ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಜನಸಂದಣಿ ಕಂಡುಬಂದಿದೆ. ಶನಿವಾರ ರಾತ್ರಿ ವಸತಿಗೆ ರೂಮ್ ಸಿಗದೇ ಭಕ್ತಾದಿಗಳು ಪರದಾಟ ನಡೆಸಿದರು. ಭಕ್ತಾದಿಗಳು ರಸ್ತೆಯಲ್ಲಿ ಹಾಗೂ ದೇವಸ್ಥಾನದ ಹಾಲ್ ಗಳಲ್ಲಿ ಮಹಿಳೆಯರು, ಮಕ್ಕಳೊಂದಿಗೆ ವಿಶ್ರಾಂತಿ ಪಡೆದರು.
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ವಿವಿದೆಡೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಎ.16 ರ ರಾತ್ರಿ ವಿಪರೀತ ಸಂದಣಿ ಉಂಟಾದ ಹಿನ್ನೆಲೆಯಲ್ಲಿ ಎಲ್ಲಾ ಕೊಠಡಿಗಳು ಭರ್ತಿಯಾದವು. ದೇವಸ್ಥಾನದ ಕಡೆಯಿಂದಲೂ ಯಾವುದೇ ವ್ಯವಸ್ಥೆ ಇರಲಿಲ್ಲ. ಹೀಗಾಗು ರಾತ್ರಿ ಉಳಿದುಕೊಳ್ಳಲು ವ್ಯವಸ್ಥೆಗಳಿಲ್ಲದೆ ಭಕ್ತರು ರಸ್ತೆಯಲ್ಲೇ ಮಲಗಿದ ಘಟನೆ ನಡೆಯಿತು. ಇದೇನು ಅಚ್ಚರಿಯಲ್ಲ, ಆದರೆ ಈಗ ಮಳೆಯ ಅಬ್ಬರವೂ ಇರುವ ಕಾರಣದಿಂದ ಮಳೆಯಾದರೆ ಭಕ್ತಾದಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಭಕ್ತಾದಿಗಳಿಗೆ ರಾತ್ರಿ ವೇಳೆ ಇಂತಹ ಸಂದರ್ಭದಲ್ಲಿ ತಂಗಲಿ ದೇವಸ್ಥಾನದ, ಖಾಸಗಿಯವರ ಹಲವು ವಸತಿ ಗೃಹಗಳು, ದೇವಸ್ಥಾನ ಸಭಾಂಗಣಗಳು, ಹಳೆ ಪ್ರಾಥಮಿಕ ಶಾಲಾ
ಕಟ್ಟಡಗಳ ಬಳಕೆ ಮಾಡಬೇಕಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದ ನಂಬರ್ ವನ್ ದೇವಸ್ಥಾನವಾಗಿದೆ. ಇಲ್ಲಿ ಭಕ್ತಾದಿಗಳಿಗೆ ರಾತ್ರಿ ತಂಗಲು ರಸ್ತೆಯ ವ್ಯವಸ್ಥೆಯಾಗಬಾರದು, ಇದಕ್ಕಾಗಿ ಸೂಕ್ತ ವ್ಯವಸ್ಥೆ ಇಲ್ಲಿನ ಆಡಳಿತ ಹಾಗೂ ಸರ್ಕಾರ ಮಾಡಬೇಕು ಎಂದು ಗ್ರಾ. ಪಂಚಾಯತ್ ಸದಸ್ಯರಾದ ಹರೀಶ ಇಂಜಾಡಿ ಮಾಧ್ಯಮದ ಮೂಲಕ ಮನವಿ ಮಾಡಿದರು.
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…
ಕರಾವಳಿ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿಯ ತನಕವೂ ಪಶ್ಚಿಮದ ಗಾಳಿಯ ಪ್ರಭಾವ ಇರುವುದರಿಂದ…
ಕನ್ನಡ ಭಾಷೆಯ ಅನೇಕ ಪದಗಳು ಸಂಸ್ಕೃತ ಮೂಲದ್ದಾಗಿವೆ. ಕನ್ನಡ ನಾಡಿನ ಊರಿನ ಹೆಸರುಗಳೂ…
ದೇಶದಲ್ಲೇ ಅಪರೂಪವಾದ ಜೀವ ವೈವಿಧ್ಯತೆಯು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಈ ಜೀವ ವೈವಿಧ್ಯತೆಯನ್ನು…
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಸೇರಿ ಮಲೆನಾಡು ಭಾಗದಲ್ಲಿ ಉಂಟಾಗುತ್ತಿರುವ ಕಾಡಾನೆಗಳ…
ತುಮಕೂರಿನಲ್ಲಿ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಸ್ವದೇಶಿ ಮೇಳಕ್ಕೆ ಕೇಂದ್ರ ಜಲಶಕ್ತಿ ಹಾಗೂ…