಳಿಸಿದೆ.

ನೂತನ ಶ್ರೇಣಿಯ ಎರಡು ರೀತಿಯ ಬಸ್‌ಗಳಿಗೆ ತಮ್ಮಿಂದ ಸೂಕ್ತವಾದ ಬ್ರಾಂಡ್‌, ಹೆಸರು, ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್‌ ವಿನ್ಯಾಸಗಳನ್ನು ನಿರೀಕ್ಷಿಸುತ್ತಿದೆ. ಅಲ್ಲದೇ ಉತ್ತಮ ಟ್ಯಾಗ್‌ನೊಂದಿಗೆ ಬ್ರಾಡ್‌ ಹೆಸರನ್ನು ಯಾರು ಸೂಚಿಸುತ್ತಾರೆಯೋ ಅಂತಹವರಿಗೆ 10,000 ರೂಪಾಯಿ ನಗದು ಬಹುಮಾನವನ್ನು ಕೊಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.ಅಲ್ಲದೆ ಉತ್ತಮವಾಗಿ ಗ್ರಾಫಿಕ್ಸ್‌ ನೀಡಿದವರಿಗೆ 25,000 ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದೆ.

ನೀವು ಮಾಡುವ ಬ್ರಾಂಡ್‌ ಐಡಿಯಾಗಳನ್ನು cpro@ksrtc.org ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ. ಅಥವಾ ಟ್ವಿಟರ್‌ ಖಾತೆಯಾದ KSRTC-journeys, KSRTC.karnataka ಫೇಸ್‌ ಬುಕ್‌ ಐಡಿಗೆ ಕಳುಹಿಸಬಹುದಾಗಿದೆ. ನೀವು ಡಿಸೆಂಬರ್‌ 05, 2022ರ ಒಳಗೆ ನಿಮ್ಮ ಐಡಿಯಾಗಳನ್ನು ಕಳುಹಿಸಬೇಕು ಎಂದು ತಿಳಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

24 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

24 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

2 days ago